ಆ್ಯಪ್ನಗರ

ಸೀಲಿಂಗ್‌ ಫ್ಯಾನ್‌ ನಿಷೇಧಿಸಿ: ರಾಖಿ ಸಾವಂತ್‌ ಮನವಿ

ಹಲವು ದಿನಗಳಿಂದ ಪ್ರಚಾರದಿಂದ ದೂರ ಉಳಿದಿದ್ದ ಬಾಲಿವುಡ್‌ ನಟಿ ರಾಖಿ ಸಾವಂತ್‌ ಇದೀಗ ದಿಢೀರನೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ವಿಚಿತ್ರ, ವಿಭಿನ್ನ ಬೇಡಿಕೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ.

ಏಜೆನ್ಸೀಸ್ 7 Apr 2016, 4:47 am
ಹೊಸದಿಲ್ಲಿ: ಹಲವು ದಿನಗಳಿಂದ ಪ್ರಚಾರದಿಂದ ದೂರ ಉಳಿದಿದ್ದ ಬಾಲಿವುಡ್‌ ನಟಿ ರಾಖಿ ಸಾವಂತ್‌ ಇದೀಗ ದಿಢೀರನೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ವಿಚಿತ್ರ, ವಿಭಿನ್ನ ಬೇಡಿಕೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ.
Vijaya Karnataka Web ceiling fan ban rakhi sawant appeal
ಸೀಲಿಂಗ್‌ ಫ್ಯಾನ್‌ ನಿಷೇಧಿಸಿ: ರಾಖಿ ಸಾವಂತ್‌ ಮನವಿ


ಹೌದು, ದೇಶಾದ್ಯಂತ ಸೀಲಿಂಗ್‌ ಫ್ಯಾನ್‌ ನಿಷೇಧಿಸಬೇಕು ಎಂದು ರಾಖಿ ಸಾವಂತ್‌ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಸುಡು ಬೇಸಿಗೆಯಲ್ಲಿ ಫ್ಯಾನ್‌ ನಿಷೇಧ ಏಕಪ್ಪಾ ಎಂದು ನಿಮಗೆ ಅಚ್ಚರಿಯಾಗಿರಬಹುದು. ಆದರೆ, ಇದಕ್ಕೆ ರಾಖಿ ಸಾವಂತ್‌ ಕೊಡುವ ಕಾರಣವೇ ಬೇರೆ.

‘‘ಮಹಿಳೆಯರು, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳಲು ಸೀೕಲಿಂಗ್‌ ಫ್ಯಾನ್‌ ಹೆಚ್ಚಾಗಿ ಬಳಸುತ್ತಿದ್ದಾರೆ. ಆದ್ದರಿಂದ ಸೀಲಿಂಗ್‌ ಫ್ಯಾನ್‌ಗಳನ್ನೇ ನಿಷೇಧ ಮಾಡಬೇಕು,’’ ಎಂದು ರಾಖಿ ಸಾವಂತ್‌ ಒತ್ತಾಯಿಸಿದ್ದಾರೆ.

‘ಭಾರತ್‌ ಮಾತಾ ಕೀ ಜೈ’ಗಿಂತ ಮುಖ್ಯ:

ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮುಂಬಯಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ರಾಖಿ, ‘‘ಮಹಿಳೆಯರ ಹಿತರಕ್ಷಣೆ ದೃಷ್ಟಿಯಿಂದ ಸರಕಾರ ಈ ಕ್ರಮಕ್ಕೆ ಮುಂದಾಗಬೇಕು. ದೇಶದಲ್ಲಿ ‘ಭಾರತ್‌ ಮಾತಾ ಕಿ ಜೈ’ ಘೊಷಣೆಗಿಂತ ಸೀಲಿಂಗ್‌ ಫ್ಯಾನ್‌ ನಿಷೇಧವೇ ಮುಖ್ಯ,’’ ಎಂದರು.

ಪೋಷಕರಿಗೂ ಕರೆ:

ಮಗಳ ಮೇಲೆ ಪ್ರೀತಿ ಹೊಂದಿರುವ ಪೋಷಕರು, ತಮ್ಮ ಮನೆಯಲ್ಲಿ ಸೀಲಿಂಗ್‌ ಫ್ಯಾನ್‌ಗಳನ್ನು ಕಿತ್ತು ಹಾಕಿ, ಟೇಬಲ… ಫ್ಯನ್‌ ಅಥವಾ ಎಸಿ ಉಪಯೊಗಿಸಿ ಎಂದು ನಟಿ ಸಲಹೆ ನೀಡಿದ್ದಾರೆ.

5 ಕೋಟಿ ಪರಿಹಾರ ಕೊಡಿ:

ಇದೇ ವೇಳೆ, ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಕುಟುಂಬಕ್ಕೆ ಸರಕಾರ 5 ಕೊಟಿ ಪರಿಹಾರ ಘೊಷಿಸಬೇಕು. ಎಂದು ಅವರು ಪ್ರಧಾನಿಗೆ ರಾಖಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ