ಆ್ಯಪ್ನಗರ

ಕರ್ನಾಟಕದಂತೆ ಬೇರೆ ರಾಜ್ಯಗಳಲ್ಲೂ ಬಿಜೆಪಿ ಕುದುರೆ ವ್ಯಾಪಾರ

ಕೋಲ್ಕೊತಾದಲ್ಲಿ ಟಿಎಂಸಿ ಹುತಾತ್ಮರ ದಿನಾಚರಣೆ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ''ಟಿಎಂಸಿ ಶಾಸಕರನ್ನು ಹಣ ಮತ್ತು ಇತರೆ ಆಮಿಷಗಳೊಂದಿಗೆ ಸೆಳೆಯಲು ಬಿಜೆಪಿ ಮುಂದಾಗಿದೆ. ಒಬ್ಬಬ್ಬ ಟಿಎಂಸಿ ಶಾಸಕರಿಗೂ ಬಿಜೆಪಿಗೆ ಬಂದರೆ 2 ಕೋಟಿ ರೂ. ಹಣ ಮತ್ತು ಪೆಟ್ರೋಲ್‌ ಪಂಪ್‌ ನೀಡುವ ಆಫರ್‌ ನೀಡಲಾಗುತ್ತಿದೆ,'' ಎಂದು ಆಪಾದಿಸಿದರು.

Vijaya Karnataka Web 22 Jul 2019, 5:00 am
ಕೋಲ್ಕೊತಾ: ಕರ್ನಾಟಕದ ಮಾದರಿಯಲ್ಲೇ ದೇಶದ ಇತರೆ ರಾಜ್ಯಗಳಲ್ಲೂ ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಪಶ್ಚಿಮ ಬಂಗಾಳದಲ್ಲಿ ಕರ್ನಾಟಕ ಮಾದರಿಯ ಆಪರೇಷನ್‌ ಕಮಲಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Vijaya Karnataka Web central agencies threatening tmc leaders asking them to join bjp mamata
ಕರ್ನಾಟಕದಂತೆ ಬೇರೆ ರಾಜ್ಯಗಳಲ್ಲೂ ಬಿಜೆಪಿ ಕುದುರೆ ವ್ಯಾಪಾರ


ಕೋಲ್ಕೊತಾದಲ್ಲಿ ಟಿಎಂಸಿ ಹುತಾತ್ಮರ ದಿನಾಚರಣೆ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ''ಟಿಎಂಸಿ ಶಾಸಕರನ್ನು ಹಣ ಮತ್ತು ಇತರೆ ಆಮಿಷಗಳೊಂದಿಗೆ ಸೆಳೆಯಲು ಬಿಜೆಪಿ ಮುಂದಾಗಿದೆ. ಒಬ್ಬಬ್ಬ ಟಿಎಂಸಿ ಶಾಸಕರಿಗೂ ಬಿಜೆಪಿಗೆ ಬಂದರೆ 2 ಕೋಟಿ ರೂ. ಹಣ ಮತ್ತು ಪೆಟ್ರೋಲ್‌ ಪಂಪ್‌ ನೀಡುವ ಆಫರ್‌ ನೀಡಲಾಗುತ್ತಿದೆ,'' ಎಂದು ಆಪಾದಿಸಿದರು.

''ಕೇಂದ್ರದ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರು ಮತ್ತು ಜನಪ್ರತಿನಿಧಿಗಳನ್ನು ಚಿಟ್‌ಫಂಡ್‌ ಹಗರಣವನ್ನು ಮುಂದಿಟ್ಟುಕೊಂಡು ಬೆದರಿಸುತ್ತಿವೆ. ಬಿಜೆಪಿಗೆ ಸೇರದಿದ್ದರೆ ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡಲಾಗುತ್ತಿದೆ,'' ಎಂದರು.

ನೋಟ್‌ ಬ್ಯಾನ್‌ ಮೂಲಕ ಬಿಜೆಪಿ ಕಪ್ಪುಹಣವನ್ನು ನುಂಗಿಹಾಕಿದದು, ಅದನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಜು.26ರಂದು ದೇಶವ್ಯಾಪಿಯಾಗಿ ಟಿಎಂಸಿ ಆಂದೋಲ ನಡೆಸಲಿದೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಅವರ ಮೊದಲ ಬಹಿರಂಗ ಸಭೆ ಇದಾಗಿದೆ.

ಸರಕಾರ 2 ವರ್ಷವೂ ಉಳಿಯಲ್ಲ: ''ಕೇಂದ್ರ ಸರಕಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಯತ್ನಿಸುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ಎರಡು ವರ್ಷವೂ ಉಳಿಯುವುದಿಲ್ಲ. ಸಂಸತ್‌ ಅಧಿವೇಶನದ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳು ಕಾರಣವೇ ಹೊರತು ಅದರಲ್ಲಿ ಬಿಜೆಪಿಯ ಹೆಚ್ಚುಗಾರಿಕೆ ಏನೂ ಇಲ್ಲ,'' ಎಂದು ಕಿಡಿಕಾರಿದರು.

ಇವಿಎಂ ಬದಲು ಮತಪತ್ರಕ್ಕೆ ಆಗ್ರಹ: ವಿದ್ಯುನ್ಮಾನ ಮತಯಂತ್ರಗಳ ವಿರುದ್ಧ ಮತ್ತೆ ದ್ವನಿಯೆತ್ತಿರುವ ಮಮತಾ ಬ್ಯಾನರ್ಜಿ ಅವುಗಳ ಬದಲಿಗೆ ಮೊದಲಿನ ಮತಪತ್ರಗಳ (ಬ್ಯಾಲೆಟ್‌ ಪೇಪರ್‌) ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂದು ಅಗ್ರಹಿಸಿದರು.

''ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ ಮತ್ತು ಅಮೆರಿಕದಲ್ಲಿ ಈ ಮುನ್ನ ಇವಿಎಂಗಳನ್ನೇ ಬಳಸಲಾಗುತ್ತಿತ್ತು. ಆದರೆ ಈಗ ಆ ದೇಶಗಳಲ್ಲಿ ಮತ್ತೆ ಮತಪತ್ರಗಳ ಬಳಕೆ ಆರಂಭವಾಗಿದೆ. ಇದು ಭಾರತದಲ್ಲಿ ಏಕೆ ಸಾಧ್ಯವಿಲ?'' ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮನ್ನು ನಂಬಿ: ರಾಜ್ಯದಲ್ಲಿ ಚುನಾವಣಾ ಪೂರ್ವ ಹಿಂಸಾಚಾರಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಇದನ್ನೇ ಮುಂದುವರಿಸಬಹುದೆಂಬ ಆತಂಕ ವ್ಯಕ್ತಪಡಿಸಿದರು.

''ಹಿಂದೂ ಮತ್ತು ಮುಸ್ಲಿಂ ಸೋದರ, ಸೋದರಿಯರೇ ನಮ್ಮನ್ನು ನಂಬಿ, ನಾವು ಚುನಾವಣೆ ಸಂದರ್ಭದಲ್ಲಿ ಗಲಭೆ ಸೃಷ್ಟಿಸುವುದಿಲ್ಲ. ಚುನಾವಣೆ ಮುಗಿದ ನಂತರ ಮರೆಯುವ ಜಾಯಮಾನ ನಮ್ಮದಲ್ಲ. ಕ್ರೈಸ್ತರು, ಬೌದ್ಧರು ಯಾರೂ ಆತಂಕಪಡುವ ಅಗತ್ಯವಿಲ್ಲ,'' ಎಂದು ಅಭಯ ನೀಡಿದರು.

ಪ್ರಶಾಂತ್‌ ಕಿಶೋರ್‌ ಗೈರು
ಮಮತಾ ಬ್ಯಾನರ್ಜಿ ಅವರ ರಾರ‍ಯಲಿಯಲ್ಲಿ ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವರ ಗೈರು ಗಮನ ಸೆಳೆಯಿತು. ಪ್ರಧಾನಿ ಮೋದಿ, ನಿತೀಶ್‌ ಕುಮಾರ್‌, ಆಂಧ್ರ ಸಿಎಂ ಜಗನ್‌ಮೋಹನ್‌ ರೆಡ್ಡಿ ಮುಂತಾದವರ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದ ಪ್ರಶಾಂತ್‌ ಕಿಶೋರ್‌ ಪ.ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದೀದಿ ಜತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರದ ರಾರ‍ಯಲಿಯಲ್ಲಿ ಅವರು ಭಾಗವಹಿಸುವ ನಿರೀಕ್ಷೆಯಿತ್ತು. ಈ ಮಧ್ಯೆ, ಪ್ರಶಾಂತ್‌ ಕಿಶೋರ್‌ ರಾರ‍ಯಲಿಯಲ್ಲಿ ಭಾಗವಹಿಸುವ ಸುದ್ದಿ ಮಾಧ್ಯಮಗಳ ಸೃಷ್ಟಿ ಎಂದು ಟಿಎಂಸಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ