ಆ್ಯಪ್ನಗರ

Aadhaar-PAN Link: ಆಧಾರ್- ಪಾನ್ ಜೋಡಣೆಯ ಗಡುವು ವಿಸ್ತರಣೆ: ಜನಸಾಮಾನ್ಯರು ಕೊಂಚ ನಿರಾಳ

Aadhaar-PAN Linking Date Extended: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ನೀಡಿದ್ದ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ಜೂನ್ 30ರವರೆಗೂ ವಿಸ್ತರಿಸಿದೆ. ಜನರು 1 ಸಾವಿರ ರೂ ದಂಡ ಸಹಿತವಾಗಿ ಕಾರ್ಡ್‌ಗಳ ಜೋಡಣೆಗೆ ಇನ್ನೂ ಮೂರು ತಿಂಗಳ ಸಮಯ ಪಡೆದಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 28 Mar 2023, 5:45 pm

ಹೈಲೈಟ್ಸ್‌:

  • ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ನೀಡಿದ್ದ ಗಡುವು ಮತ್ತೆ ವಿಸ್ತರಣೆ
  • ಜೂನ್ 30ರ ಒಳಗೆ ಎರಡೂ ದಾಖಲೆಗಳನ್ನು ಜೋಡಿಸುವಂತೆ ಕೇಂದ್ರದ ಸೂಚನೆ
  • ಜುಲೈ 1ರಿಂದ ಜೋಡಣೆಯಾಗದ ಪಾನ್ ಸಂಖ್ಯೆ ನಿಷ್ಕ್ರಿಯಗೊಳ್ಳಲಿದೆ ಎಂದ ಸಿಬಿಡಿಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web PAN - Aadhaar linking

ಹೊಸದಿಲ್ಲಿ: ಕೊನೆಯ ದಿನ ಸಮೀಪಿಸುತ್ತಿದ್ದರೂ ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಣೆ ಮಾಡಲಾಗದೆ ಪರದಾಡುತ್ತಿದ್ದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ ಬಂದಿದೆ. ಈ ಎರಡೂ ಗುರುತಿನ ಕಾರ್ಡ್‌ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ.
ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.

Aadhaar - PAN Card Link: ಆಧಾರ್ - ಪಾನ್ ಲಿಂಕ್ ಓಕೆ.. ಫೈನ್ ಏಕೆ? ಲಿಂಕ್‌ನಿಂದ ಏನು ಪ್ರಯೋಜನ?

ಈಗ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಅದು ತಿಳಿಸಿದೆ.


ಮೂರು ತಿಂಗಳ ಬಳಿಕವೂ ಈ ಎರಡೂ ಮಹತ್ವದ ದಾಖಲೆಗಳನ್ನು ಲಿಂಕ್ ಮಾಡುವುದರಲ್ಲಿ ತೆರಿಗೆದಾರ ವಿಫಲನಾದಲ್ಲಿ, ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಅಂತಹ ಪ್ರಕರಣಗಳಲ್ಲಿ ತೆರಿಗೆದಾರ ತಮ್ಮ ಪಾನ್‌ ಕಾರ್ಡ್ ಅನ್ನು ಒದಗಿಸಲು, ಅದನ್ನು ಉಲ್ಲೇಖಿಸಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ.

ಲಿಂಕ್ ಮಾಡದೆ ಇದ್ದರೆ ಏನಾಗಲಿದೆ?


  • ಜೂನ್ 30ರ ಗಡುವಿನ ಒಳಗೆ ಪಾನ್ ಮತ್ತು ಆಧಾರ್ ಸಂಖ್ಯೆ ಜೋಡಣೆ ಮಾಡುವಲ್ಲಿ ವಿಫಲರಾದರೆ, ಜುಲೈ 1ರ ಬಳಿಕ ತೆರಿಗೆದಾರರು ಕಾನೂನಾತ್ಮಕ ದಂಡದ ಕ್ರಮಗಳನ್ನು ಎದುರಿಸಬೇಕಾಗುತ್ತದೆ.
  • ನಿಷ್ಕ್ರಿಯಗೊಂಡ ಪಾನ್ ಕಾರ್ಡ್‌ಗಳಿಗೆ ತೆರಿಗೆ ಮರುಪಾವತಿ ಇರುವುದಿಲ್ಲ.
  • ರಿಟರ್ನ್ ಫೈಲ್ ಮಾಡಿದ ಬಳಿಕ ಎರಡು ದಾಖಲೆಗಳನ್ನು ತೆರಿಗೆದಾರ ಜೋಡಣೆ ಮಾಡಿದರೆ, ಆದಾಯ ತೆರಿಗೆ ಇಲಾಖೆಯು, ಎರಡೂ ದಾಖಲೆಗಳನ್ನು ಜೋಡಣೆ ಮಾಡದ ಅವಧಿಯಲ್ಲಿನ ಮರುಪಾವತಿ ಮೇಲಿನ ಬಡ್ಡಿಯನ್ನು ಪಾವತಿಸುವುದಿಲ್ಲ.
  • ಅಂತಹ ಪ್ರಕರಣಗಳಲ್ಲಿ ಮೂಲದಲ್ಲಿ ಕಡಿತಗೊಂಡ ತೆರಿಗೆ (ಟಿಡಿಎಸ್) ಮತ್ತು ಮೂಲದಲ್ಲಿ ಸಂಗ್ರಹಿಸಿದ ತೆರಿಗೆ (ಟಿಸಿಎಸ್) ಎರಡನ್ನೂ ಅಧಿಕ ಪ್ರಮಾಣದಲ್ಲಿ ಕಡಿತ ಹಾಗೂ ಸಂಗ್ರಹ ಮಾಡಲಾಗುತ್ತದೆ.

ತೆರಿಗೆದಾರರು, 1,000 ರೂ ವಿಳಂಬ ದಂಡವನ್ನು ಪಾವತಿಸಿದ 30 ದಿನಗಳ ಒಳಗಾಗಿ ತಮ್ಮ ಪಾನ್ ಕಾರ್ಡ್ ಅನ್ನು ಪುನಃ ಸಕ್ರಿಯಗೊಳಿಸಿಕೊಳ್ಳಲು ಅವಕಾಶವಿದೆ. ಈವರೆಗೂ ಆಧಾರ್ ಕಾರ್ಡ್ ಜತೆಗೆ 51 ಪಾನ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಪ್ಯಾನ್‌ ಜೊತೆ ಆಧಾರ್‌ ಲಿಂಕ್‌ ಮಾಡಲು ಮಾ. 31 ಕೊನೆ ದಿನ, ತಪ್ಪಿದರೆ PAN ನಿಷ್ಕ್ರಿಯ

ಆಧಾರ್ ಕಾರ್ಡ್ ಮತ್ತು ಪಾನ್ ಜೋಡಣೆಗೆ 2017ರಿಂದಲೂ ಕೇಂದ್ರ ಸರ್ಕಾರ ಸೂಚನೆ ನೀಡುತ್ತಾ ಬಂದಿದೆ. 2022ರ ಏಪ್ರಿಲ್ 1ರಂದು 500 ರೂ ಶುಲ್ಕ ವಿಧಿಸಲಾಗಿತ್ತು. 2022ರ ಜುಲೈ 1ರಿಂದ ಶುಲ್ಕವನ್ನು 1,000 ರೂಪಾಯಿಗೆ ಹೆಚ್ಚಿಸಲಾಗಿತ್ತು. ಒಂದು ವೇಳೆ ಜೂನ್ 30ರ ಒಳಗೂ ಈ ದಾಖಲೆಗಳನ್ನು ಜೋಡಣೆ ಮಾಡದೆ ಇದ್ದರೆ ಮುಖ್ಯವಾಗಿ ಆದಾಯ ತೆರಿಗೆ ಪಾವತಿದಾರರಿಗೆ ಸಮಸ್ಯೆ ಎದುರಾಗಲಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ