ಆ್ಯಪ್ನಗರ

ನ್ಯಾ.ಖುರೇಷಿ ನೇಮಕ ಕುರಿತು ವಾರದೊಳಗೆ ಕೇಂದ್ರದಿಂದ ತೀರ್ಮಾನ

ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ನ್ಯಾ. ಖುರೇಷಿ ನೇಮಕ ವಿಚಾರದಲ್ಲಿ ಆಗಸ್ಟ್‌ 14ರೊಳಗೆ ತೀರ್ಮಾನಕ್ಕೆ ಬರುವಂತೆ ಆಗಸ್ಟ್‌ 2 ರಂದು ನಿರ್ದೇಶನ ನೀಡಿತ್ತು.

PTI 17 Aug 2019, 5:00 am
ಹೊಸದಿಲ್ಲಿ: ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಎ.ಎ. ಖುರೇಷಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮಾಡಿದ ಶಿಫಾರಸ್ಸಿನ ಕುರಿತು ವಾರದೊಳಗೆ ತನ್ನ ತೀರ್ಮಾನ ತಿಳಿಸುವುದಾಗಿ ಕೇಂದ್ರ ಸರಕಾರ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದೆ.
Vijaya Karnataka Web kureshi


ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ನ್ಯಾ. ಖುರೇಷಿ ನೇಮಕ ವಿಚಾರದಲ್ಲಿ ಆಗಸ್ಟ್‌ 14ರೊಳಗೆ ತೀರ್ಮಾನಕ್ಕೆ ಬರುವಂತೆ ಆಗಸ್ಟ್‌ 2 ರಂದು ನಿರ್ದೇಶನ ನೀಡಿತ್ತು. ಈ ಸಂಬಂಧ ಶುಕ್ರವಾರ ಕೋರ್ಟ್‌ಗೆ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಕೊಲಿಜಿಯಂ ಶಿಫಾರಸು ಕುರಿತು ಕೇಂದ್ರ ಸರಕಾರ ಇನ್ನೊಂದು ವಾರದೊಳಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು. ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತಾದರೂ ದಿನಾಂಕವನ್ನು ನಿಗದಿಗೊಳಿಸಲಿಲ್ಲ.

ಕೊಲಿಜಿಯಂ ಮೇ 10ರಂದೇ ಈ ಶಿಫಾರಸು ಮಾಡಿದ್ದರೂ ಕೇಂದ್ರ ಸರಕಾರ ಜೂನ್‌ 7ರಂದು ನ್ಯಾ. ರವಿಶಂಕರ್‌ ಝಾ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ ಹಂಗಾಮಿ ಸಿಜೆಯಾಗಿ ನೇಮಕ ಮಾಡಿದೆ. ಖುರೇಷಿ ಅವರ ವಿಚಾರದಲ್ಲಿ ಕೇಂದ್ರಕ್ಕೆ ಸ್ಪಷ್ಟ ನಿರ್ದೇಶನ ನೀಡುವಂತೆ ಕೋರಿ ಗುಜರಾತ್‌ ಹೈಕೋರ್ಟ್‌ ವಕೀಲರ ಸಂಘವು ಅರ್ಜಿ ಸಲ್ಲಿಸಿದೆ. ''ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಂದಿನ ಗುಜರಾತ್‌ ಗೃಹ ಸಚಿವ ಅಮಿತ್‌ ಶಾ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಖುರೇಷಿ ಅವರು ಆದೇಶ ಹೊರಡಿಸಿದ್ದರು. ಹೀಗಾಗಿಯೇ ಇವರ ನೇಮಕ ವಿಚಾರದಲ್ಲಿ ಕೇಂದ್ರ ವಿಳಂಬ ನೀತಿ ಅನುಸರಿಸುತ್ತಿದೆ,'' ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ