ಆ್ಯಪ್ನಗರ

ಪ. ಬಂಗಾಳದಲ್ಲೂ ಎನ್‌ಆರ್‌ಸಿ ಜಾರಿಗೊಳಿಸಿ, ಅಕ್ರಮ ವಲಸಿಗರ ಹೊರಗಟ್ಟಲಿದೆ ಕೇಂದ್ರ : ಅಮಿತ್‌ ಶಾ

ಬಾಂಗ್ಲಾ ಗಡಿಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ.ಬಂಗಾಳದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾರಿಗೊಳಿಸಲು ಯೋಜನೆ ಹಾಕಿದೆ. ಪ್ರಸ್ತುತ ಕೇವಲ ಅಸ್ಸಾಂ ರಾಜ್ಯದಲ್ಲಿ ಮಾತ್ರವೇ ಎನ್‌ಆರ್‌ಸಿ ಜಾರಿಯಲ್ಲಿದೆ.

TIMESOFINDIA.COM 1 Oct 2019, 5:55 pm
ಕೋಲ್ಕತ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೂ ವಿಸ್ತರಿಸಲಿದ್ದು, ಅಕ್ರಮ ವಲಸಿಗರನ್ನು ಹೊರಗಟ್ಟಲಾಗುವುದು. ಆದರೆ, ಅದಕ್ಕೂ ಮೊದಲು ಎಲ್ಲ ಹಿಂದು, ಸಿಖ್‌, ಜೈನ, ಹಾಗೂ ಬೌದ್ಧ ನಿರಾಶ್ರಿತರಿಗೆ ಅನ್ವಯವಾಗುವಂತೆ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಬೇಕಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಘೋಷಿಸಿದ್ದಾರೆ.
Vijaya Karnataka Web amith shaw


ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕುರಿತ ವಿಚಾರಸಂಕೀರ್ಣದಲ್ಲಿ ತಿಳಿಸಿದ್ದಾರೆ. ಕುರಿತು ಹಿಂದೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್‌ ಪೌರತ್ವ ಮಸೂದೆ ಬಗ್ಗೆ ಹಲವು ವಂದಂತಿಗಳನ್ನು, ತಪ್ಪುಮಾಹಿತಿಗಳನ್ನು ಹರಡಿತ್ತು. ಆದರೆ, ಈ ಮಸೂದೆಯಿಂದ ಯಾವುದೇ ಹಿಂದು, ಸಿಖ್‌, ಜೈನ, ಹಾಗೂ ಬೌದ್ಧ ನಿರಾಶ್ರಿತರಿಗೆ ತೊಂಡರೆಯಾಗುವುದಿಲ್ಲ. ಅವರು ಭಾರತ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು. ನಿರಾಶ್ರಿತರು ಕೂಡ ಭಾರತದ ಪೌರತ್ವ ಪಡೆಯಲಿದ್ದು, ಭಾರತೀಯ ಪೌರರಿಗಿರುವ ಎಲ್ಲ ಹಕ್ಕುಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.

ಅಕ್ರಮ ವಲಸಿಗರ ಪತ್ತೆಗೆ ಇರುವ ಅಸ್ತ್ರವೇ ಎನ್‌ಆರ್‌ಸಿ: ರಾಜನಾಥ್‌ ಸಿಂಗ್

ಏನಿದು ಎನ್‌ಆರ್‌ಸಿ: ಭಾರತದಲ್ಲಿ ಇದುವರೆಗೆ ಕೇವಲ ಅಸ್ಸಾಂ ರಾಜ್ಯದಲ್ಲಿ ಮಾತ್ರವೇ
ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾರಿಯಲ್ಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೆ ಭಾರತೀಯರು ಮತ್ತು ವಲಸಿಗರನ್ನು ಪ್ರತ್ಯೇಕಿಸುವ ಪಟ್ಟಿ. 1951ರ ಜನಸಂಖ್ಯೆಯ ವರದಿಯನ್ನು ಆಧರಿಸಿ ಮೊದಲ ಬಾರಿಗೆ ಎನ್‌ ಆರ್‌ ಸಿ ಯನ್ನು ಅಸ್ಸಾಂ ರಾಜ್ಯದಲ್ಲಿ ಜಾರಿ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು.

ಅಕ್ರಮ ವಲಸಿಗರಿಗೆ ದೇಶದಲ್ಲಿ ಇನ್ಮುಂದೆ ಜಾಗವಿಲ್ಲ - ಅಮಿತ್ ಶಾ
ಬಾಂಗ್ಲಾದೇಶದಿಂದ ಜನರು ಅಕ್ರಮವಾಗಿ ರಾಜ್ಯದ ಒಳ ನುಸುಳುವುದರಿಂದ ಅಸ್ಸಾಂನ ಮೂಲ ಸಂಸ್ಕೃತಿ ಹಾಳಾಗುತ್ತಿದೆ, ಮೂಲನಿವಾಸಿಗಳ ಜನಜೀವನದ ಮೇಲೆ ಈ ಅಕ್ರಮ ವಲಸಿಗರ ಪ್ರಭಾವ ಬೀರುತ್ತಿದೆ ಎಂದು ವಲಸಿಗರನ್ನು ರಾಜ್ಯದಿಂದ ಹೊರಹಾಕಲು ಕೂಗು ಎದ್ದಿತ್ತು. ಈ ವಿವಾದ ದೊಡ್ಡದಾಗಿ ನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಅಸ್ಸಾಂ ರಾಜ್ಯದಲ್ಲಿ ಮೂಲ ನಿವಾಸಿಗಳು ಯಾರು ಮತ್ತು ವಲಸಿಗರು ಯಾರು ಎಂದು ವಿಂಗಡಿಸಿಲು ಕೇಂದ್ರ ಸರಕಾರಕ್ಕೆ 2013ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಇತ್ತೀಚೆಗಷ್ಟೇ ಕೇಂದ್ರ ಸರಕಾರ ಪಟ್ಟಿ ಬಿಡುಗಡೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ