ಆ್ಯಪ್ನಗರ

ಚಂದ್ರಯಾನ - 2 ಹಿಂದಿದೆ ನಾರಿ ಶಕ್ತಿ: 'ರಾಕೆಟ್‌ ವುಮೆನ್‌'ಗಳಿಂದ ಯೋಜನೆ ಸಾಕಾರ

ಚಂದಿರನ ಅಂಗಳದಲ್ಲಿ ಅಧ್ಯಯನ ನಡೆಸಲು ಚಂದ್ರಯಾನ - 2 ಉಡಾವಣೆಗೆ ಕ್ಷಣಗಣಗೆ ಆರಂಭವಾಗಿದೆ. ಈ ಯೋಜನೆಯ ಹಿಂದಿರುವ ಮೆದಳು ಮತ್ತು ಶಕ್ತಿಯ ವಿವರ ಇಲ್ಲಿದೆ.

Vijaya Karnataka Web 14 Jul 2019, 7:19 pm
ಶ್ರೀಹರಿಕೋಟಾ: ಇಡೀ ವಿಶ್ವವೇ ಈಗ ಭಾರತದತ್ತ ಮುಖ ಮಾಡಿದೆ. ಚಂದ್ರಯಾನ - 2 ನೌಕೆ ಉಡಾವಣೆಗೆ ಈ ಕ್ಷಣಗಣನೆ ಆರಂಭವಾಗಿದೆ.
Vijaya Karnataka Web ಚಂದ್ರಯಾನ
ಚಂದ್ರಯಾನ


ಸೋಮವಾರ ನಸುಕಿನ ಜಾವ 2 ಗಂಟೆ 51 ನಿಮಿಷಕ್ಕೆ ಉಡಾವಣೆಯಾಗಲಿದೆ.

ಅಸಲಿಗೆ ಈ ಚಂದ್ರಯಾನದ ಉಡಾವಣೆ ಯೋಜನೆಯ ಹಿಂದಿರುವುದು ಸಂಪೂರ್ಣ ನಾರಿ ಶಕ್ತಿ ಎಂಬುದು ವಿಶೇಷ.

ಚಂದ್ರಯಾನ - 2 ಯೋಜನೆ ಸಾಕಾರಗೊಳಿಸಲು ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ನೌಕೆ ಹೊತ್ತು ಜಿಎಸ್‌ಜಿವಿ ಎಂಕೆ 3 ರಾಕೆಟ್‌ ನಭೋಮಂಡಲದ ಕಡೆ ಮುಖ ಮಾಡಲಿದೆ.

ಈ ಎಲ್ಲ ಯೋಜನೆಗೆ ಹಿಂದಿರುವು ಮೆದಳು ಎಂದರೆ ವನಿತಾ ಮುತ್ತಯ್ಯ ಮತ್ತು ರಿತು ಕರಿಥಾಲ್‌. ಈ ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ಚಂದ್ರಯಾನ 2 ನಭಕ್ಕೆ ಹಾರಲು ತಯಾರಿ ನಡೆಸಲಾಗಿದೆ.

ಮಹಿಳಾ ವಿಜ್ಞಾನಿಗಳು


ನಾರಿ ಶಕ್ತಿಯ ವಿವರ ಇಲ್ಲಿದೆ...

ವನಿತಾ ಮುತ್ತಯ್ಯ: ಈ ಯೋಜನೆಯ ನಿರ್ದೇಶಕರರು. ಚಂದ್ರಯಾನ - 2 ಯೋಜನೆಯ ಟೆಲಿಮೆಟ್ರಿ ಮತ್ತು ಟೆಲಿ ಕಮಾಂಡ್‌ನ ಡಿಜಿಟಲ್‌ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ಮೊದಲು ಕಾರ್ಟೊಸ್ಯಾಟ್‌, ಓಷ್ಯಾನ್‌ಸ್ಯಾಟ್‌ 2, ಮೆಗಾ ಟ್ರಾಪಿಕ್ಯೂಸ್‌ ಉಪಗ್ರಹ ಯೋಜನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. 2006ರಲ್ಲಿ ಇವರಿಗೆ ಶೇಷ್ಠ ಮಹಿಳಾ ವಿಜ್ಞಾನಿ ಎಂಬ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ವನಿತಾ ಡೇಟಾ ವಿಭಾಗದಲ್ಲಿ ಪರಿಣತಿ ಹೊಂದಿದ್ದಾರೆ.

ಇಸ್ರೋ, ನಾಸಾ


ರಿತು ಕರಿಥಾಲ್‌: ಮಿಷನ್‌ ನಿರ್ದೇಶಕರಾಗಿದ್ದಾರೆ ರಿತು. ಮಂಗಳಗ್ರಹ ಯೋಜನೆಯಲ್ಲಿ ಉಪ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದರು. ಲಖನೌದ ಮಧ್ಯಮ ವರ್ಗದ ಕುಟುಂಬದ ರಿತು, ಐಐಎಸ್‌ಸಿಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. ಇಸ್ರೋದಲ್ಲಿ 1997ರಿಂದಲೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

2007ರಲ್ಲಿ ಎಪಿಜೆ ಅಬ್ದುಲ್‌ ಕಲಾಂ ಅವರಿಂದ ಯುವ ವಿಜ್ಞಾನಿ ಎಂಬ ಪ್ರಶಸ್ತಿ ಪಡೆದುಕೊಂಡಿದ್ದರು.

ಇವರಲ್ಲದೇ ಟಿಕೆ ಅನುರಾಧ, ಎನ್‌. ವಲರ್‌ಮತಿ, ವಿ.ಆರ್‌. ಲಲಿತಾಂಬಿಕ, ಸೀತಾ ಸೋಮಸುಂದರಂ, ಮಿನಾಲ್‌ ರೋಹಿತ್‌, ಮೌಮಿತಾ ದತ್ತಾ ಅವರು ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದರೊಂದಿಗೆ ಚಂದ್ರಯಾನ- 2 ಯೋಜನೆಗೆ ಸಂಪೂರ್ಣ ನಾರಿ ಬಲ ದಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ