ಆ್ಯಪ್ನಗರ

ಹೊಲದಲ್ಲಿ ವೇದ ಮಂತ್ರ ಪಠಿಸಿ, ಇಳುವರಿ ಹೆಚ್ಚಿಸಿಕೊಳ್ಳಿ!

ಗೋವಾ ಸರಕಾರ ರೈತರಿಗೆ ತಮ್ಮ ಬೆಳೆ ಇಳುವರಿ ಹೆಚ್ಚಿಸಿಕೊಳ್ಳಲು ವೇದ ಮಂತ್ರದ ತಂತ್ರ ಬೋಧಿಸಿದೆ!

Vijaya Karnataka 24 Nov 2018, 5:00 am
ಪಣಜಿ: ಗೋವಾ ಸರಕಾರ ರೈತರಿಗೆ ತಮ್ಮ ಬೆಳೆ ಇಳುವರಿ ಹೆಚ್ಚಿಸಿಕೊಳ್ಳಲು ಹೊಸ ತಂತ್ರವನ್ನು ಸೂಚಿಸಿದೆ: ಅದುವೇ ವೇದ ಮಂತ್ರಪಠಣ.
Vijaya Karnataka Web farming

ರಾಜ್ಯ ಸರಕಾರವು 'ದೈವಿಕ ವ್ಯವಸಾಯ' ನಡೆಸುವಂತೆ ರೈತರಿಗೆ ಸಲಹೆ ನೀಡುತ್ತಿದೆ. ಇದರ ಪ್ರಕಾರ, ಉತ್ತಮ ಗುಣಮಟ್ಟ ಮತ್ತು ಇಳುವರಿಗೆ 20 ದಿನಗಳ ಕಾಲ ಹೊಲಗಳಲ್ಲಿ ವೇದ ಮಂತ್ರ ಪಠಿಸುವುದು ಅಗತ್ಯವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ವೇದ ಮಂತ್ರ ಪಠಣದಲ್ಲಿ ತಜ್ಞರಾಗಿರುವ ಶಿವಯೋಗ ಫೌಂಡೇಷನ್‌ ಮತ್ತು ಬ್ರಹ್ಮಕುಮಾರಿಯರ ಸಂಸ್ಥೆಗಳ ಜತೆಗೆ ಈಗಾಗಲೇ ಸರಕಾರ ಮಾತುಕತೆ ನಡೆಸಿದೆ. ಕೃಷಿ ಸಚಿವ ವಿಜಯ್‌ ಸರ್‌ದೇಸಾಯಿ ಮತ್ತು ಕೃಷಿ ನಿರ್ದೇಶಕ ನೆಲ್ಸನ್‌ ಫಿಗ್ಯುರಿಡೊ ಅವರು ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿರುವ ಗುರು ಶಿವಾನಂದ ಅವರನ್ನು ಭೇಟಿಯಾಗಿದ್ದರು. ಶಿವಾನಂದ ಅವರು 'ಶಿವಯೋಗ ಕೃಷಿ'ಯನ್ನು ನಡೆಸುತ್ತಿದ್ದು, ಗೋವಾದಲ್ಲಿ 'ದೈವಿಕ ವ್ಯವಸಾಯ'ದಿಂದ ಆಗಬಹುದಾದ ಲಾಭಗಳ ಬಗ್ಗೆ ಚರ್ಚೆ ನಡೆದಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಗೋವಾದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಇದು ಇನ್ನೂ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.

ರೈತರು ಏನು ಮಾಡಬೇಕು?
* ಬೆಳೆ ಬೆಳೆಯುವ ಆರಂಭಿಕ 20 ದಿನಗಳಲ್ಲಿ ಪ್ರತಿ ದಿನ 20 ನಿಮಿಷ ರೈತರು ತಮ್ಮ ಹೊಲಗಳಲ್ಲಿ 20 ನಿಮಿಷ ವೇದ ಮಂತ್ರ ಪಠಿಸಬೇಕು.
* ಈ ಮಂತ್ರವು ಬ್ರಹ್ಮಾಂಡದ ಶಕ್ತಿಯನ್ನು ಹೊಲದ ಕಡೆಗೆ ಸೆಳೆದು ಬೀಜ ಚೆನ್ನಾಗಿ ಮೊಳಕೆಯೊಡೆದು ಒಳ್ಳೆಯ ಫಸಲನ್ನು ನೀಡುವಂತೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ