ಆ್ಯಪ್ನಗರ

ಪರರ ಮಕ್ಕಳಿಗೆ ಹಾಲುಣಿಸುವ ತಾಯಂದಿರು

ಇಂದು ಅಮ್ಮಂದಿರ ದಿನ. ತಾಯಿ ಎದೆಹಾಲು ಅಮೃತಕ್ಕೆ ಸಮ ಅಂತಾರೆ. ಆ ಅಮೃತವನ್ನು ದಾನ ಮಾಡುವ ತಾಯಿ ಈಕೆ.

Vijaya Karnataka Web 14 May 2017, 1:12 pm
ಚೆನ್ನೈ: ಇಂದು ಅಮ್ಮಂದಿರ ದಿನ. ತಾಯಿ ಎದೆಹಾಲು ಅಮೃತಕ್ಕೆ ಸಮ ಅಂತಾರೆ. ಆ ಅಮೃತವನ್ನು ದಾನ ಮಾಡುವ ತಾಯಿ ಈಕೆ. ಹೆಸರು ಶರಣ್ಯ ಗೋವಿಂದರಾಜಲು. ಏಳು ತಿಂಗಳ ಮಗುವಿನ ತಾಯಿಯಾಗಿರುವ ಶರಣ್ಯ ವಾರದಲ್ಲಿ 5 ದಿನ 100ml ನಿಂದ 150mlವರೆಗೆ ಹಾಲನ್ನು ಮಕ್ಕಳ ಆಸ್ಪತ್ರೆಗೆ ದಾನ ಮಾಡುತ್ತಿದ್ದಾರೆ. ಅಪೌಷ್ಠಿಕ ಮಕ್ಕಳಿಗೆ ಈ ರೀತಿಯಾದರೂ ಸಹಾಯವಾಗಲಿ ಎನ್ನುವ ಉದ್ದೇಶದಿಂದ ತನ್ನ ಮಗುವಿನ ಜತೆಗೆ ಇತರ ಮಕ್ಕಳಿಗೂ ಎದೆ ಹಾಲು ನೀಡುತ್ತಿದ್ದಾಳೆ ಈ ಮಹಾತಾಯಿ.
Vijaya Karnataka Web chennai mothers feed unknown infants their milk
ಪರರ ಮಕ್ಕಳಿಗೆ ಹಾಲುಣಿಸುವ ತಾಯಂದಿರು


'ನನ್ನ ಗಂಡ ರಕ್ತದಾನಿ, ನಾನು ಎದೆ ಹಾಲು ದಾನ ಮಾಡುತ್ತೇನೆ, ಈ ಮೂಲಕ ಮತ್ತೊಂದು ಜೀವಕ್ಕೆ ಸಹಾಯ ಮಾಡುತ್ತಿದ್ದೇವೆ. ಅವಧಿ ಪೂರ್ವ ಜನಿಸಿದ ಕೆಲ ಮಕ್ಕಳು ನೋಡಲು ನನ್ನ ಅಂಗೈಯಷ್ಟೇ ಇರುತ್ತವೆ. ಅವುಗಳಿಗೆ ಪೋಷಕಾಂಶದ ಅವಶ್ಯಕತೆ ಇರುತ್ತದೆ. ಅಂತಹ ಮಕ್ಕಳಿಗೆ ಉಪಯೋಗವಾಗಲಿ ಎಂದು ಎದೆ ಹಾಲು ದಾನ ಮಾಡುತ್ತಿದ್ದೇನೆ. ಇದರಿಂದ ನನ್ನ ಮನಸ್ಸಿಗೆ ತೃಪ್ತಿ ಇದೆ' ಎನ್ನುತ್ತಾರೆ ಶರಣ್ಯ.

ನ್ಯಾಚುರಲ್‌ ಪೇರಟಿಂಗ್‌ ಕಮ್ಯೂನಿಟಿ ಎಂಬ ನೆಟ್‌ವರ್ಕ್‌ ಇದೆ. ಈ ನೆಟ್‌ವರ್ಕ್‌ನಲ್ಲಿ ಶರಣ್ಯರಂತೆಯೇ ಹಲವಾರು ತಾಯಿಂದಿರು ತಮ್ಮ ಎದೆಹಾಲನ್ನು ದಾನ ಮಾಡುತ್ತಿದ್ದಾರೆ.

'ಕೆಲವೊಮ್ಮೆ ಅವಶ್ಯಕತೆ ಬಿದ್ದಾಹ ಆಸ್ಪತ್ರೆಯವರೇ ನಮ್ಮನ್ನು ಸಂಪರ್ಕಿಸುತ್ತಾರೆ, ಕೆಲವೊಮ್ಮೆ ನಾವೇ ದಾನ ಮಾಡುತ್ತೇವೆ' ಎನ್ನುತ್ತಾರೆ ಮತ್ತೊಬ್ಬ ದಾನಿ ವಹಿದಾ ಸತೀಶ್‌ಕುಮಾರ್‌.

ಅತ್ಯಂತ ಪೋಷಕಾಂಶವಿರುವ ಆಹಾರವೆಂದರೆ ಎದೆಹಾಲು. ಎದೆಹಾಲಿಗೆ ಪರ್ಯಾಯವಾದ ಆಹಾರ ಮತ್ತೊಂದಿಲ್ಲ. ತನ್ನ ಮಕ್ಕಳಿಗೆ ನೀಡುವುದರ ಜತೆಗೆ ಈ ಅಮೃತವನ್ನು ಇತರ ಮಕ್ಕಳಿಗೂ ನೀಡುತ್ತಿರುವ ಈ ತಾಯಿಂದಿರ ದೊಡ್ಡಮನಸ್ಸಿಗೆ ನಮ್ಮದೊಂದು ಸಲಾಂ.
ಅಮ್ಮಂದಿರ ದಿನದ ಶುಭಾಶಯಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ