ಆ್ಯಪ್ನಗರ

ಕೋಳಿ ಮಾಂಸ, ಮೊಟ್ಟೆ ಮಾರಾಟಕ್ಕೆ ನಿಷೇಧ

70 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಅರ್ಧ ಗಂಟೆ ಕಾಲ ಬೇಯಿಸಿದ ನಂತರ ಸೇವಿಸಿ ಎಂದು ಹೇಳಿದೆ. ಒಂದು ಕಡೆ ದಿಲ್ಲಿ ಪಾಲಿಕೆ ಕೋಳಿ ಮಾಂಸ, ಮೊಟ್ಟೆ ಮಾರಾಟಕ್ಕೆ ನಿಷೇಧ ಹೇರಿದ್ದರೆ, ಆರೋಗ್ಯ ಇಲಾಖೆಯು ಇದನ್ನು ಸೇವಿಸಲು ಅಡ್ಡಿಯಲ್ಲ ಎಂದು ಸಲಹೆ ನೀಡಿರುವುದು ಜನರನ್ನು ಗೊಂದಲಕ್ಕೆ ದೂಡಿದೆ.

Vijaya Karnataka Web 13 Jan 2021, 8:55 pm
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿಜ್ವರ ಸೋಂಕು (ಎಚ್‌5 ಎನ್‌1) ದೃಢಪಟ್ಟ ಬೆನ್ನಲ್ಲೇ ಉತ್ತರ ಮತ್ತು ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಮೊಟ್ಟೆ ಹಾಗೂ ಕೋಳಿ ಮಾಂಸ ಮಾರಾಟ ಮತ್ತು ಸಂಗ್ರಹ ನಿಷೇಧಿಸಿ ಆದೇಶ ಹೊರಡಿಸಿವೆ.
Vijaya Karnataka Web ಮೊಟ್ಟೆ
ಮೊಟ್ಟೆ


ಹಾಗೆಯೇ ಮೊಟ್ಟೆ ಮತ್ತು ಕೋಳಿ ಮಾಂಸದಿಂದ ತಯಾರಿಸುವ ಆಹಾರವನ್ನು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಸರ್ವ್‌ ಮಾಡುವಂತಿಲ್ಲ. ನಿಯಮ ಉಲ್ಲಂಘಿಸುವ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿವೆ.

ಇತ್ತ ದಿಲ್ಲಿ ಆರೋಗ್ಯ ಇಲಾಖೆಯು, ಹಕ್ಕಿಜ್ವರದ ಬಗ್ಗೆ ಭಯ ಪಡಬೇಡಿ. ಮೊಟ್ಟೆ ಹಾಗೂ ಕೋಳಿ ಮಾಂಸವನ್ನು ತಿನ್ನಿ. ಆದರೆ 70 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಅರ್ಧ ಗಂಟೆ ಕಾಲ ಬೇಯಿಸಿದ ನಂತರ ಸೇವಿಸಿ ಎಂದು ಹೇಳಿದೆ. ಒಂದು ಕಡೆ ದಿಲ್ಲಿ ಪಾಲಿಕೆ ಕೋಳಿ ಮಾಂಸ, ಮೊಟ್ಟೆ ಮಾರಾಟಕ್ಕೆ ನಿಷೇಧ ಹೇರಿದ್ದರೆ, ಆರೋಗ್ಯ ಇಲಾಖೆಯು ಇದನ್ನು ಸೇವಿಸಲು ಅಡ್ಡಿಯಲ್ಲ ಎಂದು ಸಲಹೆ ನೀಡಿರುವುದು ಜನರನ್ನು ಗೊಂದಲಕ್ಕೆ ದೂಡಿದೆ.

ಕೇರಳ, ಮಹಾರಾಷ್ಟ್ರ, ಉತ್ತರಾಖಂಡ, ಹರಿಯಾಣ ಸೇರಿ ಹತ್ತು ರಾಜ್ಯಗಳಿಗೆ ಹಕ್ಕಿಜ್ವರ ಸೋಂಕು ವ್ಯಾಪಿಸಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಈಗಾಗಲೇ ಸೂಚಿಸಿದೆ.

ಕಡಕ್‌ನಾಥ್‌ ಕೋಳಿಗಳ ವಧೆ:
ಮಧ್ಯಪ್ರದೇಶದ ಜಬೂವಾ ಜಿಲ್ಲೆಯ ರುದಿಪಾಂಡಾ ಗ್ರಾಮದ ಕಡಕ್‌ನಾಥ್‌ ಕೋಳಿಗಳ ಫಾರಂವೊಂದರಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 2 ಸಾವಿರ ಕೋಳಿಯನ್ನು ಸಾಯಿಸಲು ಸ್ಥಳೀಯ ಆಡಳಿತ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ