ಆ್ಯಪ್ನಗರ

60 ಲಕ್ಷದ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಏರಿದ ಚೀಫ್‌ ಜಸ್ಟೀಸ್‌ ಎಸ್‌.ಎ. ಬೊಬ್ಡೆ, ಫೋಟೋ ವೈರಲ್‌

ಮುಖ್ಯ ನ್ಯಾಯಮೂರ್ತಿಗಳು ಬೈಕ್‌ ಏರಿದ ಫೋಟೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಅವರು ಹೆಲ್ಮೆಟ್‌, ಮಾಸ್ಕ್‌ ಧರಿಸಿರಲಿಲ್ಲ ಎಂದೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

TIMESOFINDIA.COM 29 Jun 2020, 1:28 pm
ನಾಗಪುರ:ಸುಪ್ರೀಂ ಕೋರ್ಟ್‌ನ‌ ಮುಖ್ಯ ನ್ಯಾಯಮೂರ್ತಿ 64 ವರ್ಷದ ಶರದ್‌ ಅರವಿಂದ ಬೊಬ್ಡೆ ನಾಗಪುರದಲ್ಲಿ ದುಬಾರಿ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಏರಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web SA Bobde


ಬೈಕ್‌ನ ಬಗ್ಗೆ ಅಪಾರ ಕ್ರೇಜ್‌ ಹೊಂದಿರುವ ನ್ಯಾ. ಬೊಬ್ಡೆ ಹಿಂದೊಮ್ಮೆ ಸಂದರ್ಶನದಲ್ಲಿ 'ಬೈಕ್‌ ಓಡಿಸುವುದೆಂದರೆ ನನಗೆ ತುಂಬಾ ಇಷ್ಟ. ಹಿಂದೆ ನನ್ನ ಬಳಿಯಲ್ಲಿ ಬುಲೆಟ್‌ ಇತ್ತು,' ಎಂದು ಹೇಳಿಕೊಂಡಿದ್ದರು. ಇದೇ ನ್ಯಾಯಮೂರ್ತಿಗಳು ಈಗ ಹಾರ್ಲೆ ಡೇವಿಡ್‌ಸನ್‌ನ ಲಿಮಿಟೆಡ್‌ ಎಡಿಷನ್‌ ಬೈಕ್‌ ಏರಿದ್ದಾರೆ. ಅಂದಹಾಗೆ ಈ ಬೈಕ್‌ನ ಶೋ ರೂಂ ಬೆಲೆಯೇ 50 ಲಕ್ಷ ದಾಟುತ್ತದೆ. ರಸ್ತೆಗಿಳಿದಾಗ ಇದರ ಬೆಲೆ 60 ಲಕ್ಷವನ್ನೂ ಮೀರುತ್ತದೆ.

ಸದ್ಯ ಎಸ್‌ಎ ಬೊಬ್ಡೆ ತಮ್ಮ ಊರು ನಾಗಪುರದಲ್ಲಿ ಉಳಿದುಕೊಂಡಿದ್ದು, ಅಲ್ಲಿಯೇ ಈ ಬೈಕ್‌ ಹತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು, ನ್ಯಾಯಮೂರ್ತಿಗಳು ಹೆಲ್ಮೆಟ್‌, ಮಾಸ್ಕ್‌ ಧರಿಸಿರಲಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಬೈಕ್‌ ಓಡಿಸಿದ ಬಗ್ಗೆ ಖಚಿತತೆ ಇಲ್ಲ, ಆದರೆ ಜನರ ಮಧ್ಯೆ ಮಾಸ್ಕ್‌ ಹಾಕದೆ ಮಾತ್ರ ಕಾಣಿಸಿಕೊಂಡಿದ್ದಾರೆ.

2019ರ ಆರಂಭದಲ್ಲೊಮ್ಮೆ ಅವರು ಹಾರ್ಲೆ ಡೇವಿಡ್‌ಸನ್‌ ಬೈಕ್‌ ಟೆಸ್ಟ್‌ ಡ್ರೈವ್‌ ಮಾಡಲು ಹೋಗಿ ಬಿದ್ದಿದ್ದರು. ಈ ಸಂದರ್ಭ ಅವರ ಕಾಲಿಗೆ ಗಾಯವಾಗಿದ್ದರಿಂದ ಕೆಲ ದಿನಗಳ ಕೋರ್ಟ್‌ ಕಲಾಪವನ್ನೂ ಅವರು ತಪ್ಪಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ