ಆ್ಯಪ್ನಗರ

ಆಮ್ಲಜನಕ ಬದಲು ನೈಟ್ರಸ್ ಆಕ್ಸೈಡ್: ಮಗು ಸಾವು

ಇಂದೋರ್‌ನ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯಲ್ಲಿ ಮಗುವಿಗೆ ಆಮ್ಲಜನಕದ ಬದಲು ನೈಟ್ರಸ್ ಆಕ್ಸೈಡ್ ಪೂರೈಕೆಯಾಗಿ ಮಗು ಮೃತಪಟ್ಟಿದೆ.

ಏಜೆನ್ಸೀಸ್ 30 May 2016, 11:35 am
ಇಂದೋರ್: ಇಲ್ಲಿನ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಮಗುವಿಗೆ ಆಮ್ಲಜನಕದ ಬದಲು ನೈಟ್ರಸ್ ಆಕ್ಸೈಡ್ ಪೂರೈಕೆಯಾಗಿ ಮಗು ಮೃತಪಟ್ಟಿದೆ.
Vijaya Karnataka Web child given nitrous oxide instead of oxygen dies
ಆಮ್ಲಜನಕ ಬದಲು ನೈಟ್ರಸ್ ಆಕ್ಸೈಡ್: ಮಗು ಸಾವು


ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಮಗುವಿಗೆ ಆಮ್ಲಜನಕದ ಬದಲು ಅರಿವಳಿಕೆಗೆ ಬಳಕೆಯಾಗುವ ನೈಟ್ರಸ್ ಆಕ್ಸೈಡ್ ನೀಡಿರುವುದು ದುರಂತಕ್ಕೆ ಕಾರಣ.

ಆಯುಶ್ (8) ಮೃತಪಟ್ಟ ಮಗು. ಶನಿವಾರ ಇದೇ ಆಸ್ಪತ್ರೆಯಲ್ಲಿ ಬೇರೆ ಯಾವುದೋ ಅನಿಲ ನೀಡಿದ ಕಾರಣ ಅಸ್ವಸ್ಥಗೊಂಡಿರುವ 18 ತಿಂಗಳ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಜಪ್ತಿ ಮಾಡಿದ್ದು, ಸಂಬಂಧಿಸಿದವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ಕೊಠಡಿಯಲ್ಲಿ ಎರಡು ಪ್ರತ್ಯೇಕ ಬಣ್ಣಗಳ ಪೈಪ್‌ಗಳಿದ್ದು, ಅವುಗಳಲ್ಲಿ ಹರಿಯುವ ಅನಿಲ ಕಲಬೆರಕೆಗೊಂಡಿವೆ ಎಂದು ಶಸ್ತ್ರ ಚಿಕಿತ್ಸಕ ಉಮಿತ್ ಶುಕ್ಲಾ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಶಾಸಕ ಜಿತು ಪತ್ವಾರಿ ಹೇಳಿದ್ದಾರೆ.

'ಪೈಪ್‌ಗಳನ್ನು ಅಳವಡಿಸುವುದಷ್ಟೆ ನನ್ನ ಕೆಲಸ. ಅದರಲ್ಲಿ ಯಾವ ಅನಿಲ ಪೂರೈಕೆ ಮಾಡಬೇಕು ಎನ್ನುವುದು ಆಸ್ಪತ್ರೆಯವರ ಕೆಲಸ ಎಂದು ಗುತ್ತಿಗೆದಾರ ರಾಜೇಂದ್ರ ಚೌಧರಿ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ