ಆ್ಯಪ್ನಗರ

ಸೇನಾ ಮಾತುಕತೆ ನಂತರವೂ ಚೀನಾದಿಂದ ಗಡಿಯಲ್ಲಿ ಸೈನಿಕರ ಜಮಾವಣೆ!

ಮೇಜರ್‌ ಜನರಲ್‌ ಹಂತದಲ್ಲಿ ಆರು ಗಂಟೆಗಿಂತ ಹೆಚ್ಚು ಕಾಲ ಸಭೆ ನಡೆದ ಬೆನ್ನಲ್ಲಿಯೇ ಚೀನಾ ಮಿಲಿಟರಿ ನೂರಾರು ಸೈನಿಕರು ಮತ್ತು ಭಾರಿ ಗಾತ್ರದ ನಿರ್ಮಾಣ ಯಂತ್ರಗಳನ್ನು ವಿವಾದಿತ ಗಲ್ವಾನ್‌ ಕಣಿವೆಗೆ ತಂದು ನಿಲ್ಲಿಸಿದೆ.

Vijaya Karnataka Web 18 Jun 2020, 10:43 pm
ಹೊಸದಿಲ್ಲಿ: ಮೇಜರ್‌ ಜನರಲ್‌ ಹಂತದಲ್ಲಿ ಆರು ಗಂಟೆಗಿಂತ ಹೆಚ್ಚು ಕಾಲ ಸಭೆ ನಡೆದ ಬೆನ್ನಲ್ಲಿಯೇ ಚೀನಾ ಮಿಲಿಟರಿ ನೂರಾರು ಸೈನಿಕರು ಮತ್ತು ಭಾರಿ ಗಾತ್ರದ ನಿರ್ಮಾಣ ಯಂತ್ರಗಳನ್ನು ವಿವಾದಿತ ಗಲ್ವಾನ್‌ ಕಣಿವೆಗೆ ತಂದು ನಿಲ್ಲಿಸಿದೆ.
Vijaya Karnataka Web army galwan


ಉಪಗ್ರಹದಿಂದ ಸೆರೆಹಿಡಿಯಲಾದ ಚಿತ್ರಗಳು ಮತ್ತು ಗಡಿಯಲ್ಲಿನ ಸೈನಿಕರಿಂದ ಈ ಕುರಿತು ನಿಖರ ಮಾಹಿತಿ ಸಿಕ್ಕಿದೆ.ಗಲ್ವಾನ್‌ ನದಿ ದಡದಲ್ಲಿ ಶಸ್ತ್ರಸಜ್ಜಿತ ಒಂದು ಪಡೆ, ತಾತ್ಕಾಲಿಕ ಟೆಂಟ್‌ಗಳು, ನಿರ್ಮಾಣ ಕಾಮಗಾರಿಯ ಯಂತ್ರಗಳು ಉಪಗ್ರಹದಿಂದ ಗೋಚರವಾಗಿದೆ ಎಂದು ನಿವೃತ್ತ ಕರ್ನಲ್‌ ವಿನಾಯಕ್‌ ಭಟ್‌ ತಿಳಿಸಿದ್ದಾರೆ. ಈ ಚಿತ್ರಗಳನ್ನು ಮಂಗಳವಾರ ಸೆರೆ ಹಿಡಿಯಲಾಗಿದೆ.

ಗಸ್ತು ಪಾಯಿಂಟ್‌ 14 ಭಾರತದ ಪ್ರದೇಶವಾಗಿದ್ದರೂ ಚೀನಾ ಮಿಲಿಟರಿ ಹಠಾತ್ತಾಗಿ ಅಕ್ರಮ ಪ್ರವೇಶ ಮಾಡಿರುವುದು ಮತ್ತೊಂದು ಸುತ್ತಿನ ಸೈನಿಕರ ಮಾರಾಮಾರಿಗೆ ದಾರಿ ಮಾಡಿಕೊಡಲಿದೆಯೇ ಎಂಬ ಶಂಕೆ ಸೇನಾ ತಜ್ಞರಲ್ಲಿ ಮೂಡಿದೆ. ಸೋಮವಾರ ರಾತ್ರಿ ಭಾರತದ ಗಡಿ ಪ್ರವೇಶಿಸಿ ಸಂಘರ್ಷಕ್ಕೆ ಕಾರಣರಾದ ಸಂದರ್ಭದಲ್ಲಿ ಚೀನಾ ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಪಡೆಯಲ್ಲಿ800 ಸೈನಿಕರಿದ್ದರು ಎಂದು ಅಂದಾಜಿಸಲಾಗಿದೆ.

ಗಲ್ವಾನ್‌ ನದಿ ಹರಿವಿಗೆ ಚೀನಾ ಅಡ್ಡಿ: ಸೇನೆ ನುಗ್ಗಿಸಲು ಸಂಚು!

ವಿಲಿಟರಿ ಜನರಲ್‌ಗಳ ಸಭೆಯಲ್ಲಿ ನಡೆದ ಸಂಧಾನದಂತೆ ಗಲ್ವಾನ್‌ ಕಣಿವೆಯ ವಿವಾದಿತ ಗಡಿ ಪ್ರದೇಶದಿಂದ 1 ಕಿ.ಮೀ ಹಿಂದಕ್ಕೆ ಎರಡೂ ರಾಷ್ಟ್ರಗಳ ಮಿಲಿಟರಿ ಪಡೆಗಳು ಸರಿಯುವುದು ಎಂದು ತೀರ್ಮಾನಿಸಲಾಗಿತ್ತು. ಈ ಮೂಲಕ ವಿವಾದಿತ ಸ್ಥಳವನ್ನು ಮಾನವರಹಿತ ಭೂಪ್ರದೇಶವಾಗಿ ರೂಪಿಸಲು ನಿರ್ಧರಿಸಲಾಗಿತ್ತು. ಆದರೆ ಚೀನಾ ಅದನ್ನು ಉಲ್ಲಂಘಿಸಿದೆ. ಗಲ್ವಾನ್‌ ಕಣಿವೆ ಮತ್ತು ಅದರ ಬಳಿಯ ಶ್ಯೋಕ್‌ ನದಿಯನ್ನು ಆಕ್ರಮಿಸಿಕೊಳ್ಳುವುದು ಚೀನಾ ಮಿಲಿಟರಿಯ ಕುಮ್ಮಕ್ಕು ಆಗಿದೆ ಎಂದು ಅಂದಾಜಿಸಲಾಗುತ್ತಿದೆ.

ಚೀನಾ ಗಡಿತಂಟೆ: ಉದ್ವಿಗ್ನ ಸ್ಥಿತಿ ಶಮನಕ್ಕೆ ಉಭಯ ದೇಶಗಳ ಚರ್ಚೆಯಾಗಿದೆ ಎಂದ ವಿದೇಶಾಂಗ ಇಲಾಖೆ

ಗೊಗ್ರಾ ಪೋಸ್ಟ್‌ನಲ್ಲೂ ಕೃತ್ಯ: ಇನ್ನೊಂದೆಡೆ, ಲಡಾಖ್‌ನ ಗೊಗ್ರಾ ಪೋಸ್ಟ್‌ ಬಳಿಯ ಎಲ್‌ಎಸಿಯ ಒಳಗಡೆ 2 ಕಿ.ಮೀ ಪ್ರದೇಶವನ್ನು ಚೀನಾ ಸೈನಿಕರು ಆಕ್ರಮಿಸಿಕೊಂಡಿದ್ದಾರೆ. ಪಾಂಗಾಂಗ್‌ ತ್ಸೋ ಲೇಕ್‌, ದೇಪ್‌ಸಾಂಗ್‌ ಕಣಿವೆ, ಗೊಗ್ರಾ ಪೋಸ್ಟ್‌ ಸೇರಿದಂತೆ ಪೂರ್ವ ಲಡಾಖ್‌ನ ಗಡಿಯನ್ನು ಪೂರ್ಣವಾಗಿ ಚೀನಾ ಸೈನಿಕರನ್ನು ಉಲ್ಲಂಘಿಸಿ ಪ್ರದೇಶವನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗ್ಗುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ