ಆ್ಯಪ್ನಗರ

ಗಡಿ ಅತಿಕ್ರಮಣಕ್ಕೆ ಕಾಂಗ್ರೆಸ್‌ ನೀತಿ ಕಾರಣ ಎಂದ ಲಡಾಖ್‌ ಸಂಸದ

ಓಲೈಕೆ ರಾಜಕಾರಣಕ್ಕೆ ಶರಣಾಗಿ ಕಾಂಗ್ರೆಸ್‌ ಸರಕಾರಗಳು ಕಾಶ್ಮೀರವನ್ನು ನಾಶ ಮಾಡಿದವು. ಅದರ ದುಷ್ಪರಿಣಾಮವನ್ನು ಲಡಾಖ್‌ ಕೂಡ ಅನುಭವಿಸಿದೆ ಎಂದು ನಾಮ್‌ಗ್ಯಾಲ್‌ ಅಭಿಪ್ರಾಯಪಟ್ಟಿದ್ದಾರೆ.

PTI 19 Aug 2019, 5:00 am
ಲೇಹ್‌: 370ನೇ ವಿಧಿ ರದ್ದತಿ ಹಾಗೂ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದ ಬಗ್ಗೆ ಸಂಸತ್ತಿನಲ್ಲಿ ಭಾಷಣ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಲಡಾಖ್‌ ಸಂಸದ ಜಾಮ್‌ಯಾಂಗ್‌ ಸೆರಿಂಗ್‌ ನಾಮ್‌ಗ್ಯಾಲ್‌, ಲಡಾಖ್‌ನ ಡೆಮ್‌ಚೊಕ್‌ ಸೆಕ್ಟರ್‌ನಲ್ಲಿ ಚೀನಾ ಕಾಲಿಡಲು ಕಾಂಗ್ರೆಸ್‌ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
Vijaya Karnataka Web ladakh mp


55 ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ರಕ್ಷಣಾ ನೀತಿಗಳ ರಚನೆ ವೇಳೆ ಲಡಾಖ್‌ಗೆ ಪ್ರಾಮುಖ್ಯತೆ ಕೊಡಲಿಲ್ಲ. ಪರಿಣಾಮ ಚೀನಾಗೆ ಅತಿಕ್ರಮಣಕ್ಕೆ ಸುಲಭವಾಗಿ ತುತ್ತಾಗಿದೆ. ಮಾಜಿ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರು ಗಡಿ ಮುಂಚೂಣಿ ನೀತಿ ರಚಿಸಿದ್ದರು. ಅದರಲ್ಲಿ ನಾವು ಚೀನಾ ಕಡೆಗೆ ಇಂಚಿಂಚು ಹೆಜ್ಜೆ ಇರಿಸೋಣ ಎನ್ನಲಾಗಿತ್ತು. ಆದರೆ ಆ ನೀತಿಯ ಜಾರಿ ವೇಳೆಗೆ ಎಲ್ಲ ಉಲ್ಟಾ ಆಯಿತು. ಚೀನಾ ಸೇನಾಪಡೆಗಳು ನಮ್ಮ ನೆಲವನ್ನು ಇಂಚಿಂಚು ಅತಿಕ್ರಮಿಸಲು ಶುರು ಮಾಡಿದವು ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಓಲೈಕೆ ರಾಜಕಾರಣಕ್ಕೆ ಶರಣಾಗಿ ಕಾಂಗ್ರೆಸ್‌ ಸರಕಾರಗಳು ಕಾಶ್ಮೀರವನ್ನು ನಾಶ ಮಾಡಿದವು. ಅದರ ದುಷ್ಪರಿಣಾಮವನ್ನು ಲಡಾಖ್‌ ಕೂಡ ಅನುಭವಿಸಿದೆ ಎಂದು ನಾಮ್‌ಗ್ಯಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ