ಆ್ಯಪ್ನಗರ

ಚೀನಾದಿಂದ ಪಾಕ್‌ಗೆ ಎರಡು ಕಾವಲು ನೌಕೆಗಳ ಹಸ್ತಾಂತರ

ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್ (ಸಿಪಿಇಸಿ) ಸಾಗರ ಮಾರ್ಗದಲ್ಲಿ ಗಸ್ತು ಕಾಯಲು ಚೀನಾ ಎರಡು ಕಾವಲು ನೌಕೆಗಳನ್ನು ಪಾಕ್‌ಗೆ ಹಸ್ತಾಂತರಿಸಿದೆ.

ಟೈಮ್ಸ್ ಆಫ್ ಇಂಡಿಯಾ 15 Jan 2017, 2:49 pm
ಹೊಸದಿಲ್ಲಿ: ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್ (ಸಿಪಿಇಸಿ) ಸಾಗರ ಮಾರ್ಗದಲ್ಲಿ ಗಸ್ತು ಕಾಯಲು ಚೀನಾ ಎರಡು ಕಾವಲು ನೌಕೆಗಳನ್ನು ಪಾಕ್‌ಗೆ ಹಸ್ತಾಂತರಿಸಿದೆ.
Vijaya Karnataka Web china gives pakistan two ships for security of cpec sea route
ಚೀನಾದಿಂದ ಪಾಕ್‌ಗೆ ಎರಡು ಕಾವಲು ನೌಕೆಗಳ ಹಸ್ತಾಂತರ


ಚೀನಾದ ನೌಕೆಗಳನ್ನುಪಾಕ್‌ ನೌಕಾಪಡೆ ವೈಸ್‌ ಅಡ್ಮಿರಲ್ ಆರಿಫುಲ್ಲಾ ಹುಸೈನಿ ಶನಿವಾರ ಸ್ವೀಕರಿಸಿದರು. ನೌಕೆಗಳಿಗೆ ಪಿಎಂಎಸ್‌ಎಸ್‌ ಹಿಂಗೋಲ್ ಮತ್ತು ಪಿಎಂಎಸ್‌ಎಸ್‌ ಬಾಸೋಲ್ ಎಂದು ಹೆಸರಿಡಲಾಗಿದೆ.

ಈ ನೌಕೆಗಳು ಈಗ ಪಾಕ್‌ ನೌಕಾಪಡೆಯ ಭಾಗವಾಗಿದ್ದು, ಇವುಗಳ ನಿಯೋಜನೆಯಿಂದ ಪಾಕ್‌ ನೌಕಾಪಡೆ ಮತ್ತಷ್ಟು ಬಲಿಷ್ಠವಾಗಿದೆ. ಪಾಕ್‌-ಚೀನಾ ಸ್ನೇಹ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂದು ಹುಸೈನಿ ಹೇಳಿದರು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

'ದಶ್ತ್‌' ಮತ್ತು 'ಝಾಬ್' ಎಂಬ ಇನ್ನೂ ಎರಡು ನೌಕೆಗಳನ್ನು ಚೀನಾ ಪಾಕಿಸ್ತಾನಕ್ಕೆ ನೀಡಲಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ.

ಗ್ವಾದರ್‌ ಬಂದರಿನ ಸುತ್ತಲೂ ಸಿಪಿಇಸಿ ಸಾಗರ ಮಾರ್ಗದಲ್ಲಿ ಭದ್ರತೆಗಾಗಿ ಪಾಕ್‌ ನೌಕಾಪಡೆ ಪ್ರತ್ಯೇಕ ವಿಭಾಗವನ್ನೇ ತೆರೆದಿದೆ. ಗ್ವಾದರ್‌ ನಗರದ ಭದ್ರತೆ ಹೊಣೆಯನ್ನು ನಿವೃತ್ತ ಜನರಲ್‌ ರಾಹೀಲ್‌ ಶರೀಫ್‌ ಅವಧಿಯಲ್ಲಿ ರಚಿಸಲಾದ ಪ್ರತ್ಯೇಕ ಸೇನಾ ವಿಭಾಗಕ್ಕೆ ನೀಡಲಾಗಿದೆ.

ಕಾಶ್ಗರ್ ಮತ್ತು ಗ್ವಾದರ್‌ ನಡುವೆ ಸಿಪಿಇಸಿ ಎಕನಾಮಿಕ್‌ ಕಾರಿಡಾರ್ ಒಟ್ಟು 54 ಶತಕೋಟಿ ಡಾಲರ್‌ ವೆಚ್ಚದ ನಿರ್ಮಾಣ ಯೋಜನೆಗಳನ್ನು ಒಳಗೊಂಡಿದೆ. ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ಆಪ್ಟಿಕಲ್‌ ಫೈಬರ್‌ ಮತ್ತು ಪೈಪ್‌ಲೈನ್‌ ಸೇರಿದಂತೆ ಹಲವು ಬಗೆಯ ಸಂಪರ್ಕ ಜಾಲಗಳನ್ನು ನಿರ್ಮಿಸಲು ಉದ್ದೇಶಿಸಿದೆ.

China gives Pakistan two ships for security of CPEC sea route

NEW DELHI: China yesterday handed over two maritime patrol vessels to the Pakistan Navy for joint security along the sea route of the China-Pakistan Economic Corridor (CPEC), Dawn reported.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ