ಆ್ಯಪ್ನಗರ

ಗಲ್ವಾನ್‌ ಕಣಿವೆಯಲ್ಲಿನ ಹೆಪ್ಪು ಕಟ್ಟುವ ಚಳಿಗೆ ಬೆಚ್ಚಿಬಿದ್ದ ಚೀನಾ ಸೇನೆ, ಸ್ಥಳ ಖಾಲಿ ಮಾಡುವ ಸಾಧ್ಯತೆ!

ಕಣಿವೆ ಭಾಗದ ವಾತಾವರಣದಲ್ಲಿ ತಾಪಮಾನ ದಿಢೀರ್‌ ಏರಿಕೆಯಾಗಿದ್ದು ಸುತ್ತಲಿನ ಹಿಮ ಶಿಖರಗಳು ಕರಗಿ ನೀರಾಗಿ ಹರಿಯತೊಡಗಿವೆ. ಇದು ಚೀನಾ ಸೇನೆಯನ್ನ ಆತಂಕ್ಕೆ ದೂಡಿದೆ. ಮೈಕೊರೆಯುವ ಚಳಿಯಿಂದ ಚೀನಾದ ಸೇನೆ ಇಲ್ಲಿಂದ ತೆರಳುವ ಸಾಧ್ಯತೆ ಇದೆ.

Vijaya Karnataka Web 6 Jul 2020, 6:51 am
ಹೊಸದಿಲ್ಲಿ: ಲಡಾಖ್‌ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯ ಸಂಘರ್ಷ ತಾಣ ಗಲ್ವಾನ್‌ ಕಣಿವೆಯಲ್ಲಿ ಬೀಡು ಬಿಟ್ಟಿರುವ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಗೆ ಈಗ ಮೈ ಕೊರೆಯುವಂತಹ ಥಂಡಿ ಹವಾಮಾನದ ಸವಾಲು ಎದುರಾಗಿದೆ. ಕಣಿವೆ ಭಾಗದ ವಾತಾವರಣದಲ್ಲಿ ತಾಪಮಾನ ದಿಢೀರ್‌ ಏರಿಕೆಯಾಗಿದ್ದು ಸುತ್ತಲಿನ ಹಿಮ ಶಿಖರಗಳು ಕರಗಿ ನೀರಾಗಿ ಹರಿಯತೊಡಗಿವೆ.
Vijaya Karnataka Web jpg (87)


ಇದರಿಂದ ಗಲ್ವಾನ್‌ ನದಿಗೆ ಹಿಮ ಬಂಡೆಗಳೇ ಹರಿದು ಬರುತ್ತಿದ್ದು, ನೀರಿನ ಹರಿವಿನ ಮಟ್ಟ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಇದರ ಪರಿಣಾಮ ಇಡೀ ಪ್ರದೇಶದಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಯ ವಾತಾವರಣವಿದೆ. ಸಂಘರ್ಷ ನಡೆದ ತಾಣದಿಂದ 5 ಕಿ.ಮೀ ದೂರದಲ್ಲಿ ಠಿಕಾಣಿ ಹೂಡಿರುವ ಚೀನಿ ಸೈನಿಕರು ಈಗ ಚಳಿ ತಾಳದೇ ತಲ್ಲಣಿಸುತ್ತಿದ್ದಾರೆ. ಅಕ್ಸಾಯ್‌ ಚಿನ್‌ ಪ್ರದೇಶದ ಮಡಿಲಲ್ಲಿ ಜನ್ಮ ತಳೆಯುವ ಗಲ್ವಾನ್‌, ಈ ದಿನಗಳಲ್ಲಿ ತಾಪಮಾನ ಏರಿಕೆಗೆ ಹಿಮ ಬಂಡೆಗಳು ಕರಗಿ ಉಕ್ಕಿ ಹರಿಯುವುದು ಸಾಮಾನ್ಯ.

ಇದರಿಂದ ಇಡೀ ಪ್ರದೇಶ ಹೆಪ್ಪುಗಟ್ಟುವ ಚಳಿಯಿಂದ ಮುದುಡಿ ಹೋಗುತ್ತದೆ. ''ನದಿ ನೀರಿನ ಪ್ರವಾಹ ಚೀನಿ ಸೈನಿಕರ ಟೆಂಟ್‌ಗಳವರೆಗೆ ಚಾಚಿರುವುದು ಸ್ಯಾಟಲೈಟ್‌ ಚಿತ್ರಗಳಿಂದ ತಿಳಿದು ಬಂದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಶತ್ರು ಸೈನಿಕರು ಅಲ್ಲಿಂದ ಜಾಗ ಖಾಲಿ ಮಾಡುವುದು ಅನಿವಾರ್ಯವಾಗುತ್ತದೆ,'' ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ: 5 ದಿನದಲ್ಲಿ 5 ಸಾವಿರ ಮಂದಿಗೆ ಸೋಂಕು, 50 ಜನ ಸಾವು

ಜೂನ್‌ರಂದು 15 ರಕ್ತಸಿಕ್ತ ಸೇನಾ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಉಲ್ಬಣಿಸಿದೆ. ಶಮನಕ್ಕೆ ಮಿಲಿಟರಿ ಮಟ್ಟದ ಮಾತುಕತೆಗಳು ಮುಂದುವರಿದಿವೆ. ಈಗಾಗಲೇ ಮೂರು ಸುತ್ತಿನ ಸಂಧಾನ ಮುಗಿದಿದ್ದು, ಗಡಿಯಿಂದ ಹಂತ ಹಂತವಾಗಿ ಸೇನೆ ವಾಪಸ್‌ ಕರೆಸಿಕೊಳ್ಳುವ ನಿರ್ಧಾರಕ್ಕೆ ಉಭಯ ಕಡೆಯ ಮುಖಂಡರು ಸಮ್ಮತಿಸಿದ್ದಾರೆ. ಆದರೂ ಸಂಘರ್ಷ ತಾಣ ಗಲ್ವಾನ್‌ನಿಂದ ಒಂದೇ ಬಾರಿಗೆ ಎಲ್ಲಾ ಸೇನೆಯನ್ನು ಹಿಂಪಡೆಯದಿರುವ ಹಟಕ್ಕೆ ಬಿದ್ದಿರುವ ಚೀನಾ, ಈಗ ವ್ಯತಿರಿಕ್ತ ಹವಾಮಾನದ ದಾಳಿಯನ್ನು ಎದುರಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ