ಆ್ಯಪ್ನಗರ

ತ್ರಿವರ್ಣ ಧ್ವಜದಲ್ಲಿ ಪ್ಯಾಕ್‌ ಮಾಡಲಾಗಿದ್ದ ಚೀನಿ ಶೂಗಳ ಜಪ್ತಿ

ತ್ರಿವರ್ಣ ಧ್ವಜವನ್ನು ಹೋಲುವ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚೀನಿ ಬೂಟುಗಳನ್ನು ಅಲ್ಮೋರಾದ ಪಾದರಕ್ಷೆಗಳ ಅಂಗಡಿಯಿಂದ ಜಪ್ತಿ ಮಾಡಿಲಾಗಿದೆ.

TNN 26 Aug 2017, 3:52 pm
ಅಲ್ಮೋರಾ: ತ್ರಿವರ್ಣ ಧ್ವಜವನ್ನೇ ಹೋಲುವ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚೀನಿ ಬೂಟುಗಳನ್ನು ಅಲ್ಮೋರಾದ ಪಾದರಕ್ಷೆಗಳ ಅಂಗಡಿಯಿಂದ ಜಪ್ತಿ ಮಾಡಲಾಗಿದೆ.
Vijaya Karnataka Web chinese shoes packed in boxes with indian flag seized from shop
ತ್ರಿವರ್ಣ ಧ್ವಜದಲ್ಲಿ ಪ್ಯಾಕ್‌ ಮಾಡಲಾಗಿದ್ದ ಚೀನಿ ಶೂಗಳ ಜಪ್ತಿ


ಬಿಶನ್ ಸಿಂಗ್ ಬೋರಾ ಮಾಲೀಕತ್ವದ ಬೋರಾ ಶೂ ಕಲೆಕ್ಷನ್‌ನಿಂದ ಹನ್ನೆರಡು ಜೋಡಿ ಶೂಗಳನ್ನು ಜಪ್ತಿ ಮಾಡಲಾಗಿದೆ. ಈ ಅಂಗಡಿಯ ಮಾಲೀಕ ಉಧಮ್ ಸಿಂಗ್ ನಗರ್ ಜಿಲ್ಲೆಯ ರುದ್ರಾಪುರದ ತಮನ್ನಾ ಫುಟ್‌ವೇರ್‌ನಿಂದ ಸರಕುಗಳನ್ನು ಖರೀದಿಸಿದ್ದ ಎಂದು ತಿಳಿದುಬಂದಿದೆ. ಶೂಗಳನ್ನು ತ್ರಿವರ್ಣ ಧ್ವಜ ಹೋಲುವ ಪೆಟ್ಟಿಗೆಗಳಲ್ಲಿ ಪ್ಯಾಕ್‌ ಮಾಡಿರುವುದನ್ನು ಕಂಡ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಬೋರಾ ತಿಳಿಸಿದ್ದಾರೆ.

ಈ ಪ್ಯಾಕ್‌ಗಳ ಮೇಲೆ ಚೀನಿ ಭಾಷೆಯಲ್ಲಿ ಮುದ್ರಿತ ಲೇಬಲ್ ಪತ್ತೆಯಾಗಿದೆ. ಅಲ್ಮೋರಾ ಪ್ರದೇಶ ಚೀನಾ ಗಡಿ ಪ್ರದೇಶಕ್ಕೆ ಹತ್ತಿರವಾಗಿದ್ದು, ದುಷ್ಕೃತ್ಯದ ಹಿಂದೆ ಕುತಂತ್ರಿ ಚೀನಾದ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ.

ಶೂಗಳನ್ನು ವಶಕ್ಕೆ ಪಡೆದ ಅಲ್ಮೋರಾ ಪೊಲೀಸ್ ಅಧಿಕಾರಿಗಳು ರುದ್ರಾಪುರದ ತಮನ್ನಾ ಫುಟ್‌ವೇರ್ ವಿರುದ್ಧ 1971ರ ನ್ಯಾಷನಲ್ ಆನರ್ ಆಕ್ಟ್ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.

ಈ ಶೂಗಳು ಮೊದಲು ದಿಲ್ಲಿಗೆ ಸರಬರಾಜಾಗಿದ್ದು, ಅಲ್ಲಿಂದ ರುದ್ರಾಪುರಕ್ಕೆ ರವಾನೆಯಾಗುತ್ತಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಆದಾಗ್ಯೂ, ಈ ಶೂಗಳು ಹಾಗೂ ತ್ರಿವರ್ಣ ಧ್ವಜವನ್ನು ಹೋಲುವಂತಹ ಪೆಟ್ಟಿಗೆಗಳು ಚೀನಾದಲ್ಲಿ ಉತ್ಪಾದನೆಯಾಗಿವೆಯೇ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಅಲ್ಮೋರಾದ ಹಿರಿಯ ಪೊಲೀಸ್ ಆಯುಕ್ತೆ ಪಿ. ರೇಣುಕಾ ದೇವಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ