ಆ್ಯಪ್ನಗರ

ಚೌಕಿದಾರ್ ಅಂದ್ರೆ ಸುಮ್ನೇನಾ?: ದೇಶದ ಅತಿ ದೊಡ್ಡ ಉದ್ಯೋಗ ವಲಯವಿದು

ದೇಶದ ಖಾಸಗಿ ಭದ್ರತಾ ವಲಯದಲ್ಲಿ 89 ಲಕ್ಷ ಮಂದಿ ಸೆಕ್ಯುರಿಟಿ ಗಾರ್ಡ್‌ (ಚೌಕಿದಾರ್) ಗಳಾಗಿ ಕೆಲಸ ಮಾಡುತ್ತಿದ್ದಾರೆ. 2022ರ ವೇಳೆಗೆ ಈ ಸಂಖ್ಯೆ 1.2 ಕೋಟಿ ತಲುಪುವ ನಿರೀಕ್ಷೆಯಿದೆ. ದೇಶದ ಒಟ್ಟು ಪೊಲೀಸರ ಸಂಖ್ಯೆಗಿಂತ ಖಾಸಗಿ ಭದ್ರತಾ ಸಿಬ್ಬಂದಿಗಳ ಸಂಖ್ಯೆ ಐದು ಪಟ್ಟು ಹೆಚ್ಚಿದೆ. 2016ರಲ್ಲಿ ಒಟ್ಟಾರೆ ಪೊಲೀಸರ ಸಂಖ್ಯೆ 19 ಲಕ್ಷದಷ್ಟಿತ್ತು.

Vijaya Karnataka Web 29 Mar 2019, 6:51 pm

ಹೈಲೈಟ್ಸ್‌:

  • ದೇಶದ ಖಾಸಗಿ ಭದ್ರತಾ ವಲಯದಲ್ಲಿ 89 ಲಕ್ಷ ಮಂದಿ ಚೌಕಿದಾರರಿದ್ದಾರೆ. ಇದು ಒಟ್ಟು ಪೊಲೀಸರ ಸಂಖ್ಯೆಗಿಂತ 5 ಪಟ್ಟು ಹೆಚ್ಚಾಗಿದೆ.
  • ಶೇ 90ರಷ್ಟು ಚೌಕಿದಾರರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ 'ಚೌಕಿದಾರ್‌' ಹೆಸರಿಗೆ ಭಾರೀ ಮಹತ್ವ ಬಂದುಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ ಹೆಸರನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಾಯಿಸಿಕೊಳ್ಳುತ್ತಿದ್ದಂತೆಯೇ ಬಿಜೆಪಿ ಅಧ್ಯಕ್ಷ ಅಮಿತ್ ಅವರಿಂದ ತೊಡಗಿ ಕೇಂದ್ರ ಸಚಿವರು, ಪಕ್ಷದ ಎಲ್ಲ ಪದಾಧಿಕಾರಿಗಳು, ಮೋದಿ ಬೆಂಬಲಿಗರ ಸಹಿತ ಕೋಟ್ಯಂತರ ಮಂದಿ ತಮ್ಮ ಹೆಸರುಗಳ ಮುಂದೆ 'ಚೌಕಿದಾರ್' ವಿಶೇಷಣ ಸೇರಿಸಿಕೊಂಡರು.
ದೇಶದ ಖಾಸಗಿ ಉದ್ಯೋಗ ರಂಗದಲ್ಲಿ ನಿಜವಾದ 'ಚೌಕಿದಾರ್' ಗಳ ನೈಜ ಸ್ಥಿತಿ ಗತಿ ಹೇಗಿದೆ ಎಂಬ ಬಗ್ಗೆ ವಿಸ್ತೃತ ಅವಲೋಕನ ಇಲ್ಲಿದೆ.

ದೇಶದ ಖಾಸಗಿ ಭದ್ರತಾ ವಲಯದಲ್ಲಿ 89 ಲಕ್ಷ ಮಂದಿ ಸೆಕ್ಯುರಿಟಿ ಗಾರ್ಡ್‌ (ಚೌಕಿದಾರ್) ಗಳಾಗಿ ಕೆಲಸ ಮಾಡುತ್ತಿದ್ದಾರೆ. 2022ರ ವೇಳೆಗೆ ಈ ಸಂಖ್ಯೆ 1.2 ಕೋಟಿ ತಲುಪುವ ನಿರೀಕ್ಷೆಯಿದೆ. ದೇಶದ ಒಟ್ಟು ಪೊಲೀಸರ ಸಂಖ್ಯೆಗಿಂತ ಖಾಸಗಿ ಭದ್ರತಾ ಸಿಬ್ಬಂದಿಗಳ ಸಂಖ್ಯೆ ಐದು ಪಟ್ಟು ಹೆಚ್ಚಿದೆ. 2016ರಲ್ಲಿ ಒಟ್ಟಾರೆ ಪೊಲೀಸರ ಸಂಖ್ಯೆ 19 ಲಕ್ಷದಷ್ಟಿತ್ತು.


ಖಾಸಗಿ ಭದ್ರತಾ ವಲಯದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್‌) ಶೇ 20ರಷ್ಟಿದ್ದು, ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಯಲ್ಲಿ ಅತಿಹೆಚ್ಚು ಉದ್ಯೋಗಗಳು ಈ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿವೆ. ದೇಶದಲ್ಲಿ ಸದ್ಯ ಒಟ್ಟಾರೆ 22,000ಕ್ಕೂ ಅಧಿಕ ಸೆಕ್ಯುರಿಟಿ ಏಜೆನ್ಸಿಗಳಿವೆ. ಅತಿದೊಡ್ಡ ಕಾರ್ಪೊರೇಟ್ ತೆರಿಗೆ ಪಾವತಿದಾರ ವಲಯವೂ ಇದೇ ಆಗಿದೆ. ಎಫ್‌ಐಸಿಸಿಐ ಮತ್ತು ಅರ್ನ್‌ಸ್ಟ್‌ & ಯಂಗ್ ವಾಣಿಜ್ಯೋದ್ಯಮ ಸಂಸ್ಥೆಗಳ ಅಧ್ಯಯನ ಪ್ರಕಾರ, 2013ರಲ್ಲಿ ಚೌಕಿದಾರರ ಕೈಗೆ ಬರುತ್ತಿದ್ದ ವೇತನ ಅತಿ ಕಡಿಮೆಯಿತ್ತು. ಸಂಘಟಿತ ವಲಯದ ಸೆಕ್ಯುರಿಟಿ ಗಾರ್ಡ್‌ಗಳ ವೇತನ ಅಸಂಘಟಿತ ವಲಯದ ಚೌಕಿದಾರರ ವೇತನಕ್ಕಿಂತ ಸ್ವಲ್ಪವಷ್ಟೇ ಹೆಚ್ಚಿತ್ತು.


ಹಾಗಿದ್ದರೂ, ಈ ವಲಯದಲ್ಲಿ ನಿಯಂತ್ರಣ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ವ್ಯಾಪಕವಾಗಿದೆ. ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳ (ನಿಯಂತ್ರಣ) ಕಾಯ್ದೆ ಅನ್ವಯ ಕೆಲಸದ ಅವಧಿ, ವೇತನ, ಪರವಾನಗಿ ಅಗತ್ಯಗಳು ಮುಂತಾದವನ್ನು ನಿಗದಿ ಪಡಿಸಲಾಗಿದೆ.


ಚೌಕಿದಾರ್ ಮತ್ತು ಸಾಮಾಜಿಕ ಜಾಲತಾಣಗಳು:
ಸಾಮಾಜಿಕ ಜಾಲತಾಣಗಳಲ್ಲಿ ಚೌಕಿದಾರ್ ಅಭಿಯಾನ ಅತ್ಯಂತ ಜನಪ್ರಿಯವಾಗಿದೆ. ಟ್ವಿಟರ್‌ನಲ್ಲಿ 1,268 ಅಧಿಕೃತ ರಾಜಕೀಯ ಖಾತೆಗಳಲ್ಲಿ ಶೇ 30ಕ್ಕೂ ಹೆಚ್ಚು ಮಂದಿ ತಮ್ಮ ಹ್ಯಾಂಡಲ್‌ಗಳಲ್ಲಿ ಚೌಕಿದಾರ್ ಹೆಸರು ಸೇರಿಸಿಕೊಂಡಿದ್ದಾರೆ. ಅವುಗಳ ಪೈಕಿ ಹೆಚ್ಚಿನವೂ ಬಿಜೆಪಿಗೆ ಸೇರಿದ್ದಾಗಿವೆ. 2,29,364 ಫಾಲೋವರ್‌ಗಳು ತಮ್ಮ ಹೆಸರಿನ ಮುಂದೆ ಚೌಕಿದಾರ್ ಸೇರಿಸಿಕೊಂಡಿದ್ದಾರೆ. 4,04,006 ಟ್ವೀಟ್‌ಗಳು #MainBhiChowkidar ಹ್ಯಾಶ್ ಟ್ಯಾಗ್ ಅಡಿಯಲ್ಲಿ ಪ್ರಕಟವಾಗಿವೆ. ಅಲ್ಲದೆ, 1,30, 290 ಹ್ಯಾಂಡಲ್‌ಗಳು ಈ ಟ್ವೀಟ್‌ಗಳನ್ನು ಪೋಸ್ಟ್ ಮಾಡಿವೆ.

ಮೂಲ: ಎಫ್‌ಐಸಿಸಿಐ, ಪಿಡಬ್ಲ್ಯುಸಿ, ಇ&ಐ, ಐಐಐಟಿ, ಮಾಧ್ಯಮ ವರದಿಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ