ಆ್ಯಪ್ನಗರ

ಪ್ರಧಾನಿ ವಿದೇಶ ಪ್ರವಾಸ ಮಾಹಿತಿ ವಿಳಂಬ; ಸಿಐಸಿ ಗರಂ

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳಲು ವಾಯುಪಡೆ ವಿಮಾನ ಬಳಸಿದ್ದರಿಂದ ಆಗಿರುವ ಖರ್ಚು-ವೆಚ್ಚದ ಬಗ್ಗೆ ನಿಖರ ಮತ್ತು ಸಕಾಲಿಕ ಮಾಹಿತಿ ನೀಡದ ವಾಯುಪಡೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೇಂದ್ರ ಮಾಹಿತಿ ಆಯೋಗ ತರಾಟೆಗೆ ತೆಗೆದುಕೊಂಡಿದೆ.

Vijaya Karnataka Web 24 May 2018, 10:06 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸ ಕೈಗೊಳ್ಳಲು ವಾಯುಪಡೆ ವಿಮಾನ ಬಳಸಿದ್ದರಿಂದ ಆಗಿರುವ ಖರ್ಚು-ವೆಚ್ಚದ ಬಗ್ಗೆ ನಿಖರ ಮತ್ತು ಸಕಾಲಿಕ ಮಾಹಿತಿ ನೀಡದ ವಾಯುಪಡೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೇಂದ್ರ ಮಾಹಿತಿ ಆಯೋಗ ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web modi_1491977516


ಮಾಹಿತಿ ಹಕ್ಕಿನ ಅಡಿಯಲ್ಲಿ ರಿಜಿಸ್ಟರ್ಡ್‌ ಪೋಸ್ಟ್‌ ಮೂಲಕ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರೂ, ಕಳೆದ 2 ತಿಂಗಳಿಂದ ಸೂಕ್ತ ಮಾಹಿತಿ ನೀಡದೆ ವಿಳಂಬ ಮಾಡಿರುವುದು ಆಕ್ಷೇಪಾರ್ಹ ಎಂದು ಮಾಹಿತಿ ಆಯುಕ್ತ ದಿವ್ಯ ಪ್ರಕಾಶ್‌ ಸಿನ್ಹಾ ಅವರು ವಿಚಾರಣೆ ವೇಳೆ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.

ಕಮಾಂಡರ್‌ ಲೋಕೇಶ್‌ ಬಾತ್ರಾ (ನಿವೃತ್ತ) ಎಂಬುವವರು ಆರ್‌ಟಿಐ ಅಡಿಯಲ್ಲಿ ಪ್ರಧಾನಿ ವಿಮಾನಯಾನ ವೆಚ್ಚದ ಬಗ್ಗೆ ಮಾಹಿತಿ ಕೋರಿ ಭಾರತೀಯ ವಾಯುಪಡೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕಳೆದ 7 ತಿಂಗಳಿಂದಲೂ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ಆರೋಪಿಸಿ ಬಾತ್ರಾ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ವಿಭಿನ್ನ ಉತ್ತರ: ಆರಂಭದಲ್ಲಿ ಈ ಬಗ್ಗೆ ಮಾಹಿತಿ ಇಲ್ಲ ಎಂದಿದ್ದ ವಾಯುಪಡೆ ಅಧಿಕಾರಿಗಳು, 7 ತಿಂಗಳ ಬಳಿಕ ವಿಭಿನ್ನ ಉತ್ತರ ನೀಡಿದ್ದರು. ಪ್ರಧಾನಿ ಅವರ ವಿದೇಶಿಯಾನ ವೆಚ್ಚವನ್ನು ಆ ದೇಶದ ಭಾರತೀಯ ರಾಯಭಾರ ಕಚೇರಿಯೇ ಭರಿಸಿದೆ ಎಂದು ಉತ್ತರ ನೀಡಲಾಗಿತ್ತು. ಇದನ್ನೂ ಸಹ ಅರ್ಜಿದಾರರು ಮಾಹಿತಿ ಆಯೋಗದ ಗಮನಕ್ಕೆ ತಂದಿದ್ದರು.

ವಿಚಾರಣೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಮಾಹಿತಿ ಆಯುಕ್ತರು, ಇಬ್ಬರೂ ಅಧಿಕಾರಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ, ಇರುವ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಗುಡುಗಿದ್ದಾರೆ. ಆದರೆ, ಅಧಿಕಾರಿಗಳಾದ ವಿಂಗ್‌ ಕಮಾಂಡರ್‌ ಸುಮನ್‌ ಅಧಿಕಾರಿ ಮತ್ತು ಸ್ಕ್ವಾಡ್ರನ್‌ ಲೀಡರ್‌ ಎಸ್‌.ಎಸ್‌. ಎಲಮುರುಗು ಅವರಿಗೆ ಆಯೋಗ ಯಾವುದೇ ದಂಡ ವಿಧಿಸಿದೆ ವಿನಾಯಿತಿ ಕಲ್ಪಿಸಿದೆ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವಂತೆ ಕಂಡುಬರುತ್ತಿಲ್ಲವಾದ್ದರಿಂದ ದಂಡ ವಿಧಿಸದೆ ಬಿಟ್ಟಿದ್ದಾಗಿ ಆಯುಕ್ತರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ