ಆ್ಯಪ್ನಗರ

ಆರ್‌ಟಿಐನಿಂದ ಸಂಸತ್ ಘನತೆಗೆ ಚ್ಯುತಿ ಹೇಗೆ?: ಸಿಐಸಿ ಪತ್ರ

ಆಂಧ್ರ ಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ವಿ.ನಾಗರ್ಜುನ ರೆಡ್ಡಿ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಗಳ ದಾಖಲೆಗಳನ್ನು ಆರ್‌ಟಿಐ ಕಾಯಿದೆಯಡಿ ಬಹಿರಂಗಪಡಿಸುವುದರಿಂದ ಸಂಸತ್ತಿನ ಘನತೆಗೆ ಹೇಗೆ ಕುಂದುಂಟಾಗುತ್ತದೆ ಎಂಬ ಬಗ್ಗೆ ವಿವರಣೆ ಕೋರಿ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ರಾಜ್ಯಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

Vijaya Karnataka 22 Jun 2018, 10:16 am
ಹೊಸದಿಲ್ಲಿ: ಆಂಧ್ರ ಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ವಿ.ನಾಗರ್ಜುನ ರೆಡ್ಡಿ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಗಳ ದಾಖಲೆಗಳನ್ನು ಆರ್‌ಟಿಐ ಕಾಯಿದೆಯಡಿ ಬಹಿರಂಗಪಡಿಸುವುದರಿಂದ ಸಂಸತ್ತಿನ ಘನತೆಗೆ ಹೇಗೆ ಕುಂದುಂಟಾಗುತ್ತದೆ ಎಂಬ ಬಗ್ಗೆ ವಿವರಣೆ ಕೋರಿ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ರಾಜ್ಯಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
Vijaya Karnataka Web rti


ಜಜ್‌ ರೆಡ್ಡಿ ವಿರುದ್ಧ ಕೈಗೊಂಡ ವಾಗ್ದಂಡನೆ ಪ್ರಕ್ರಿಯೆಗಳಿಗೆ ರಾಜ್ಯಸಭೆ ಸದಸ್ಯರು ಸಹಿ ಹಾಕಿದ ವಿಚಾರದಲ್ಲಿ ಸಚಿವಾಲಯದಿಂದ ಪೂರ್ಣ ಸ್ಪಷ್ಟನೆ ಕೋರಿ ಎಸ್‌. ಮಲ್ಲೇಶ್ವರ ರಾವ್‌ ಅರ್ಜಿ ಸಲ್ಲಿಸಿದ್ದರು. ವಾಗ್ದಾಂಡನೆಗೆ ಸಹಿಹಾಕಿದ ಬಗ್ಗೆ ಒಂದಷ್ಟು ಮಾಹಿತಿಯನ್ನು ರಾವ್‌ ಅವರಿಗೆ ನೀಡಲಾಗಿದೆ. ನೋಟಿಸ್‌ ಆಫ್‌ ಮೋಷನ್‌ನ ದಾಖಲೆಗಳು, ಪತ್ರಕ್ಕೆ ಸಹಿ ಹಿಂಪಡೆದ ಸದಸ್ಯರ ವಿವರಗಳನ್ನು ನೀಡಲಾಗಿಲ್ಲ. ಅವು ಸದನದ ಪ್ರಧಾನ ಕಾರ‍್ಯದರ್ಶಿಗಳ ಬಳಿ ಇವೆ. ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ಸ್ಪಷ್ಟತೆ ಬಯಸಿ ಸಿಐಸಿ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಮಾಹಿತಿ ಆಯುಕ್ತ ಆರ್‌.ಕೆ.ಮಾಥುರ್‌ ಅವರು ಇಂತಹದ್ದೊಂದು ಪ್ರಶ್ನೆ ಮುಂದಿಟ್ಟು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ