ಆ್ಯಪ್ನಗರ

‘ಇದು ಶಾಂತಿ ಕಾಪಾಡೋ ಸಮಯ’ - ಪೌರತ್ವ ಕಾಯ್ದೆ ಪ್ರತಿಭಟನಾಕಾರರಿಗೆ ಪ್ರಧಾನಿ ಮೋದಿ ಮನವಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Agencies 16 Dec 2019, 6:17 pm
ಹೊಸದೆಹಲಿ: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ದೆಹಲಿಯಲ್ಲಿ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ ಅವರು ಇದು ಶಾಂತಿ ಕಾಪಾಡೋ ಸಮಯ ಎಂದಿದ್ದಾರೆ.
Vijaya Karnataka Web citizenship amendment act protest pm modi tweet
‘ಇದು ಶಾಂತಿ ಕಾಪಾಡೋ ಸಮಯ’ - ಪೌರತ್ವ ಕಾಯ್ದೆ ಪ್ರತಿಭಟನಾಕಾರರಿಗೆ ಪ್ರಧಾನಿ ಮೋದಿ ಮನವಿ


ಯಾವುದೇ ರೀತಿಯ ಅಪಪ್ರಚಾರ ಹಾಗೂ ವದಂತಿಗಳಿಗೆ ಕಿವಿಕೊಡಬೇಡಿ. ಒಗ್ಗಟ್ಟು ಹಾಗೂ ಸಹೋದರತೆಯನ್ನು ಬಲಗೊಳಿಸುವ ಸಂದರ್ಭವಿದು. ಈ ನಿಟ್ಟಿಲ್ಲಿ ಯಾವುದೇ ಅಹಿತಕರ ಘಟನೆ ನಡೆಸದೆ ಶಾಂತಿ ಕಾಪಾಡಬೇಕಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.


ಈ ನಡುವೆ ಜಾಮಿಯಾ ಮಿಲಿಯಾ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್‌ ಖಂಡಿಸಿ ಅಲಿಘಡ್ ವಿವಿ, ಹಿಂದೂ ಬನಾರಸ್‌ ವಿವಿ, ಬೆಂಗಳೂರು ಐಐಎಸ್‌ಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಪೊಲೀಸ್ ಪ್ರಹಾರಕ್ಕೆ ಆಕ್ರೋಶ: ಇಂಡಿಯಾ ಗೇಟ್‌ನಲ್ಲಿ ಪ್ರಿಯಾಂಕಾ ಸಾರಥ್ಯದಲ್ಲಿ ಪ್ರತಿಭಟನೆ..!

ದಿಲ್ಲಿ ಜಾಮಿಯಾ ಇಸ್ಲಾಮಿಯಾ ವಿವಿ ಹಾಗೂ ಅಲಿಗಢದ ಮುಸ್ಲಿಂ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಗೇಟ್‌ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ