Please enable javascript.Yoga Prabha,ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ 'ಯೋಗ ಪ್ರಭಾ' ಎಂಬ ಮೆಗಾ ಯೋಗ ಕಾರ್ಯಕ್ರಮ! - civil aviation ministry organises yog prabha to encourage yoga for good health - Vijay Karnataka

ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ 'ಯೋಗ ಪ್ರಭಾ' ಎಂಬ ಮೆಗಾ ಯೋಗ ಕಾರ್ಯಕ್ರಮ!

Vijaya Karnataka Web 25 Apr 2022, 9:42 pm
Embed
ಉತ್ತಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ನಾಗರಿಕ ವಿಮಾನಯಾನ ಸಚಿವಾಲಯವು ಹೊಸದಿಲ್ಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ 'ಯೋಗ ಪ್ರಭಾ' ಎಂಬ ಮೆಗಾ ಯೋಗ ಕಾರ್ಯಕ್ರಮವನ್ನು ಆಯೋಜಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ 600ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸೇರಿದಂತೆ ಅದರ ಅಧೀನದಲ್ಲಿರುವ ಸಂಸ್ಥೆಗಳು ಯೋಗ ಪ್ರದರ್ಶನ ನಡೆಸಿದರು.

ಈ ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ನಿವೃತ್ತ ಜನರಲ್ ಜನರಲ್ ವಿ.ಕೆ. ಸಿಂಗ್ ಉಪಸ್ಥಿತರಿದ್ದರು. ಪರಿಣಿತ ಯೋಗ ಬೋಧಕರು ವಿವಿಧ ಯೋಗ ಮುದ್ರೆಗಳನ್ನು ಈ ವೇಳೆ ಪ್ರದರ್ಶಿಸಿದರು.

ಮೈಸೂರು: ಯೋಗ ದಿನಾಚರಣೆಗೆ ಪ್ರಧಾನಿ ಮೋದಿಗೆ ಪ್ರತಾಪ್‌ ಸಿಂಹ ಆಹ್ವಾನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದ ಭಾಗವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014 ರಲ್ಲಿ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತ್ತು.