ಆ್ಯಪ್ನಗರ

ಪ್ರದ್ಯುಮ್ನ ಕೊಲೆ: ‘ವಯಸ್ಕ’ನಂತೆ ಬಾಲಾರೋಪಿ ವಿಚಾರಣೆ

ಪ್ರಾಪ್ತ ವಯಸ್ಕನಂತೆಯೇ ವಿಚಾರಣೆ ನಡೆಸಬೇಕೆಂದು ಬಾಲ ನ್ಯಾಯ ಮಂಡಳಿ ಆದೇಶಿಸಿದೆ

Vijaya Karnataka 21 Dec 2017, 8:21 am

ಗುರಗಾಂವ್‌: ಪರೀಕ್ಷೆ ಮುಂದೂಡುವ ಸಲುವಾಗಿ ತನ್ನ ಶಾಲೆಯ 2ನೇ ತರಗತಿ ವಿದ್ಯಾರ್ಥಿಯನ್ನೇ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ರಿಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯ 16 ವರ್ಷದ ವಿದ್ಯಾರ್ಥಿಯನ್ನು ಬಾಲಾರೋಪಿ ಎಂದು ಪರಿಗಣಿಸದೆ, ಪ್ರಾಪ್ತ ವಯಸ್ಕನಂತೆಯೇ ವಿಚಾರಣೆ ನಡೆಸಬೇಕೆಂದು ಬಾಲ ನ್ಯಾಯ ಮಂಡಳಿ ಆದೇಶಿಸಿದೆ.

Vijaya Karnataka Web class 11 student to be tried as adult in ryan murder case
ಪ್ರದ್ಯುಮ್ನ ಕೊಲೆ: ‘ವಯಸ್ಕ’ನಂತೆ ಬಾಲಾರೋಪಿ ವಿಚಾರಣೆ


ತನ್ನ ಕೃತ್ಯದ ಪರಿಣಾಮಗಳನ್ನು ಗುರುತಿಸುವಷ್ಟು ಪ್ರೌಢತೆ ಆರೋಪಿಗಿದೆ ಎಂದು ಮಂಡಳಿ ತಿಳಿಸಿದೆ. ಹೀಗಾಗಿ ಆರೋಪಿಯನ್ನು ಡಿ.22ರಂದು ಗುರಗಾಂವ್‌ ಸೆಶನ್ಸ್‌ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.

ಪೋಷಕರ ಸಭೆ ಹಾಗೂ ಪರೀಕ್ಷೆ ಮುಂದೂಡುವ ಸಲುವಾಗಿ ತನ್ನದೇ ಶಾಲೆಯ ಚಿಕ್ಕ ಹುಡುಗ ಪ್ರದ್ಯುಮ್ನನನ್ನು ಸೆ.8ರಂದು ಕೊಲೆ ಮಾಡಿದ್ದಾಗಿ ತನಿಖಾ ಸಂಸ್ಥೆ ಮುಂದೆ ಆರೋಪಿ ಒಪ್ಪಿಕೊಂಡಿದ್ದ. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಡಳಿಯು ನಿರಾಕರಿಸಿತ್ತು.

ಆತನ ಮನೋಸ್ಥಿತಿಯ ಕುರಿತ ಅಧ್ಯಯನಕ್ಕಾಗಿ ಮನಃಶಾಸ್ತ್ರಜ್ಞರನ್ನೊಳಗೊಂಡ ಸಮಿತಿಯನ್ನೂ ಮಂಡಳಿ ರಚಿಸಿತ್ತು. ಆತ ದುರಾಕ್ರಮಿಯಾಗಿದ್ದಾನೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು. ಪ್ರದ್ಯುಮ್ನ ತಂದೆ ಹಾಗೂ ಸಿಬಿಐ ಕೂಡಾ ಆರೋಪಿಯನ್ನು ವಯಸ್ಕನೆಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ