ಆ್ಯಪ್ನಗರ

50:50 ಅಧಿಕಾರ ಹಂಚಿಕೆಗೆ ಒಪ್ಪಲ್ಲ, 13 ಮಂತ್ರಿ ಸ್ಥಾನ ನೀಡಿ ಮೈತ್ರಿಗೆ ಆಹ್ವಾನಿಸಿದ ಬಿಜೆಪಿ

50:50 ಆಧಾರದಲ್ಲಿ ಸಿಎಂ ಸ್ಥಾನವೇ ಬೇಕೆಂದಿದ್ದ ಶಿವಸೇನೆಗೆ ಬಿಜೆಪಿ 13 ಸ್ಥಾನ ಸಂಪುಟ ಸ್ಥಾನ ನೀಡಿ ಮೈತ್ರಿಗೆ ಆಹ್ವಾನಿಸಿದೆ. ಅಷ್ಟೇ ಅಲ್ಲ, ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ ಮಾತುಕತೆಗೂ ಸಿದ್ಧವಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ.

Times Now 30 Oct 2019, 5:00 pm
ಮುಂಬಯಿ: ಒಂದೆಡೆ ಶಿವಸೇನೆ 50:50 ಮುಖ್ಯಮಂತ್ರಿ ಸ್ಥಾನ ಹಂಚಿಕೆಗೆ ಪಟ್ಟುಹಿಡಿದಿದ್ದರೆ, ಇತ್ತ ಬಿಜೆಪಿ ಇದ್ಯಾವುದಕ್ಕೂ ಒಲ್ಲೆ ಎನ್ನುತ್ತಿದೆ. ಏತನ್ಮಧ್ಯೆ ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತುತ ಸಿಎಂ ದೇವೇಂದ್ರ ಫಡ್ನಾವಿಸ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಶಿವಸೇನೆ ಜತೆಗಿನ ಮೈತ್ರಿಗೆ ಹೊಸ ಸೂತ್ರ ಹೆಣೆಯಲಾಗಿದೆ.
Vijaya Karnataka Web Fadnavis


ಮಹಾ ಸರಕಾರ ರಚನೆ ಬಿಕ್ಕಟ್ಟು: ಶಿವಸೇನೆಗೆ ಸಿಎಂ ಸ್ಥಾನ ಬಿಟ್ಟುಕೊಡಲ್ಲ..

ಚುನಾವಣಾ ಫಲಿತಾಂಶದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಒಟ್ಟಾರೆ 105 ಸ್ಥಾನಗಳಿಸಿತ್ತು. ಈ ಹಿನ್ನೆಲೆಯಲ್ಲಿ ಒಟ್ಟಾರೆ 13 ಮಂತ್ರಿ ಸ್ಥಾನವನ್ನು ಶಿವಸೇನೆಗೆ ನೀಡುವುದಾಗಿ ಬಿಜೆಪಿ ಘೋಷಿಸಿದೆ. ಅಂತೆಯೇ 26 ಮಂತ್ರಿ ಸ್ಥಾನವನ್ನು ತನ್ನಲ್ಲೇ ಇಟ್ಟುಕೊಳ್ಳಲು ನಿರ್ಧರಿಸಿದೆ.

ಬಿಜೆಪಿ ಜತೆಗೂಡಿ ಸರಕಾರ ರಚಿಸಲು ಶಿವಸೇನೆಯ 45ಕ್ಕೂ ಹೆಚ್ಚು ಶಾಸಕರು ಬೆಂಬಲಿಸಿದ್ದಾರೆ: ಸಂಜಯ್‌ ಕಾಕಡೆ

ಅಂತೆಯೇ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆ ಬಿಜೆಪಿ ನೋಡಿಕೊಳ್ಳಲಿದ್ದು, ಮಂತ್ರಿ ಮಂಡಲದಲ್ಲಿ 13 ಮಂದಿ ಸಂಪುಟ ದರ್ಜೆ ಸ್ಥಾನ ಶಿವಸೇನೆಗೆ ನೀಡಲಾಗುತ್ತದೆ ಎಂದು ಬಿಜೆಪಿ ಹೇಳಿದೆ. ಮಂತ್ರಿ ಮಂಡಲ ಸೇರಿದಂತೆ ಈ ಹಂಚಿಕೆಯ ವಿಚಾರದಂತೆ ಯಾವುದೇ ವಿಧವಾದ ಮಾತುಕತೆ ಇಲ್ಲ. ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದೆ.


ಇದಕ್ಕೂ ಮುನ್ನ ಶಿವಸೇನೆ ಪ್ರಮುಖ ಇಲಾಖೆ ಶಿವಸೇನೆಗೆ ನೀಡುವಂತೆ ತಾಕೀತು ಮಾಡಿತ್ತು. ಅಲ್ಲದೆ ಸಿಎಂ ಸ್ಥಾನವನ್ನೂ 50:50 ರ ಆಧಾರದಲ್ಲಿ ಅಧಿಕಾರ ಹಂಇಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿತ್ತು. ಚುನಾವಣೆ ಫಲಿತಾಂಶ ಕಳೆದು ವಾರ ಕಳೆದರೂ, ಮಹಾರಾಷ್ಟ್ರ ಸರಕಾರ ರಚನೆ ಬಿಕ್ಕಟ್ಟು ಇನ್ನೂ ಪೂರ್ಣ ಪ್ರಮಾಣದಲ್ಲಿ ಶಮನವಾಗಿಲ್ಲ.

ಮಹಾರಾಷ್ಟ್ರ ಫಲಿತಾಂಶ: 2 ಕ್ಷೇತ್ರಗಳಲ್ಲಿ ನೋಟಾಕ್ಕೆ 2ನೇ ಸ್ಥಾನ

ಇದಲ್ಲದೆ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್‌ ಪಾಟೀಲ್ ಉಭಯ ಪಕ್ಷದ ಪ್ರಮುಖರು ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್‌ ಶಾ ಹಾಗೂ ಶಿವಸೇನ ಮುಖ್ಯಸ್ಥ ಉದ್ದವ್‌ ಠಾಕ್ರೆ ಪರಸ್ಪರ ಮಾತುಕತೆ ನಡೆಸಿ ಮಹಾರಾಷ್ಟ್ರ ಸರಕಾರ ರಚನೆಯ ಸೂತ್ರ ಹೆಣೆಯಲಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮಿತ್‌ ಶಾ ಜತೆ ಶಿವಸೇನಾ ನಡೆಸಿದ ಮಾತುಕತೆ ಬಗ್ಗೆ ದೇವೇಂದ್ರ ಫಡ್ನಾವಿಸ್‌ಗೆ ತಿಳಿದಿಲ್ಲ. ಅಮಿತ್‌ ಶಾ ಅವರಿಗೆ ಮಾತ್ರ ಗೊತ್ತಿದೆ. ಹೀಗಾಗಿ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ