ಆ್ಯಪ್ನಗರ

ರಾಹುಲ್‌ ಭೇಟಿ ಮಾಡಲಿರುವ ಎಚ್‌ಡಿಕೆ

ಮೈತ್ರಿ ಸರಕಾರದ ಭವಿಷ್ಯದ ಬಗ್ಗೆ ಆತಂಕ ಮೂಡಿರುವ ಬೆಳವಣಿಗೆ ಬೆನ್ನಿಗೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲು ಸಿಎಂ ಎಚ್‌ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ...

Vijaya Karnataka 30 Aug 2018, 7:42 am
ಬೆಂಗಳೂರು: ಮೈತ್ರಿ ಸರಕಾರದ ಭವಿಷ್ಯದ ಬಗ್ಗೆ ಆತಂಕ ಮೂಡಿರುವ ಬೆಳವಣಿಗೆ ಬೆನ್ನಿಗೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.
Vijaya Karnataka Web hdk


ಗುರುವಾರ ಬೆಳಗ್ಗೆ ದಿಲ್ಲಿಗೆ ಪ್ರಯಾಣ ಬೆಳೆಸುವ ಅವರು ದಿಲ್ಲಿ ತಲುಪುತ್ತಿದ್ದಂತೆಯೇ ರಾಹುಲ್‌ ಭೇಟಿ ಮಾಡಲಿದ್ದಾರೆ. ದೋಸ್ತಿ ಪಕ್ಷಗಳಲ್ಲಿ ಗೊಂದಲ ಹೆಚ್ಚಾಗುತ್ತಿರುವುದರಿಂದ ಈ ಮಾತುಕತೆ ಮಹತ್ವ ಪಡೆದುಕೊಳ್ಳಲಿದೆ.

ಬೆಳಗ್ಗೆ 9.30 ಕ್ಕೆ ರಾಹುಲ್‌ ಭೇಟಿಗೆ ಸಮಯ ನಿಗದಿಯಾಗಿದೆ. ಈ ವೇಳೆ ರಾಜ್ಯದಲ್ಲಿನ ವಿದ್ಯಮಾನದ ಬಗ್ಗೆ ಎಚ್‌ಡಿಕೆ ಚರ್ಚಿಸುವ ಸಾಧ್ಯತೆಯಿದೆ. ಮೈತ್ರಿ ಸರಕಾರ ಅತಂತ್ರಗೊಳಿಸುವ ಯತ್ನ ನಡೆಯುತ್ತಿರುವುದಾಗಿ ಸಿಎಂ ಒಮ್ಮೆ ಹೇಳಿಕೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಯ ನಿರ್ಧಾರವಾಗಿದ್ದರೂ ಹಾಸನ ಸೇರಿ ಕೆಲ ಜಿಲ್ಲೆಗಳಲ್ಲಿ ಸಮಸ್ಯೆ ಇರುವುದಾಗಿಯೂ ಸಿಎಂ ಒಪ್ಪಿಕೊಂಡಿದ್ದಾರೆ. ಇಂಥ ಸೂಕ್ಷ್ಮ ಸಂಗತಿ ಬಗ್ಗೆ ರಾಹುಲ್‌ ಜತೆಗೆ ಸಮಾಲೋಚಿಸಬಹುದು. ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದ ಪರಿಣಾಮಗಳ ಕುರಿತೂ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಅವರು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ