ಆ್ಯಪ್ನಗರ

ಶಾಲೆಗೆ ಬೀಗ: ಕಚೇರಿಯಲ್ಲಿ ಜಾಗ ಮಾಡಿಕೊಟ್ಟ ಡಿಸಿ

ಸದಾ ಸಮಾಜಮುಖಿ ಹಾಗೂ ಸಾರ್ವಜನಿಕ ನೋವಿಗೆ ಸ್ಪಂದಿಸುವ ಕೋಳಿಕ್ಕೋಡ್ ಜಿಲ್ಲಾಧಿಕಾರಿ ಎನ್. ಪ್ರಶಾಂತ್ ಇದೀಗ ಮತ್ತದೇ ಹೃದಯ ವೈಶಾಲ್ಯತೆ ಮೆರೆದು ಸುದ್ದಿಯಲ್ಲಿದ್ದಾರೆ.

ಏಜೆನ್ಸೀಸ್ 9 Jun 2016, 6:31 pm
ಮಲಯಾಳಂ ಸಮಯ್
Vijaya Karnataka Web collector hits again
ಶಾಲೆಗೆ ಬೀಗ: ಕಚೇರಿಯಲ್ಲಿ ಜಾಗ ಮಾಡಿಕೊಟ್ಟ ಡಿಸಿ


ಕೋಳಿಕ್ಕೋಡ್:
ಸದಾ ಸಮಾಜಮುಖಿ ಹಾಗೂ ಸಾರ್ವಜನಿಕ ನೋವಿಗೆ ಸ್ಪಂದಿಸುವ ಕೋಳಿಕ್ಕೋಡ್ ಜಿಲ್ಲಾಧಿಕಾರಿ ಎನ್. ಪ್ರಶಾಂತ್ ಇದೀಗ ಮತ್ತದೇ ಹೃದಯ ವೈಶಾಲ್ಯತೆ ಮೆರೆದು ಸುದ್ದಿಯಲ್ಲಿದ್ದಾರೆ.

ಕೋರ್ಟ್ ಆದೇಶದಂತೆ ಶಾಲೆಯೊಂದಕ್ಕೆ ಬೀಗ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಅದು ಮತ್ತೆ ಆರಂಭವಾಗುವವರೆಗೂ ತಮ್ಮ ಕಚೇರಿಯಲ್ಲಿಯೇ ಮಕ್ಕಳಿಗೆ ಪಾಠ ಕೇಳಲು ಅನುವು ಮಾಡಿಕೊಟ್ಟಿದ್ದಾರೆ.

ಮಲಪರಂಬ ಅನುದಾನಿತ ಪ್ರಾಥಮಿಕ ಶಾಲೆಯನ್ನು ಸುಪ್ರೀಂ ಕೋರ್ಟ್ ಆದೇಶದನ್ವಯ ಬೀಗ ಜಡಿಯಲಾಗಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಎಲ್ಲಿಗೆ ಹೋಗುವುದು ಎಂಬ ಚಿಂತೆ ಕಾಡಿತ್ತು. ಮಕ್ಕಳಿಗೆ ಯಾವ ದ್ವಂದ್ವವೂ ಆಗದಂತೆ, ತಮ್ಮ ಕಚೇರಿಗೇ ಕರೆದುಕೊಂಡು ಹೋಗಿ, ಕಾನ್ಫರೆನ್ಸ್ ಹಾಲ್‌ನಲ್ಲಿ ಪಾಠ ಕೇಳಲು ಅನುವು ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಮೊದಲ ತರಗತಿಯನ್ನು ಅವರೇ ತೆಗೆದುಕೊಳ್ಳುತ್ತಿದ್ದು, ಮಕ್ಕಳಲ್ಲಿ ಹೊಸ ಉತ್ಸಾಹ ತುಂಬುತ್ತಿದ್ದಾರೆ.

ಶಾಲೆ ಮತ್ತೆ ಆರಂಭವಾಗುವವರೆಗೂ ಇದೇ ವ್ಯವಸ್ಥೆ ಮುಂದುವರಿಯಲಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ, ಶಾಲಾ ಶಿಕ್ಷಕರಿಗೂ ಅಲ್ಲಿಯೇ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗಿದೆ. ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ಡಿಸಿಯ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ