ಆ್ಯಪ್ನಗರ

ಪದ್ಮ ಪ್ರಶಸ್ತಿ: ಶ್ರೀಸಾಮಾನ್ಯನೂ ಅರ್ಜಿ ಸಲ್ಲಿಸಲು ಅವಕಾಶ

ಎಲೆಮರೆ ಕಾಯಿಯಂತೆ ದುಡಿಯುತ್ತಿರುವ ಸಾಧಕರನ್ನು 2018ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಯಾರೂ ಬೇಕಾದರೂ ...

Agencies 19 Aug 2017, 8:57 am

ಹೊಸದಿಲ್ಲಿ: ಎಲೆಮರೆ ಕಾಯಿಯಂತೆ ದುಡಿಯುತ್ತಿರುವ ಸಾಧಕರನ್ನು 2018ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಯಾರೂ ಬೇಕಾದರೂ ಯಾವ ಸಾಧಕರ ಹೆಸರನ್ನಾದರೂ www.padmaawards.gov.in ಮೂಲಕ ಶಿಫಾರಸು ಮಾಡಬಹುದು ಎಂದು ಹೇಳಿದೆ. ಹೀಗೆ ಹೆಸರು ಶಿಫಾರಸಿಗೆ ಸೆಪ್ಟೆಂಬರ್‌ 15ರವರೆಗೆ ಗಡುವು ವಿಧಿಸಲಾಗಿದೆ.

ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಕಾರಗಳು, ಸಚಿವರು ಹಾಗೂ ರಾಜಕಾರಣಿಗಳು ಇತರರು ಪ್ರಶಸ್ತಿಗೆ ಶಿಫಾರಸು ಮಾಡುತ್ತಿದ್ದರು. ಆದರೆ ಈ ಪರಿಪಾಠವನ್ನು ಪ್ರಧಾನಿ ಮೋದಿ ಸರಕಾರ ಕೊಂಚ ಮಾರ್ಪಡಿಸಿ ಜನ ಸಾಮಾನ್ಯರಿಗೂ ಸಾಧಕರ ಹೆಸರನ್ನು ನಾಮಕರಣ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ