ಆ್ಯಪ್ನಗರ

ತಾಯಿಗೆ ಕಿರುಕುಳ: ಅಜಯ್ ಸಿಂಗ್‌ ವಿರುದ್ಧ ದೂರು

ಹೆತ್ತ ತಾಯಿಗೆ ಮಾನಸಿಕ ಕಿರುಕುಳ ನೀಡಿ ಮನೆಯಿಂದ ಹೊರಗಟ್ಟಿದ ಆರೋಪಕ್ಕೊಳಗಾಗಿರುವ ಮಧ್ಯಪ್ರದೇಶ ಪ್ರತಿಪಕ್ಷ ನಾಯಕ ಅಜಯ್‌ ಸಿಂಗ್‌ ಅವರು ಇದೀಗ, ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ತಾಯಿಗೇ ಮೊರೆ ಇಟ್ಟಿದ್ದಾರೆ.

Vijaya Karnataka 21 Jun 2018, 10:54 am
ಭೋಪಾಲ್‌: ಹೆತ್ತ ತಾಯಿಗೆ ಮಾನಸಿಕ ಕಿರುಕುಳ ನೀಡಿ ಮನೆಯಿಂದ ಹೊರಗಟ್ಟಿದ ಆರೋಪಕ್ಕೊಳಗಾಗಿರುವ ಮಧ್ಯಪ್ರದೇಶ ಪ್ರತಿಪಕ್ಷ ನಾಯಕ ಅಜಯ್‌ ಸಿಂಗ್‌ ಅವರು ಇದೀಗ, ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ತಾಯಿಗೇ ಮೊರೆ ಇಟ್ಟಿದ್ದಾರೆ.
Vijaya Karnataka Web ajay singh


ಅಜಯ್‌ ಸಿಂಗ್‌ ಮತ್ತು ಅಭಿಮನ್ಯು ಸಿಂಗ್‌ ಅವರ ತಾಯಿ, ಕಾಂಗ್ರೆಸ್‌ ಧುರೀಣ ದಿವಂಗತ ಅರ್ಜುನ್‌ ಸಿಂಗ್‌ ಅವರ ಪತ್ನಿ 83 ವರ್ಷದ ಸರೋಜಾ ಕುಮಾರಿ ಅವರು ತಮ್ಮ ಮಕ್ಕಳು ತಮಗೆ ಮಾನಸಿಕ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು 'ಮಹಿಳೆಯರ ಕೌಟುಂಬಿಕ ಹಿಂಸಾಚಾರ ರಕ್ಷಣಾ ಕಾಯ್ದೆ'ಯಡಿ ಭೋಪಾಲ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 19ರಂದು ವಿಚಾರಣೆ ಆರಂಭಿಸುವುದಕ್ಕೂ ಕೋರ್ಟ್‌ ತೀರ್ಮಾನಿಸಿದ್ದಾಗಿದೆ.

ಈ ನಡುವೆ, ಬಿಜೆಪಿಯ ಪಿತೂರಿಯಿಂದಾಗಿ ತಮ್ಮ ಕುಟುಂಬದೊಳಗಿನ ವಿವಾದ ಬೀದಿಗೆ ಬಂದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಮುಖಂಡ ಅಜಯ್‌ ಸಿಂಗ್‌, ಏನೇ ವಿವಾದವಿದ್ದರೂ ಮನೆಯಲ್ಲಿ ನಾವೆಲ್ಲ ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳೋಣ ಎಂದು ತಾಯಿ ಸರೋಜಾ ಕುಮಾರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ