ಆ್ಯಪ್ನಗರ

ಕಾಂಗ್ರೆಸ್‌ ಸಾರಥಿ ಆಯ್ಕೆ ಇಂದು

ಮೂಲಗಳ ಪ್ರಕಾರ ಹಂಗಾಮಿ ಅಧ್ಯಕ್ಷರೊಬ್ಬರನ್ನು ಆಯ್ಕೆ ಮಾಡಿ, ನಂತರ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ.

Agencies 10 Aug 2019, 5:00 am
ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜೀನಾಮೆ ಬಳಿಕ ಸುಮಾರು ಎರಡು ತಿಂಗಳಿಂದ ನಾಯಕರಿಲ್ಲದೆ ಅನಾಥವಾಗಿರುವ ಕಾಂಗ್ರೆಸ್‌ಗೆ ಹೊಸ ಸಾರಥಿಯ ಆಯ್ಕೆ ಇಂದು ನಡೆಯಕಲಿದೆ.
Vijaya Karnataka Web cong to pick party chief today mallikarjun kharge mukul wasnik front runners to succeed rahul
ಕಾಂಗ್ರೆಸ್‌ ಸಾರಥಿ ಆಯ್ಕೆ ಇಂದು


ಶನಿವಾರ ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತ ಅಂತಿಮ ತೀರ್ಮಾನ ಹೊರಬೀಳಲಿದೆ.
ಮೂಲಗಳ ಪ್ರಕಾರ ಹಂಗಾಮಿ ಅಧ್ಯಕ್ಷರೊಬ್ಬರನ್ನು ಆಯ್ಕೆ ಮಾಡಿ, ನಂತರ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಮಾಜಿ ಕೇಂದ್ರ ಸಚಿವರು ಹಾಗೂ ನೆಹರೂ-ಗಾಂಧಿ ಕುಟುಂಬದ ನಿಷ್ಠರೂ ಆಗಿರುವ ಮುಕುಲ್‌ ವಾಸ್ನಿಕ್‌, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿವೆ.
ಸುಶೀಲ್‌ ಕುಮಾರ್‌ ಶಿಂಧೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೆಸರುಗಳೂ ಚಾಲ್ತಿಯಲ್ಲಿವೆ. ಈ ಮಧ್ಯೆ, ಸಚಿನ್‌ ಪೈಲಟ್‌ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಹೆಸರುಗಳನ್ನು ಶಿಫಾರಸು ಮಾಡಿ ಮುಂಬಯಿ ಕಾಂಗ್ರೆಸ್‌ ಮುಖ್ಯಸ್ಥ ಮಿಲಿಂದ್‌ ದೇವೋರಾ ಟ್ವೀಟ್‌ ಮಾಡಿದ್ದಾರೆ.
ಸೋನಿಯಾ ಚರ್ಚೆ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಪಕ್ಷದ ಹಿರಿಯ ಮುಖಂಡರಾದ ಅಹ್ಮದ್‌ ಪಟೇಲ್‌, ಕೆ.ಸಿ. ವೇಣುಗೋಪಾಲ್‌ ಮತ್ತು ಎ.ಕೆ. ಆ್ಯಂಟನಿ ಅವರೊಂದಿಗೆ ಈ ಬಗ್ಗೆ ಪೂರ್ವಭಾವಿ ಸಮಾಲೋಚನೆ ನಡೆಸಿದ್ದಾರೆ.

ಹಿರಿಯ ಮತ್ತು ಯುವ ನಾಯಕರ ಪೈಪೋಟಿ
ಹೊಸ ಅಧ್ಯಕ್ಷರ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲಿ ವಿಭಿನ್ನ ಅಭಿಪ್ರಾಯಗಳು ಮೂಡಿ ಬಂದಿರುವುದರಿಂದ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ.
ಅಧಃಪತನ ಕಾಣುತ್ತಿರುವ ಕಾಂಗ್ರೆಸ್‌ ಅನ್ನು ಮೇಲೆತ್ತಲು ಯುವಕರೇ ಸಮರ್ಥರು ಎಂಬ ಭಾವನೆ ಯುವ ನಾಯಕರಲ್ಲಿ ಮೂಡಿದೆ. ಆದ್ದರಿಂದ ಈ ಬಾರಿ ಪಕ್ಷದ ಸಾರಥ್ಯವನ್ನು ಯುವ ನಾಯಕರಿಗೆ ನೀಡಬೇಕೆಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ. ಇವರಲ್ಲಿ ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಮತ್ತು ಮಾಜಿ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಮುಂಚೂಣಿಯಲ್ಲಿ ಇದ್ದಾರೆ. ಇವರಿಬ್ಬರೂ ರಾಹುಲ್‌ ಗಾಂಧಿಗೆ ಆಪ್ತರೂ ಹೌದು.

ದಲಿತ ನಾಯಕರಿಗೆ ಮಣೆ:
ಹಿರಿಯ ನಾಯಕರ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಮುಕುಲ್‌ ವಾಸ್ನಿಕ್‌ ಮತ್ತು ಅಶೋಕ್‌ ಗೆಹ್ಲೋಟ್‌ ಸ್ಪರ್ಧೆಯಲ್ಲಿದ್ದಾರೆ. ಹಿರಿಯರಿಗೆ ಮಣೆ ಹಾಕುವುದಾದರೆ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಚ್ಚಿನ ಅವಕಾಶಗಳಿವೆ. ಹಂತ ಹಂತವಾಗಿ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಕ್ಕೇರಿರುವ ಅವರು, ಪಕ್ಷವನ್ನು ಮತ್ತೆ ಪುಟಿದೇಳುವಂತೆ ಮಾಡುವ ಸಾಮರ್ಥ್ಯ‌ ಹೊಂದಿದ್ದಾರೆ ಎಂಬ ಚರ್ಚೆ ನಡೆದಿದೆ. ಕಾಂಗ್ರೆಸ್‌ನಿಂದ ವಿಮುಖವಾಗುತ್ತಿರುವ ದಲಿತ ಮತ ಸೆಳೆಯುವ ಉದ್ದೇಶದಿಂದ ಖರ್ಗೆ ಅವರಿಗೆ ಚಾನ್ಸ್‌ ನೀಡುವ ಸಾಧ್ಯೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ವಾಸ್ನಿಕ್‌ ಸಹ ದಲಿತ ಮುಖಂಡರೇ ಆಗಿದ್ದು, ಹಿರಿಯ ಮುಖಂಡರ ಪೈಕಿ ಖರ್ಗೆ ಮತ್ತು ವಾಸ್ನಿಕ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ