ಆ್ಯಪ್ನಗರ

ಕಾಂಗ್ರೆಸ್ ಕೆಳಮಟ್ಟದಲ್ಲಿ ಸಾಂಸ್ಥಿಕ ಉಪಸ್ಥಿತಿ ಕಳೆದುಕೊಂಡಿದೆ: ಪಿ ಚಿದಂಬರಂ ಆರೋಪ!

ಕಪಿಲ್ ಸಿಬಲ್ ಬಳಿಕ ಇದೀಗ ಕಾಂಗ್ರೆಸ್ ಉನ್ನತ ನಾಯಕತ್ವದ ನಿಷ್ಕ್ರೀಯತೆಯನ್ನು ಟೀಕಿಸಿರುವ ಮತ್ತೋರ್ವ ಹಿರಿಯ ನಾಯಕ ಪಿ. ಚಿದಂಬರಂ, ಕಾಂಗ್ರೆಸ್ ಕೆಳಮಟ್ಟದಲ್ಲಿ ಸಾಂಸ್ಥಿಕ ಉಪಸ್ಥಿತಿ ಕಳೆದುಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Vijaya Karnataka Web 18 Nov 2020, 3:14 pm
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯ ಸೋಲು ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಪಕ್ಷದ ಹಿರಿಯ ನಾಯಕರು ಇದೀಗ ಉನ್ನತ ನಾಯಕತ್ವದ ವಿರುದ್ಧ ಅಪಸ್ವರ ಎತ್ತಲು ಆರಂಭಿಸಿದ್ದಾರೆ.
Vijaya Karnataka Web p chidambaram bccl
ಸಂಗ್ರಹ ಚಿತ್ರ


ಕಪಿಲ್ ಸಿಬಲ್ ಬಳಿಕ ಇದೀಗ ಕಾಂಗ್ರೆಸ್ ಉನ್ನತ ನಾಯಕತ್ವದ ನಿಷ್ಕ್ರೀಯತೆಯನ್ನು ಟೀಕಿಸಿರುವ ಮತ್ತೋರ್ವ ಹಿರಿಯ ನಾಯಕ ಪಿ. ಚಿದಂಬರಂ, ಕಾಂಗ್ರೆಸ್ ಕೆಳಮಟ್ಟದಲ್ಲಿ ಸಾಂಸ್ಥಿಕ ಉಪಸ್ಥಿತಿ ಕಳೆದುಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣಾ ಸೋಲಿಗಿಂತಲೂ ಹಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿರುವುದು ತಮ್ಮನ್ನು ಚಿಂತೆಗೀಡು ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ.

ಬೇರೆ ಪಕ್ಷ ಸೇರಿ, ಇಲ್ಲ ಸ್ವಂತ ಪಕ್ಷ ಕಟ್ಟಿ: ಕಪಿಲ್ ಸಿಬಲ್‌ಗೆ ಅಧೀರ್ ರಂಜನ್ ಚೌಧರಿ ತಿರುಗೇಟು!

ಈ ಉಪಚುನಾವಣೆಗಳ ಸೋಲು, ಕಾಂಗ್ರೆಸ್ ಕೆಳಮಟ್ಟದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಲ್ಲಿ ನಾವು ಜಯದ ಸಮೀಪಕ್ಕೆ ಬಂದು ಸೋತಿದ್ದೇವೆ. ಆದರೆ ಈ ಅದ್ಭುತ ಪ್ರದರ್ಶನದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಭಾಗವಾಗಿರುವ ಆರ್‌ಜೆಡಿ ಪಾಲು ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ಬಿಹಾರದಲ್ಲೂ ಹೇಳಿಕೊಳ್ಳುವಂತ ಸಾಧನೆಯನ್ನು ಮಾಡಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.

ಬಿಹಾರದಲ್ಲಿ ಎಡಪಕ್ಷಗಳು ಹಾಗೂ ಇತರೆ ಸಣ್ಣ ಪಕ್ಷಗಳು ಕೂಡ ಉತ್ತಮ ಪ್ರದರ್ಶನ ತೋರಿವೆ. ಇದಕ್ಕೆ ಆ ಪಕ್ಷಗಳು ಕೆಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದ್ದೇ ಕಾರಣ ಎಂದು ಚಿದಂಬರಂ ನುಡಿದಿದ್ದಾರೆ.

ಬಿಹಾರ ಸೋಲು: ಹೈಕಮಾಂಡ್ 'ಆಲ್ ಇಸ್ ವೆಲ್' ಮೂಡ್‌ನಲ್ಲಿದೆ ಎಂದ ಕಪಿಲ್ ಸಿಬಲ್!

ಬಿಹಾರ ಚುನಾವಣೆಯ ಸೋಲಿನ ಪರಾಮರ್ಶೆಯೂ ನಡೆಸದ ಹೈಕಮಾಂಡ್ ವಿರುದ್ಧ, ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ