ಆ್ಯಪ್ನಗರ

ಹಿಂದುಗಳ ಬಗ್ಗೆ ಗುಲಾಂ ನಬಿ ಆಜಾದ್ ಅವಹೇಳನ: ಬಿಜೆಪಿ ಆರೋಪ

ಗುಲಾಂ ಹೇಳಿಕೆ ದ್ವಂದ್ವದಿಂದ ಕೂಡಿದೆ. ಅದು ಹಿಂದುಗಳ ಬಗ್ಗೆ ಕೆಟ್ಟ ಭಾವನೆ ಮೂಡಿಸುವಂತಿದೆ, ಹೀಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

Vijaya Karnataka Web 19 Oct 2018, 7:17 am
ಹೊಸದಿಲ್ಲಿ: ಹಿಂದು ಅಭ್ಯರ್ಥಿಗಳು ತನ್ನನ್ನು ಇತ್ತೀಚಿಗೆ ಕಾರ್ಯಕ್ರಮಗಳಿಗೆ ಕರೆಯುತ್ತಿಲ್ಲ, ಪ್ರಚಾರ ಕಾರ್ಯಗಳಿಗೆ ನನಗೆ ಅವರಿಂದ ಆಹ್ವಾನ ಕಡಿಮೆಯಾಗಿದೆ ಎಂದಿರುವ ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Vijaya Karnataka Web Gulam nabi azad


ಗುಲಾಂ ಹೇಳಿಕೆ ದ್ವಂದ್ವದಿಂದ ಕೂಡಿದೆ. ಅದು ಹಿಂದುಗಳ ಬಗ್ಗೆ ಕೆಟ್ಟ ಭಾವನೆ ಮೂಡಿಸುವಂತಿದೆ, ಹೀಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬುಧವಾರ ಲಖನೌದ ಅಲಿಘಡ್‌ ಮುಸ್ಲಿಂ ಯುನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಗುಲಾಂ ನಬಿ ಆಜಾದ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುವ ಜತೆಗೆ ಹಿಂದು ಅಭ್ಯರ್ಥಿಗಳ ಬಗ್ಗೆ ಹೇಳಿಕೆ ನೀಡಿದ್ದರು.

ಗುಲಾಂ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್‌ ಮತಗಳಿಕೆ ಕುಸಿಯುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಜನಪ್ರಿಯತೆ ಇಲ್ಲವಾಗಿದೆ, ಹೀಗಾಗಿ ಆಜಾದ್‌ರನ್ನು ಯಾರೂ ಭಾಷಣಕ್ಕೆ ಕರೆಯುತ್ತಿಲ್ಲ. ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳುವುದು ಬಿಟ್ಟು, ಹಿಂದು-ಮುಸ್ಲಿಂ ಬಗ್ಗೆ ಮಾತನಾಡುತ್ತಿದ್ದಾರೆ.

ಹಿಂದುಗಳ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದನ್ನು ಗುಲಾಂ ನಿಲ್ಲಿಸಬೇಕು. ಹಿಂದುಗಳ ಬಗ್ಗೆ ಕಾಂಗ್ರೆಸ್ ನಾಯಕರಿಗಿರುವ ಧೋರಣೆಯನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ