ಆ್ಯಪ್ನಗರ

ಲೋಕಪಾಲ: ಮತ್ತೆ ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ ಖರ್ಗೆ

ಲೋಕಪಾಲ ಆಯ್ಕೆ ಕುರಿತು ಗುರುವಾರ ನಡೆದಿದ್ದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದ ಆಹ್ವಾನವನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರಸ್ಕರಿಸಿದ್ದಾರೆ.

Vijaya Karnataka Web 19 Jul 2018, 8:36 pm
ಹೊಸದಿಲ್ಲಿ: ಲೋಕಪಾಲ ಆಯ್ಕೆ ಕುರಿತು ಗುರುವಾರ ನಡೆದಿದ್ದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದ ಆಹ್ವಾನವನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರಸ್ಕರಿಸಿದ್ದಾರೆ.
Vijaya Karnataka Web kharge


ವಿಶೇಷ ಆಹ್ವಾನಿತನೆಂಬ ಮನ್ನಣೆ ಬೇಕಾಗಿಲ್ಲ, ಅತಿದೊಡ್ಡ ವಿಪಕ್ಷದ ನಾಯಕನಿಗೆ ಸಮಿತಿಯಲ್ಲಿ ಸ್ಥಾನ ನೀಡಬೇಕು ಎಂಬ ಲೋಕಪಾಲ ಕಾಯ್ದೆಯ ತಿದ್ದುಪಡಿಗೆ ಸರಕಾರ ಮನ್ನಣೆ ನೀಡುತ್ತಿಲ್ಲವಾದ್ದರಿಂದ ಸಭೆಯ ಆಹ್ವಾನ ತಿರಸ್ಕರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಮೊದಲು ಲೋಕಪಾಲ ಆಯ್ಕೆ ಕುರಿತಂತೆ ಮಾರ್ಚ್ 1 ಮತ್ತು ಏಪ್ರಿಲ್ 10ರಂದು ನಡೆದಿದ್ದ ಸಭೆಗೂ ಖರ್ಗೆಗೆ ಆಹ್ವಾನವಿತ್ತಾದರೂ, ಅವರು ಹಾಜರಾಗಿಲ್ಲ. ಈ ಬಾರಿ ಮತ್ತೆ ಸಭೆಗೆ ಹಾಜರಾಗದೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಆಯ್ಕೆ ಸಮಿತಿಗೆ ಪ್ರಧಾನಿ ಮೋದಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರು ವಿವಿಧ ಪಕ್ಷಗಳ ಹಿರಿಯ ನಾಯಕರಿಗೆ ಸಭೆಗೆ ಆಹ್ವಾನ ನೀಡಿದ್ದರು.
ಆದರೆ ಲೋಕಪಾಲ ನೇಮಕ ಮತ್ತು ಇತರ ವಿಚಾರಗಳ ಕುರಿತು ಈ ಹಿಂದೆ ಪ್ರಧಾನಿ ಕಾರ್ಯಾಲಯಕ್ಕೆ ಬರೆದಿದ್ದ ಪತ್ರಗಳಿಗೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಖರ್ಗೆ ಮೋದಿ ಜತೆ ಮುನಿಸಿಕೊಂಡಿದ್ದು, ಇತರೆ ಕೆಲಸದ ಕಾರಣ ನೀಡಿ ಲೋಕಪಾಲ ಆಯ್ಕೆ ಕುರಿತ ಸಭೆಯನ್ನು ತಪ್ಪಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ