ಆ್ಯಪ್ನಗರ

ಎಲ್ಲರಿಗೂ ಗೊತ್ತು ಬಿಡಿ: ಸದೃಢ ರಕ್ಷಣಾ ವ್ಯವಸ್ಥೆ ಎಂದ ಅಮಿತ್ ಶಾಗೆ ರಾಹುಲ್ ತಿರುಗೇಟು!

ಭಾರತ ತನ್ನ ಗಡಿಗಳನ್ನು ರಕ್ಷಿಸುವಲ್ಲಿ ಸಫಲವಾಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ನಮ್ಮ ಗಡಿಗಳು ಅದೆಷ್ಟು ಸುರಕ್ಷಿತವಾಗಿವೆ ಎಂಬುದು ಎಲ್ಲರಿಗೂ ಗೊತ್ತು ಎಂದು ರಾಹುಲ್ ಕಿಚಾಯಿಸಿದ್ದಾರೆ.

Vijaya Karnataka Web 8 Jun 2020, 3:21 pm
ನವದೆಹಲಿ: ಅಮೆರಿಕ, ಇಸ್ರೇಲ್ ನಂತರ ಇಡೀ ವಿಶ್ವದಲ್ಲಿ ಹೆಚ್ಚಿನ ಗಡಿ ಸುರಕ್ಷತೆ ಹೊಂದಿರುವ ರಾಷ್ಟ್ರ ಭಾರತ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
Vijaya Karnataka Web rahul gandhi
ಸಂಗ್ರಹ ಚಿತ್ರ


ನಿನ್ನೆ(ಭಾನುವಾರ) ಬಿಹಾರ ಚುನಾವಣೆ ಹಿನ್ನೆಲಯಲ್ಲಿ ವರ್ಚುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಭಾರತ ತನ್ನ ಗಡಿಗಳನ್ನು ರಕ್ಷಣೆ ಮಾಡುವಲ್ಲಿ ಸಫಲವಾಗಿದೆ ಎಂದು ಹೇಳಿದ್ದರು.

ಅಮೆರಿಕ, ಇಸ್ರೇಲ್ ಬಳಿಕ ಇಡೀ ವಿಶ್ವದಲ್ಲೇ ಗಡಿಗಳನ್ನು ಸುರಕ್ಷಿತವಾಗಿಟ್ಟ ರಾಷ್ಟ್ರವೆಂದರೆ ಅದು ಭಾರತ ಎಂದು ಅಮಿತ ಶಾ ಅಭಿಪ್ರಾಯಪಟ್ಟಿದ್ದರು.

ಬಿಹಾರದಲ್ಲಿ ಅಮಿತ್ ಶಾ ವರ್ಚುವಲ್ ರ‍್ಯಾಲಿ ವಿರೋಧಿಸಿ ಆರ್‌ಜೆಡಿಯಿಂದ ಪ್ರತಿಭಟನೆ!

ಅಮಿತ್ ಶಾ ಹೇಳಿಕೆಯನ್ನು ಟೀಕಿಸಿರುವ ರಾಹುಲ್ ಗಾಂಧಿ, ನಮ್ಮ ಗಡಿಗಳು ಅದೆಷ್ಟು ಸುರಕ್ಷಿತವಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಅಮಿತ್ ಶಾ ತಮ್ಮ ಸಮಾಧಾನಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಕುಹುಕವಾಡಿದ್ದಾರೆ.


ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು: ರಾಹುಲ್ ಗಾಂಧಿ

ಭಾರತ-ಚೀನಾ ಗಡಿ ತಕರಾರು ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ಗಡಿ ಸಮಸ್ಯೆ ಮತ್ತು ವಸ್ತುಸ್ಥಿತಿಯನ್ನು ದೇಶಕ್ಕೆ ತಿಳಿಸಿ ಎಂದು ಮೋದಿ ಸರ್ಕಾರವನ್ನು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ