ಆ್ಯಪ್ನಗರ

ಎಂ.ಬಿ ಪಾಟೀಲ್‌ಗೆ ಕೆಪಿಸಿಸಿ ಪಟ್ಟ ನೀಡಿ; ಸೋನಿಯಾ ಮುಂದೆ ಸಿದ್ದು ಡಿಮ್ಯಾಂಡ್ ?

ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂ.ಬಿ ಪಾಟೀಲ್‌ಗೆ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮಂಗಳವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಸಿದ್ದರಾಮಯ್ಯ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

Vijaya Karnataka Web 14 Jan 2020, 6:21 pm
ಹೊಸದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ ಪಾಟೀಲ್‌ಗೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಮಂಗಳವಾರ ಸೋನಿಯಾ ಭೇಟಿ ಮಾಡಿದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆ ಹಾಗೂ ಹೊಂದಾಣಿಗೆ ದೃಷ್ಟಿಯಲ್ಲಿ ಡಿ.ಕೆ ಶಿವಕುಮಾರ್‌ ಬದಲಾಗಿ ಎಂ.ಬಿ ಪಾಟೀಲ್‌ ಅವರ ಆಯ್ಕೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Vijaya Karnataka Web congress leader siddaramaiah meets sonia gandhi at delhi
ಎಂ.ಬಿ ಪಾಟೀಲ್‌ಗೆ ಕೆಪಿಸಿಸಿ ಪಟ್ಟ ನೀಡಿ; ಸೋನಿಯಾ ಮುಂದೆ ಸಿದ್ದು ಡಿಮ್ಯಾಂಡ್ ?


ಸೋನಿಯಾ ಗಾಂಧಿ ಅವರ ಜೊತೆಗೆ ಸುಮಾರು 45 ನಿಮಿಷಗಳ ಕಾಲ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಅಹ್ಮದ್ ಪಟೇಲ್ ಜೊತೆಗೂ ಸುದೀರ್ಘವಾಗಿ ಸಿದ್ದರಾಮಯ್ಯ ಅವರು ಮಾತನಾಡಿದ್ದರು.

ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನವನ್ನು ಮುಂದುವರಿಸಿಕೊಂಡು ಹೋಗುವಂತೆ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಬದಲಾಗಿ ತನ್ನ ಆಪ್ತರಾದ ಎಂಬಿ ಪಾಟೀಲ್‌ ಅಥವಾ ಕೃಷ್ಣ ಭೈರೇಗೌಡ ಅವರಿಗೆ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಕೆಪಿಸಿಸಿ ಗಾದಿಗಾಗಿ ಫೈಟ್: ದೆಹಲಿಯಲ್ಲಿ ಸಿದ್ದು ಸಭೆ, ಬೆಂಗಳೂರಿನಲ್ಲೇ ಉಳಿದ ಡಿಕೆಶಿ

ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ ಹಾಗೂ ಎಂಬಿಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಹಿರಿಯ ಮುಖಂಡರು ಡಿಕೆಶಿ ಪರವಾಗಿ ಒಲವು ವ್ಯಕ್ತಪಡಿಸಿದ್ದರೆ ಸಿದ್ದರಾಮಯ್ಯ ಬಣ ಎಂಬಿಪಿಗೆ ಪಟ್ಟಕಟ್ಟುವ ಉತ್ಸಾಹದಲ್ಲಿದೆ.

ಒಂದು ವೇಳೆ ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಹಿಡಿತ ಸಿದ್ದರಾಮಯ್ಯ ಕೈ ತಪ್ಪಿ ಹೋಗುತ್ತದೆ. ಈ ಕಾರಣಕ್ಕಾಗಿ ಎಂಬಿ ಪಾಟೀಲ್‌ ಅವರಿಗೆ ನೀಡಿದರೆ ಸಿದ್ದರಾಮಯ್ಯ ಹಿಡಿತದಲ್ಲೇ ಪಕ್ಷ ಮುಂದುವರಿಯಲಿದ್ದು ಲಿಂಗಾಯತ ಸಮುದಾಯವನ್ನು ಒಳಗೊಂಡಂತೆ ಆಗುತ್ತದೆ ಎಂಬುವುದು ಸಿದ್ದರಾಮಯ್ಯ ಬಣದ ವಾದ.

ಕೆಪಿಸಿಸಿ ಅಧ್ಯಕ್ಷ ಪಟ್ಟದ ಆಕಾಂಕ್ಷಿ ನಾನಲ್ಲ, ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕರೆ ಓಕೆ..!: ಎಚ್‌.ಕೆ. ಪಾಟೀಲ್ ಮನದಾಳ

ಸಿದ್ದರಾಮಯ್ಯ ಜೊತೆಗಿನ ಮಾತುಕತೆ ಬಳಿಯ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಗೂ ಸೋನಿಯಾ ಗಾಂಧಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕವಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ