ಆ್ಯಪ್ನಗರ

ಪಂಜಾಬ್‌ ಉಪಚುನಾವಣೆ: 'ಕಮಲ'ದ ಎಂಪಿ ಸೀಟು ಕಿತ್ತುಕೊಂಡ 'ಕೈ'

ಬಿಜೆಪಿ ಎಂಪಿ ವಿನೋದ್ ಖನ್ನಾ ಸಾವಿನ ಬಳಿಕ ತೆರವಾದ ಪಂಜಾಬ್‌ನ ಗುರುದಾಸಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ 1,93,219 ಮತಗಳಿಂದ ಜಯ ಸಾಧಿಸಿದ್ದಾರೆ.

TNN 15 Oct 2017, 3:31 pm
ಚಂಡೀಗಢ: ಬಿಜೆಪಿ ಎಂಪಿ ವಿನೋದ್ ಖನ್ನಾ ಸಾವಿನ ಬಳಿಕ ತೆರವಾದ ಪಂಜಾಬ್‌ನ ಗುರುದಾಸಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ 1,93,219 ಮತಗಳಿಂದ ಜಯ ಸಾಧಿಸಿದ್ದಾರೆ.
Vijaya Karnataka Web congress leader sunil jakhar wins gurdaspur lok sabha bypoll by huge margin
ಪಂಜಾಬ್‌ ಉಪಚುನಾವಣೆ: 'ಕಮಲ'ದ ಎಂಪಿ ಸೀಟು ಕಿತ್ತುಕೊಂಡ 'ಕೈ'


ಈ ಚುನಾವಣೆ ಜಾಖರ್‌, ಎಸ್‌ಎಡಿ-ಬಿಜೆಪಿ ಮೈತ್ರಿಯ ಸಲರಿಯಾ ಮತ್ತು ಆಪ್‌ನ ಮೇಜರ್‌ ಸುರೇಶ್‌ ಖುಜಾರಿಯಾಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದೀಗ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್ ಜಾಖರ್ 1,93,219 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸ್ವರಣ್ ಸವಾರಿಯಾರನ್ನು ಸೋಲಿಸಿದ್ದಾರೆ.

ಚುನಾವಣ ಫಲಿತಾಂಶ ಹೊರಬರುವುದಕ್ಕೂ ಮುನ್ನವೇ ಜಾಖರ್‌ ಜಯಗಳಿಸಬಹುದು ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸರಣಿ ಟ್ವೀಟ್‌ ಮಾಡಿದ್ದರು. 'ಗುರುದಾಸ್‌ಪುರ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ಭವಿಷ್ಯ ನುಡಿದಿದೆ. 2019ರಲ್ಲಿ ಎನ್‌ಡಿಯೆ ಮತ್ತೆ ತನ್ನ ಸ್ಥಾನ ಕಳೆದುಕೊಳ್ಳಲಿದೆ' ಎಂದು ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಕೇರಳದ ವೆಂಗರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಎಡಪಕ್ಷ ಮತ್ತು ಬಿಜೆಪಿ ಮುಖಭಂಗ ಅನುಭವಿಸಿದ್ದು ಯುಡಿಎಫ್ ಮೈತ್ರಿಕೂಟ ಬೆಂಬಲಿತ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಕೆಎನ್‌ಎ ಖಾದರ್‌ 23,310 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.


Congress leader Sunil Jakhar wins Gurdaspur Lok Sabha bypoll by huge margin
CHANDIGARH: Congress leader Sunil Jakhar has won the Gurdaspur Lok Sabha bypoll+ by 1,93,219 votes. Polling for the election necessitated by the demise of BJP leader and sitting MP from Gurdaspur Vinod Khanna was held on October 11.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ