ಆ್ಯಪ್ನಗರ

ಮಣಿಪುರ ಬಂಡುಕೋರರಿಗೆ ಪೊಲೀಸ್ ರೈಫಲ್ ನೀಡಿದ್ದ ಕಾಂಗ್ರೆಸ್ ಶಾಸಕ ಅರೆಸ್ಟ್

ಮಣಿಪುರ ಬಂಡುಕೋರರಿಗೆ ಪೊಲೀಸ್ ಬಂದೂಕುಗಳನ್ನು ರವಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಯಮ್ತಾಂಗ್ ಹಾಕಿಪ್ ಹಾಗೂ ಕುಕಿ ರೆವಲ್ಯೂಷನರಿ ಆರ್ಮಿ ಹೆಸರಿನ ಭೂಗತ ಸಂಘಟನೆಯ ಅಧ್ಯಕ್ಷ ಡೇವಿಡ್ ಡೇವಿಡ್ ಹ್ಯಾಂಗ್`ಶಿಂಗ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

TIMESOFINDIA.COM 25 Aug 2018, 3:33 pm
ಇಂಫಾಲ್: ಮಣಿಪುರ ಬಂಡುಕೋರರಿಗೆ ಪೊಲೀಸ್ ಬಂದೂಕುಗಳನ್ನು ರವಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಯಮ್ತಾಂಗ್ ಹಾಕಿಪ್ ಹಾಗೂ ಕುಕಿ ರೆವಲ್ಯೂಷನರಿ ಆರ್ಮಿ ಹೆಸರಿನ ಭೂಗತ ಸಂಘಟನೆಯ ಅಧ್ಯಕ್ಷ ಡೇವಿಡ್ ಡೇವಿಡ್ ಹ್ಯಾಂಗ್`ಶಿಂಗ್ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web CONG


2016 ಹಾಗೂ 17ರ ಸಾಲಿನಲ್ಲಿ ಮಣಿಪುರ ರೈಫಲ್ಸ್‌ 2ನೇ ಬೆಟಾಲಿಯನ್‌ನಲ್ಲಿ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿದ್ದವು. ಸೈಕುಲ್ ವಿಧಾನಸಭೆ ಕ್ಷೇತ್ರದ ಶಾಸಕ ಯಮ್ತಾಂಗ್ ಪೊಲೀಸ್ ಬಳಕೆಯ ಬಂದೂಕುಗಳನ್ನು ಡೇವಿಡ್ ಹ್ಯಾಂಗ್ ಶಿಂಗ್ಗೆ ನೀಡಿರುವ ಬಗ್ಗೆ ಎನ್ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಎನ್‍‌ಐಎ ಅಧಿಕಾರಿಗಳು, ವಿಶೇಷ ಎನ್‌ಐಎ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ. ಬಂಧಿತರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯ ಆದೇಶಿಸಿದೆ.

ಘಟನೆ ಸಂಬಂಧ ಎನ್‌ಐಎ ಅಧಿಕಾರಿಗಳು ಹಾಕಿಪ್ ಕಾರು ಚಾಲಕನನ್ನು ಸಹ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ