ಆ್ಯಪ್ನಗರ

ಬಿಜೆಪಿಯಿಂದ ಅವಿಶ್ವಾಸ, ಕಾಂಗ್ರೆಸ್‌ನಿಂದ ಬಹುಮತ ಸಾಬೀತು: ರೋಚಕ ರಾಜಸ್ಥಾನ ಅಧಿವೇಶನ!

ಇಂದು(ಶುಕ್ರವಾರ) ರಾಜಸ್ಥಾನ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಸದನದಲ್ಲಿ ಬಹುಮತ ಸಾಬೀತಿಗೆ ಮುಂದಾಗಿದೆ.

Vijaya Karnataka Web 14 Aug 2020, 9:28 am
ಜೈಪುರ್: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಎಂಬಂತೆ ಇಂದು(ಶುಕ್ರವಾರ) ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಎದುರಾಗಲು ಸಜ್ಜಾಗಿವೆ.
Vijaya Karnataka Web sachin-pilot
ಅಶೋಕ್ ಗೆಹ್ಲೋಟ್ ಭೇಟಿ ಮಾಡಿದ ಸಚಿನ್ ಪೈಲಟ್


ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿರುವ ಪ್ರತಿಪಕ್ಷ ಬಿಜೆಪಿ, ವಿಶೇಷ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಿದೆ. ಗೆಹ್ಲೋಟ್ ಸರ್ಕಾರ ಬಹುಮತ ಕಳೆದುಕೊಂಡಿದ್ದು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗುವುದು ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿರುವ ಬಿಜೆಪಿ!

ಬಿಜೆಪಿಯ ಈ ರಣತಂತ್ರಕ್ಕೆ ಸಡ್ಡು ಹೊಡೆದಿರುವ ಕಾಂಗ್ರೆಸ್, ಸದನದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಘೋಷಿಸಿದೆ. ಸಚಿನ್ ಪೈಲಟ್ ಬಂಡಾಯ ಶಮನಗೊಂಡಿರುವುದರಿಂದ ಕಾಂಗ್ರೆಸ್ ಮತ್ತೆ ಪೂರ್ಣ ಸಂಖ್ಯಾಬಲವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸನದಲ್ಲಿ ಬಹುಮತ ಸಾಬೀತಿಗೆ ಸಿದ್ಧ ಎಂದು ಗೆಹ್ಲೋಟ್ ಘೋಷಿಸಿದ್ದಾರೆ.

ನಿನ್ನೆ(ಗುರುವಾರ) ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿತ್ತು. ಬಿಜೆಪಿ ಗೆಹ್ಲೋಟ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ನಿರ್ಣಯ ಕೈಗೊಂಡರೆ ಕಾಂಗ್ರೆಸ್ ಬಹುಮತ ಸಾಬೀತುಪಡಿಸುವ ನಿರ್ಧಾರ ಕೈಗೊಂಡಿತು.

ರಾಜಸ್ಥಾನ ವಿಶೇಷ ಅಧಿವೇಶನಕ್ಕೆ ತಯಾರಾದ ಕಾಂಗ್ರೆಸ್, ಬಿಜೆಪಿ: ತಂತ್ರ, ಪ್ರತಿತಂತ್ರಗಳ ಸುಳಿಯಲ್ಲಿ!

ಒಂದಾದ ಗೆಹ್ಲೋಟ್-ಪೈಲಟ್:

ಇನ್ನು ಒಂದು ತಿಂಗಳಿಗೂ ಧೀರ್ಘ ಕಾಲ ಪರಸ್ಪರರ ಕಾಲೆಳೆಯುವುದರಲ್ಲೇ ನಿರತರಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಮತ್ತೆ ಒಂದಾಗಿ ನಗೆ ಬೀರಿದ್ದಾರೆ.

ನಿನ್ನೆ(ಗುರುವಾರ) ಗೆಹ್ಲೋಟ್ ಮನೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದ ಸಚಿನ್ ಪೈಲಟ್, ಗೆಹ್ಲೋಟ್ ಅವರನ್ನು ಆತ್ಮೀಯವಾಗಿ ಆಲಂಗಿಸಿದರಲ್ಲದೇ ಇಬ್ಬರೂ ಕೈ ಮೇಲೆತ್ತಿ ಗೆಲುವಿನ ನಗೆಯನ್ನೂ ಬೀರಿದರು.

ಪರಸ್ಪರ ಎದುರಾಗಲಿರುವ ಪೈಲಟ್-ಗೆಹ್ಲೋಟ್: ಸಿಎಲ್‌ಪಿ ಸಭೆಯಲ್ಲಿ ಏನಾಗಲಿದೆ?

ಈ ಮೂಲಕ ಉಭಯ ನಾಯಕರೂ ತಮ್ಮ ನಡುವಿನ ವೈಮನಸ್ಸು ಹಾಗೂ ರಾಜಕೀಯ ಬಿಕ್ಕಟ್ಟು ಶಮನಗೊಂಡಿದೆ ಎಂಬ ಸಂದೇಶ ರವಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ