ಆ್ಯಪ್ನಗರ

ಜಿಎಸ್‌ಟಿ ಪ್ರಚಾರ ಬೇಡ ಅಮಿತಾಭ್‌ಗೆ ಕಾಂಗ್ರೆಸ್‌ ಎಚ್ಚರಿಕೆ

ವರ್ತಕರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಈಗಲೇ ಜಿಎಸ್‌ಟಿ ಅಭಿಯಾನದಿಂದ ಹಿಂದೆ ಸರಿಯಿರಿ ಎಂದು ಅಮಿತಾಭ್‌ಗೆ ಕಾಂಗ್ರೆಸ್‌ ಎಚ್ಚರಿಸಿದೆ.

ಟೈಮ್ಸ್ ಆಫ್ ಇಂಡಿಯಾ 22 Jun 2017, 8:49 am
ಮುಂಬಯಿ: ವರ್ತಕ ಸಮುದಾಯದ ಕೆಂಗಣ್ಣಿಗೆ ಗುರಿಯಾಗದಂತೆ ಈಗಲೇ ಜಿಎಸ್‌ಟಿ ಅಭಿಯಾನದಿಂದ ಹಿಂದೆ ಸರಿಯಿರಿ ಎಂದು ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ಗೆ ಕಾಂಗ್ರೆಸ್‌ ಎಚ್ಚರಿಸಿದೆ.
Vijaya Karnataka Web congress urges amitabh bachchan to withdraw from gst campaign
ಜಿಎಸ್‌ಟಿ ಪ್ರಚಾರ ಬೇಡ ಅಮಿತಾಭ್‌ಗೆ ಕಾಂಗ್ರೆಸ್‌ ಎಚ್ಚರಿಕೆ


ಜುಲೈ 1 ರಿಂದ ಜಾರಿ ಬರಲಿರುವ ಸರಕು ಹಾಗೂ ಸೇವಾ ತೆರಿಗೆಯ ಪ್ರಚಾರಕ್ಕೆ ಅಮಿತಾಭ್‌ ಬಚ್ಚನ್‌ ಅವರನ್ನು ಕೇಂದ್ರ ಸಕರಾರ ನಿಯೋಜಿಸಿದೆ. 40 ಸೆಕೆಂಡ್‌ ವೀಡಿಯೋದಲ್ಲಿ ಅಮಿತಾಭ್‌ ಬಚ್ಚನ್‌ ಜಿಎಸ್‌ಟಿ ಬಗ್ಗೆ ಮಾತನಾಡಿದ್ದಾರೆ. ಈ ವೀಡಿಯೋದ ಚಿತ್ರೀಕರಣ ಮುಗಿದಿದ್ದು, ಪ್ರಸಾರವೂ ಆಗಿದೆ.

'ಜಿಎಸ್‌ಟಿ ಕಾಂಗ್ರೆಸ್‌ ಕಲ್ಪನೆಯ ಕೂಸು. ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಅದನ್ನು ವಿರೋಧಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ಜಿಎಸ್‌ಟಿಯ ಮೂಲ ಪರಿಕಲ್ಪನೆಯನ್ನೇ ಬದಲಿಸಿ, ಅದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದೆ,'ಎಂದು ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ದೂರಿದ್ದಾರೆ.

ಮುಂಬರುವ ದಿನಗಳಲ್ಲಿ ಜಿಎಸ್‌ಟಿ ವಿರುದ್ಧ ವ್ಯಾಪಾರಿ ವರ್ಗದವರು ಸಿಡಿದೇಳುವುದು ನಿಶ್ಚಿತ, ಹಾಗಾಗಿ ಅವರ ವಿರೋಧವನ್ನು ಕಟ್ಟಿಕೊಳ್ಳದಿರುವುದೇ ಒಳ್ಳೆಯದು. ಬಿಜೆಪಿಯ ಮೂರ್ಖತನದಲ್ಲಿ ನೀವೂ ಭಾಗಿ ಆಗಬೇಡಿ. ನಿಮಗೆ ಒಳ್ಳೆಯ ಹೆಸರಿದೆ, ನಟನಾಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದೀರಿ. ಜಿಎಸ್‌ಟಿ ಕಾರಣಕ್ಕೆ ವರ್ತಕರ ಕೆಂಗಣ್ಣಿಗೆ ಗುರಿಯಾಗದಿರಿ, 'ಎಂದು ಅಮಿತಾಭ್‌ ಬಚ್ಚನ್‌ಗೆ ಸಂಜಯ್‌ ನಿರುಪಮ್‌ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ