ಆ್ಯಪ್ನಗರ

​ಎನ್‌ಡಿ ತಿವಾರಿ, ಪುತ್ರ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್‌ ಮುಖಂಡ ನಾರಾಯಣ ದತ್‌ ತಿವಾರಿ ಮತ್ತು ಅವರ ಪುತ್ರ ರೋಹಿತ್‌ ಶೇಖರ್‌ ತಿವಾರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Vijaya Karnataka Web 18 Jan 2017, 4:12 pm
ಹೊಸದಿಲ್ಲಿ: ಕಾಂಗ್ರೆಸ್‌ ಮುಖಂಡ, ಉತ್ತರಾಖಂಡ ಮತ್ತು ಉತ್ತರಪ್ರದೇಶಗಳ ಮಾಜಿ ಮುಖ್ಯಮಂತ್ರಿ ನಾರಾಯಣ ದತ್‌ ತಿವಾರಿ ಮತ್ತು ಅವರ ಪುತ್ರ ರೋಹಿತ್‌ ಶೇಖರ್‌ ತಿವಾರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Vijaya Karnataka Web congress veteran nd tiwari son join bjp
​ಎನ್‌ಡಿ ತಿವಾರಿ, ಪುತ್ರ ಬಿಜೆಪಿಗೆ ಸೇರ್ಪಡೆ


ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಇವರಿಬ್ಬರೂ ಬಿಜೆಪಿಗೆ ಸೇರಿದ್ದಾರೆ. ನಾರಾಯಣ ದತ್‌ ತಿವಾರಿ ಅವರು ಪುತ್ರ ಶೇಖರ್‌ ತಿವಾರಿಗೆ ಉತ್ತರಾಖಂಡದಲ್ಲಿ ಟಿಕೆಟ್‌ ನೀಡಬೇಕು ಎಂದು ಬಯಸಿದ್ದಾರೆ ಎನ್ನಲಾಗಿದೆ.

ನಾರಾಯಣ ತಿವಾರಿ ಅವರು (1976-77, 1984-85, 1988-89) ಅವಧಿಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2002-2007ರ ಅವಧಿಯಲ್ಲಿ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು. 1986-1987ಅವಧಿಯಲ್ಲಿ ದಿ. ಪ್ರಧಾನಿ ರಾಜೀವ್‌ ಗಾಂಧಿ ಅವರ ಸಂಪುಟದಲ್ಲಿ ವಿದೇಶ ವ್ಯವಹಾರಗಳ ಸಚಿವರಾಗಿದ್ದರು. ಇವರ ಪುತ್ರ ರೋಹಿತ್‌ ಶೇಖರ್‌ ಪಿತೃತ್ವ ರುಜುವಾತಿಗೆ ಸಂಬಂಧಿಸಿದಂತೆ ನಡೆಸಿದ್ದ ಕಾನೂನು ಹೋರಾಟ ಸಾಕಷ್ಟು ಸುದ್ದಿ ಮಾಡಿತ್ತು. ಕೊನೆಗೆ ರೋಹಿತ್‌ ಶೇಖರ್‌ ಪುತ್ರ ಎಂಬುದನ್ನು ತಿವಾರಿ ಒಪ್ಪಿಕೊಂಡಿದ್ದರು.

Congress veteran ND Tiwari, son join BJP
NEW DELHI: Former Uttarakhand and Uttar Pradesh chief minister and a senior Congress leader, Narayan Dutt Tiwari along with his son Rohit Shekhar joined the Bharatiya Janata Party (BJP) today.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ