ಆ್ಯಪ್ನಗರ

ಮದ್ಯ ನಿಷೇಧ ನಾಡಿನಲ್ಲಿ ಕುಡಿತ: ಬಂಧಿತರಲ್ಲಿ ಮಾನಿನಿಯರ ಸಂಖ್ಯೆಯೇ ಹೆಚ್ಚು!

ಗುಜರಾತ್‌ನ ಸೇವಾಸಿಯಲ್ಲಿರುವ ಫಾರಂ ಹೌಸ್‌ನಲ್ಲಿ ಮದ್ಯಪಾನದಲ್ಲಿ ತೊಡಗಿದ್ದ 261 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 23 Dec 2016, 1:04 pm
ಗುಜರಾತ್: ಗುಜರಾತ್‌ನ ಸೇವಾಸಿಯಲ್ಲಿರುವ ಫಾರಂ ಹೌಸ್‌ನಲ್ಲಿ ಮದ್ಯಪಾನದಲ್ಲಿ ತೊಡಗಿದ್ದ 261 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲೆಂಬಿಕ್ ಲಿ. ಕಂಪನಿಯ ವ್ಯವಸ್ಥಾಪಕ ಚಿರಾಯು ಅಮಿನ್, ಇಬ್ಬರು ಪ್ರಸಿದ್ಧ ಉದ್ಯಮಿಗಳು ಸೇರಿ 134 ಮಹಿಳೆಯರು, 125 ಪುರುಷರು ಹಾಗೂ ಇಬ್ಬರು ಬ್ರಿಟಿಷ್ ಪ್ರಜೆಗಳನ್ನು ಬಂಧಿಸಿ, ಶುಕ್ರವಾರ ಬೆಳಗ್ಗೆ ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು.
Vijaya Karnataka Web cops detained 261 persons who were consuming liquor
ಮದ್ಯ ನಿಷೇಧ ನಾಡಿನಲ್ಲಿ ಕುಡಿತ: ಬಂಧಿತರಲ್ಲಿ ಮಾನಿನಿಯರ ಸಂಖ್ಯೆಯೇ ಹೆಚ್ಚು!

ಫಾರಂ ಹೌಸ್ ಮೇಲೆ ನಡೆಸಿದ ದಾಳಿಯಲ್ಲಿ 80 ಕಾರು ಹಾಗೂ 103 ಮದ್ಯ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಡೋದರಾ ಎಸ್ ಪಿ ಸೌರಭ್ ತೊಲಂಬಿಯಾ ಹೇಳಿದ್ದಾರೆ.

ಗುಜರಾತಿನ ನಿಯಮದ ಪ್ರಕಾರ ಮದ್ಯಪಾನ ಕಾನೂನುಬಾಹಿರ ಚಟುವಟಿಕೆಯಾಗಿದ್ದು, ಮದ್ಯಪಾನ ಮಾಡಿದವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಇದೀಗ ಫಾರಂ ಹೌಸ್‌ನ ಒಡೆಯ ಹಾಗೂ ಅಲ್ಲಿ ಪಾರ್ಟಿ ಆಯೋಜಿಸಿದವರನ್ನು ಮದ್ಯಪಾನ ನಿಷೇಧ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದ್ದು ಅವರಿಗೆ ಜಾಮಿನು ರಹಿತ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಪಾರ್ಟಿಗೆ ಮದ್ಯ ದೊರೆಕಿದ್ದು ಎಲ್ಲಿಂದ ಎಂಬುದರ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ