ಆ್ಯಪ್ನಗರ

ಸಿಬ್ಬಂದಿಗೆ ಕೊರೊನಾ, ನಾಗರಿಕ ವಿಮಾನಯಾನ ಸಚಿವಾಲಯದ ಕೇಂದ್ರ ಕಚೇರಿಗೆ ಬೀಗ!

ಏಪ್ರಿಲ್‌ 15 ರಂದು ಕಚೇರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಏ. 21ರಂದು ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಹಾಗಾಗಿ ಮಾರ್ಗಸೂಚಿಯಂತೆ ಕಚೇರಿಗೆ ಬೀಗ ಹಾಕಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.

TIMESOFINDIA.COM 22 Apr 2020, 8:41 pm

ಹೊಸದಿಲ್ಲಿ: ನಾಗರಿಕ ವಿಮಾನಯಾನ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಟ್ಟಡವನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು ಹೇಳಿದ್ದಾರೆ.
Vijaya Karnataka Web Rajiv Gandhi Bhavan


ಈ ಮೂಲಕ ಕೇಂದ್ರ ಸರಕಾರಿ ಸಚಿವಾಲಯವೊಂದರಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಇದೇ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಸಚಿವಾಲಯವೊಂದನ್ನು ಮುಚ್ಚಲಾಗುತ್ತಿದೆ.

ಏಪ್ರಿಲ್‌ 15 ರಂದು ಕಚೇರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಏ. 21ರಂದು ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಹಾಗಾಗಿ ಮಾರ್ಗಸೂಚಿಯಂತೆ ಸಂಪರ್ಕಿತರನ್ನು ಸ್ವಯಂ ಕ್ವಾರಂಟೈನ್‌ ವಿಧಿಸಿಕೊಳ್ಳಲು ಸೂಚಿಸಿ, ಕಚೇರಿಗೆ ಬೀಗ ಹಾಕಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.

ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸಿದ ಕೊರೊನಾ ವೈರಸ್; 125 ಕುಟುಂಬ ಕ್ವಾರಂಟೈನ್‌ಗೆ!

ನಾಗರಿಕ ವಿಮಾನಯಾನ ಸಚಿವಾಲಯದ ಕೇಂದ್ರ ಕಚೇರಿ 'ರಾಜೀವ್‌ ಗಾಂಧಿ ಭವನ'ವನ್ನು ಶಿಷ್ಟಾಚಾರದ ಪ್ರಕಾರ ಮೂರು ದಿನಗಳ ಕಾಲ ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಕಚೇರಿಯ ಒಳಗೆ ಮತ್ತು ಆವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗುತ್ತದೆ. ಇಡೀ ಆವರಣ ಸೋಂಕು ರಹಿತವಾದ ನಂತರ ಕಚೇರಿ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ