ಆ್ಯಪ್ನಗರ

ಚೀನಾದ 2 ಕಂಪನಿಗಳ ಪರೀಕ್ಷಾ ಕಿಟ್‌ಗಳು ದೋಷಪೂರಿತ: ಐಸಿಎಂಆರ್‌ ತನಿಖೆ

ಚೀನಾದಿಂದ ತರಿಸಲಾಗಿರುವ 2 ಕಂಪನಿಗಳ ಕೊರೊನಾ ಪರೀಕ್ಷಾ ಕಿಟ್‌ಗಳು ದೋಷಪೂರಿತವೆಂದು ಕಂಡುಬಂದಿದೆ. ಈ ಹಿನ್ನೆಲೆ 2 ದಿನಗಳ ಕಾಳ ರಾಜ್ಯಗಳು ಅದನ್ನು ಬಳಕೆ ಮಾಡುವುದು ಬೇಡವೆಂದು ಐಸಿಎಂಆರ್‌ ಸೂಚನೆ ನೀಡಿತ್ತು.

TIMESOFINDIA.COM 22 Apr 2020, 6:39 pm
ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಪತ್ತೆಹಚ್ಚಲು ರ‍್ಯಾಪಿಡ್‌ ಆ್ಯಂಟಿ ಬಾಡಿ ಪರೀಕ್ಷಾ ಕಿಟ್‌ಗಳನ್ನು ಚೀನಾದಿಂದ ತರಿಸಿಕೊಳ್ಳಲಾಗಿತ್ತು. ಆದರೆ, ಈ ಪೈಕಿ ಎರಡು ಕಂಪನಿಗಳ ಕಿಟ್‌ಗಳು ದೋಷಪೂರಿತವಾಗಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಐಸಿಎಂಆರ್ ತನಿಖೆ ಮಾಡುತ್ತಿದೆ.
Vijaya Karnataka Web testing kits toi


ಚೀನಾದ ಎರಡು ಕಂಪನಿಗಳ ಪರೀಕ್ಷಾ ಕಿಟ್‌ಗಳು ವ್ಯಾಪಕ ವ್ಯತ್ಯಾಸಗಳು ಮತ್ತು ಕಡಿಮೆ ನಿಖರತೆಯ ಫಲಿತಾಂಶವನ್ನು ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ಬಗ್ಗೆ ತನಿಖೆ ಮಾಡುತ್ತಿದೆ. ಈ ಹಿನ್ನೆಲೆ ಎರಡು ದಿನಗಳ ಕಾಲ ತನಿಖೆ ಪೂರ್ಣಗೊಳ್ಳುವವರೆಗೆ, ರಾಜ್ಯಗಳು ಪರೀಕ್ಷಾ ಕಿಟ್‌ಗಳ ಬಳಕೆ ಮಾಡುವುದು ಬೇಡ ಎಂದೂ ಮನವಿ ಮಾಡಿಕೊಂಡಿದೆ.

ಎರಡೂ ಚೀನಾದ ಕಂಪನಿಗಳು ಸೇರಿ ಭಾರತಕ್ಕೆ 7 ಲಕ್ಷ ಕಿಟ್‌ಗಳನ್ನು ನೀಡಿದ್ದು, ಇವುಗಳು ದೋಷಪೂರಿತವಾಗಿವೆ ಎಂಬ ದೂರು ಕೇಳಿಬಂದಿದೆ. ಇನ್ನು, ಇವುಗಳಲ್ಲಿ ಕೆಲವು ಕಿಟ್‌ಗಳು ದೋಷಪೂರಿತವೆಂದು ಕಂಡುಬಂದಿವೆ ಎಂದೂ ಐಸಿಎಂಆರ್‌ನ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಈ ಕಿಟ್‌ಗಳನ್ನು ನಿರ್ದಿಷ್ಟ ಪ್ರದೇಶ ಅಥವಾ ಹಾಟ್‌ಸ್ಪಾಟ್‌ನಲ್ಲಿ ಕೋವಿಡ್ 19 ರ ಪ್ರವೃತ್ತಿ ಅಥವಾ ಕಣ್ಗಾವಲು ಮಾಡಲು ಮೀಸಲಿಡಲಾಗಿತ್ತು ಎಂದು ತಿಳಿದುಬಂದಿದೆ. ಏರ್ ಇಂಡಿಯಾ ಮತ್ತು ಇತರ ವಾಣಿಜ್ಯ ಭಾರತೀಯ ಜೆಟ್‌ಲೈನರ್‌ಗಳ ಮೂಲಕ ಚೀನಾದಿಂದ ಕಿಟ್‌ಗಳನ್ನು ತರಿಸಿಕೊಳ್ಳಲಾಗಿತ್ತು.

ಶೇ. 80ರಷ್ಟು ಕೊರೊನಾ ರೋಗಿಗಳಿಗೆ ಅತ್ಯಂತ ಕ್ಷೀಣ ಅಥವಾ ರೋಗ ಲಕ್ಷಣವೇ ಇಲ್ಲ!

ಈ ಮಧ್ಯೆ, ದೋಷಯುಕ್ತ ಪರೀಕ್ಷಾ ಕಿಟ್‌ಗಳ ಬಗ್ಗೆ ಮಾಧ್ಯಮ ವರದಿಗಳನ್ನು ಗಮನಿಸಿ ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿದ ಚೀನೀ ರಾಯಭಾರ ಕಚೇರಿಯು, ಕ್ಷಿಪ್ರ ಪರೀಕ್ಷಾ ಕಿಟ್‌ಗಳಿಗೆ ಸಂಬಂಧಿಸಿದ ವರದಿಗಳನ್ನು ಗಮನಿಸುದ್ದೇವೆ. ರಫ್ತು ಮಾಡಿದ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟಕ್ಕೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಭಾರತೀಯ ಸಂಬಂಧಿತ ಏಜೆನ್ಸಿಯೊಂದಿಗೆ ನಿಕಟ ಸಂವಹನ ನಡೆಸುತ್ತದೆ ಮತ್ತು ಅಗತ್ಯ ನೆರವು ನೀಡುತ್ತದೆ" ಎಂದು ಭಾರತದ ಚೀನೀ ರಾಯಭಾರ ಕಚೇರಿಯ ವಕ್ತಾರ ಜಿ ರೋಂಗ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ವಿರುದ್ಧ ಅಗೋಚರ ಸಮರ, ಶತ್ರು ದಾಳಿ ಎದುರಿಸಲು ಸೇನೆ ಸಜ್ಜು: ರಾಜನಾಥ್‌ ಸಿಂಗ್‌

ಇನ್ನು, ಈ ರೀತಿಯ ದೂರು ಕೇಳಿ ಬಂದಿರುವುದು ಇದೇ ಮೊದಲೇನಲ್ಲ. ಏಪ್ರಿಲ್‌ ತಿಂಗಳ ಆರಂಭದಲ್ಲಿ ಸ್ಪೇನ್‌, ಟರ್ಕಿ, ನೆದರ್‌ಲ್ಯಾಂಡ್‌ ದೇಶಗಳು ಸಹ ಚೀನಾದ ಕಿಟ್‌ಗಳು ದೋಷಯುಕ್ತ ಎಂಬ ವರದಿ ಕೇಳಿಬಂದಿದ್ದವು. ಕಳೆದ ವಾರ ನ್ಯೂಯಾರ್ಕ್ ಟೈಮ್ಸ್ನಲ್ಲಿ ಬಂದ ವರದಿಯ ಪ್ರಕಾರ, ಚೀನಾದ ಆ್ಯಂಟಿ ಬಾಡಿ ಪರೀಕ್ಷೆಗಳಿಗೆ ಯುಕೆ 190 ಕೋಟಿ ರೂ. ಗಳನ್ನು ಪಾವತಿಸಿದೆ. ಆ ಪರೀಕ್ಷೆಗಳಲ್ಲಿ ಹೆಚ್ಚಿನವು ಸಹ ದೋಷಪೂರಿತವಾಗಿವೆ ಎಂದು ತಿಳಿಸಿತ್ತು.

ಕಾಶ್ಮೀರದಲ್ಲಿ ದುಷ್ಕೃತ್ಯಕ್ಕೆ ಪಾಕ್‌ ಹೊಸ ಸಂಚು..! 'ಕೊರೊನಾ'ರ್ಭಟದಲ್ಲೂ ತಾಲಿಬಾನ್‌ಗೆ ಕುಮ್ಮಕ್ಕು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ