ಆ್ಯಪ್ನಗರ

ದೇಶದಲ್ಲಿ ಕೊರೊನಾ ಗುಣಮುಖರ ದಾಖಲೆ ಏರಿಕೆ: ಒಂದೇ ದಿನ 57,937 ಸೋಂಕಿತರು ಚೇತರಿಕೆ!

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದ್ದು ಗುಣಮುಖ­ರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವವರ ಪ್ರಮಾಣ ಹೆಚ್ಚುತ್ತಿದೆ. ಮಂಗಳವಾರ ಒಂದೇ ದಿನ ದೇಶದಲ್ಲಿ 57,937 ಸೋಂಕಿ­ತರು ಗುಣಮುಖ­ರಾಗಿರುವುದು ದಾಖ­ಲೆ ಯಾಗಿದೆ.

Vijaya Karnataka Web 18 Aug 2020, 11:27 pm
ಹೊಸದಿಲ್ಲಿ: ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದ್ದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವವರ ಪ್ರಮಾಣ ಹೆಚ್ಚುತ್ತಿದೆ. ಮಂಗಳವಾರ ಒಂದೇ ದಿನ ದೇಶದಲ್ಲಿ 57,937 ಸೋಂಕಿತರು ಗುಣಮುಖರಾಗಿರುವುದು ದಾಖಲೆ ಯಾಗಿದೆ. ಇದರೊಂದಿಗೆ ಕೊರೊನಾ ದಿಂದ ಚೇತರಿಕೆ ಕಂಡವರ ಒಟ್ಟು ಸಂಖ್ಯೆ 20.03 ಲಕ್ಷ ದಾಟಿದೆ.
Vijaya Karnataka Web Coronavirus


ಆಸ್ಪತ್ರೆಗಳಿಂದ ಡಿಸ್ಚಾರ್ಜ್‌ ಆಗುತ್ತಿರುವವರು ಮತ್ತು ಹೋಮ್‌ ಐಸೊಲೇಷನ್‌ನಿಂದಲೂ ಬಿಡುಗಡೆ ಹೊಂದುತ್ತಿರುವವರ ಸಂಖ್ಯೆಯೂ ಏರುಗತಿ­ಯಲ್ಲಿದೆ.ಕೇಂದ್ರ ಆರೋಗ್ಯ ಸಚಿವಾಲ­ಯದ ಮಾಹಿತಿ ಪ್ರಕಾರ, 24 ಗಂಟೆ ಅವಧಿಯಲ್ಲಿ ದೇಶಾದ್ಯಂತ 55,079 ಹೊಸ ಪ್ರಕರಣಗಳು ದಾಖಲಾಗಿವೆ.

ಸೋಂಕಿತರ ಪ್ರಮಾಣ ಕಳೆದ ಐದು ದಿನಗಳ ಅವಧಿಯಲ್ಲಿ ಶೇ.10.33ರಿಂದ ಶೇ.7.72ಕ್ಕೆ ಇಳಿಕೆಯಾ­ಗಿದೆ. ದೇಶದಲ್ಲಿ ಗುಣಮುಖರ ಸರಾಸರಿ ಪ್ರಮಾಣ ಶೇ.73.18 ತಲುಪಿದ್ದು, ಕೊರೊನಾದಿಂದ ಮೃತಪಡುತ್ತಿರುವವರ ಪ್ರಮಾಣ ವಿಶ್ವದಲ್ಲೇ ಕನಿಷ್ಠ ಅಂದರೆ ಶೇ.1.92ರಷ್ಟಿದೆ. ಸೋಮವಾರ ಒಂದೇ ದಿನ 8.99 ಲಕ್ಷ ಸೋಂಕಿನ ಮಾದರಿಗಳನ್ನು ಪರೀಕ್ಷೆ ಮಾಡ­ಲಾಗಿದ್ದು , ಇದುವರೆಗಿನ ದಿನವೊಂದರಲ್ಲಿ ನಡೆಸಿದ ಅತಿಹೆಚ್ಚಿನ ತಪಾಸಣೆಯಾಗಿದೆ.

ರಾಜ್ಯದಲ್ಲಿ ಮತ್ತೆ ಹೆಚ್ಚಾದ ಕೊರೊನಾ: ಚೇತರಿಕೆಯಲ್ಲೂ ದಾಖಲೆಯ ಏರಿಕೆ!

ದೇಶಾದ್ಯಂತ ನಡೆಸಲಾಗಿರುವ ಕೊರೊನಾ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ ಈಗ 3.09 ಕೋಟಿ ದಾಟಿದೆ. ಟೆಸ್ಟ್‌ (ತಪಾಸಣೆ), ಟ್ರಾತ್ರ್ಯಕ್‌ (ಪತ್ತೆ) ಆ್ಯಂಡ್‌ ಟ್ರೀಟ್‌ (ಚಿಕಿತ್ಸೆ) ಕಾರ್ಯತಂತ್ರ ಪರಿಣಾಮಕಾರಿಯಾಗಿದ್ದು ಸದ್ಯ ದೇಶದಲ್ಲಿ ಕೇವಲ 6.74 ಲಕ್ಷ (ಶೇ.24.91) ಸಕ್ರಿಯ ಸೋಂಕಿತರಿದ್ದಾರೆ. ಅಂದರೆ ಗುಣಮುಖರ ಪ್ರಮಾಣವು ಸಕ್ರಿಯ ಪ್ರಕರಣಗಳಿಗಿಂತ ಮೂರು ಪಟ್ಟು ಜಾಸ್ತಿ ಇದೆ. ಇನ್ನು ಒಟ್ಟು ಸೋಂಕಿತರ ಸಂಖ್ಯೆ 27.35 ಲಕ್ಷ ಮುಟ್ಟಿದೆ. ಅತಿಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (1.55 ಲಕ್ಷ), ಆಂಧ್ರಪ್ರದೇಶ, (85,130), ಕರ್ನಾಟಕ (80,641), ತಮಿಳುನಾಡು (53,860) ಮೊದಲ ನಾಲ್ಕು ಸ್ಥಾನಗಳಲ್ಲಿವೆ.

ಭಾರತ ಮೂಲದ ವೈದ್ಯನಿಗೆ ಬ್ರಿಟನ್‌ನಲ್ಲಿ ಪ್ರಶಸ್ತಿ: ಕೊರೊನಾ ನಿಯಂತ್ರಣ­ಕ್ಕಾಗಿ ಶ್ರಮಿಸಿದ್ದನ್ನು ಗುರುತಿಸಿ ಅವರಿಗೆ ಬ್ರಿಟನ್‌ ರಾಯಲ್‌ ಅಕಾಡೆಮಿ ಆಫ್‌ ಇಂಜಿನಿ­ಯರಿಂಗ್‌ ವತಿಯಿಂದ ನೀಡಲಾ­ಗುವ ಅಧ್ಯಕ್ಷರ ವಿಶೇಷ ಪ್ರಶಸ್ತಿಯನ್ನು ಭಾರತ ಮೂಲದ ವೈದ್ಯ ರವಿ ಸೋಳಂಕಿ ಅವರಿಗೆ ಘೋಷಿಸಲಾಗಿದೆ.

ಕೊರೊನಾ ಸೋಂಕಿತ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಆತಂಕ: ನೆಗೆಟಿವ್‌ ಬಂದರಷ್ಟೇ ಪರೀಕ್ಷೆಗೆ ಅವಕಾಶ!

ರಾಷ್ಟ್ರೀಯ ಆರೋಗ್ಯ ಸೇವೆಗಳ (ಎನ್‌ಎಚ್‌ಎಸ್‌) ನೆರವಿನ ವಿಭಾಗವಾದ ಹೀರೋಸ್‌ಗಾಗಿ ಸುರಕ್ಷಿತ ಮತ್ತು ಹೊಸ ವೆಬ್‌ಸೈಟ್‌ವೊಂದನ್ನು ಕೊರೊನಾ ಮಾಹಿತಿಗಾಗಿ ತಯಾರಿಕೆಗೆ ರವಿ ಶ್ರಮಿಸಿದ್ದರು. ಇದರಲ್ಲಿಹಣಕಾಸಿನ ನೆರವು, ಕೌನ್ಸೆಲಿಂಗ್‌, ಮಕ್ಕಳ ಆರೋಗ್ಯಕ್ಕೆ ನೆರವು, ಎನ್‌ಎಚ್‌ಎಸ್‌ ಸಿಬ್ಬಂದಿಗೆ ಪಿಪಿಇ ಕಿಟ್‌ ಪೂರೈಕೆ ಹಾಗೂ ಇತರ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾ­ಗಿತ್ತು. ಇವರಿಗೆ ಮಷೀನ್‌ ಲರ್ನಿಂಗ್‌ ವಿಷಯದ ತಜ್ಞ ಎಂಜಿನಿಯರ್‌ ರೇಮಂಡ್‌ ಸೀಮ್ಸ್‌ ಸಹಯೋಗ ನೀಡಿದ್ದರು.

ತಂಡಗಳ ರಚನೆ: ಕೋವಿಡ್‌-19 ವೈರಸ್‌ನ ರೋಗಕಾರಕ ಅಂಶಗಳು ಹಾಗೂ ಅದರ ನಿರ್ವಹಣೆ ಕುರಿತು ಕುರಿತು ಸಂಶೋಧನೆ ನಡೆಸಲು ಭಾರತ ಹಾಗೂ ಅಮೆರಿಕದ ಸಂಶೋಧಕರನ್ನು ಒಳಗೊಂಡ ಎಂಟು ದ್ವಿಪಕ್ಷೀಯ ತಂಡಗಳನ್ನು ರಚಿಸಲಾಗಿದೆ. ಇಂಡೋ-­ಯುಎಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಾಜಿ ಫೋರಂ ಈ ಸಂಶೋಧಕರ ತಂಡಗಳನ್ನು ಆಯ್ಕೆ ಮಾಡಿದೆ. ಆ್ಯಂಟಿವೈರಲ್‌ ಕೋಟಿಂಗ್‌, ಇಮ್ಯುನ್‌ ಮಾಡ್ಯು­ಲೇಷನ್‌, ವ್ಯರ್ಥ ನೀರಿನಲ್ಲಿಸಾರ್ಸ್‌ ಸಿಒವಿ-02ನ ಟ್ರ್ಯಾಕಿಂಗ್‌, ರೋಗ ಪತ್ತೆ ವ್ಯವಸ್ಥೆ, ರಿವರ್ಸ್‌ ಜೆನೆಟಿಕ್ಸ್‌ ಸ್ಟ್ರಾಟಜೀಸ್‌ ಹಾಗೂ ಡ್ರಗ್‌ ರೀಪರ್ಪಸಿಂಗ್‌ ಕುರಿತು ಸಂಶೋಧನೆ ನಡೆಯಲಿದೆ. ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಮತ್ತು ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್ಸ್‌ ಈ ಸಂಶೋಧನೆಗೆ ನೆರವು ನೀಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ