ಆ್ಯಪ್ನಗರ

ಕೊರೊನಾ: ಗುಜರಾತ್‌ನಲ್ಲಿ ಮೊದಲ ಬಲಿ, ದೇಶದಲ್ಲಿ 7ಕ್ಕೇರಿದ ಸಾವಿನ ಸಂಖ್ಯೆ!

ಕೊರೊನಾ ಸೋಂಕಿಗೆ ಭಾರತದಲ್ಲಿ ಇದುವರೆಗೆಗೆ 7 ಬಲಿಯಾಗಿವೆ. ಇದೀಗ ಗುಜರಾತ್‌ ಕೊರೊನಾ ವೈರಸ್‌ನಿಂದ 67 ವರ್ಷ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇವರು ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

Vijaya Karnataka Web 22 Mar 2020, 4:31 pm
ಹೊಸದಿಲ್ಲಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕಿಗೆ ಭಾರತದಲ್ಲಿ ಇದುವರೆಗೆಗೆ 7 ಬಲಿಯಾಗಿವೆ. ಇದೀಗ ಗುಜರಾತ್‌ ಕೊರೊನಾ ವೈರಸ್‌ನಿಂದ 67 ವರ್ಷ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
Vijaya Karnataka Web Coronavirus 7


ಗುಜರಾತಿನ ಸೂರತ್ ಮೂಲದ 67 ವರ್ಷದ ವೃದ್ಧ ಕರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಭಾನುವಾರ ಒಂದೇ ದಿನದಲ್ಲಿ ಸಾವಿಗೀಡಾದ ಮೂರನೇ ಪ್ರಕರಣ ಇದಾಗಿದೆ. ಭಾನುವಾರ ಬೆಳಗ್ಗೆಯಷ್ಟೇ 63 ವರ್ಷದ ಮುಬಯಿ ಮಹಿಳೆ ಸಾವಿಗೀಡಾಗಿದ್ದರು. ಮಧ್ಯಾಹ್ನ ಬಿಹಾರ ರಾಜಧಾನಿ ಪಟನಾದಲ್ಲಿ 38 ವರ್ಷದ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದರು.

ಕೊರೊನಾ ಪರೀಕ್ಷೆಗೆ ₹4,500 ಶುಲ್ಕ: ಖಾಸಗಿ ಲ್ಯಾಬ್‌ಗಳಿಗೆ ಕೇಂದ್ರದ ಖಡಕ್‌ ಮಾರ್ಗಸೂಚಿ!

ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್‌ ಮಹಾಮಾರಿ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ ಇಂದು ಭಾನುವಾರ (ಮಾ.22) ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಒಂದು ದಿನ ಜನಸಂಪರ್ಕ ತಡೆಯುವ ಮೂಲಕ ವೈರಸ್‌ ಹರಡುವಿಕೆ ತಡೆಯುವುದು ಜನತಾ ಕರ್ಫ್ಯೂ ಉದ್ದೇಶವಾಗಿದ್ದು, ಪ್ರಧಾನ ಮಂತ್ರಿಯ ಕರೆಗೆ ಇಡೀ ದೇಶವೇ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಕೊರೋನಾ ಶಂಕಿತರನ್ನು ಆಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲು ಸಾಧ್ಯವಾಗದ ಕಾರಣ ಅವರನ್ನು ಮನೆಯಲ್ಲೇ ಇರಿಸಿ, 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಮನೆಯಲ್ಲೇ ಸ್ವನಿರ್ಬಂಧಕ್ಕೆ ಆದೇಶಿಸಲಾಗಿರುವ ಕೊರೋನಾ ಶಂಕಿತರ ಕೈ ಮೇಲೆ ಕ್ವಾರಂಟೈನ್ ಸ್ಟಾಂಪ್ ಹಾಕಲು ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ-ಜನತಾ ಕರ್ಫ್ಯೂ ಲೈವ್ ಅಪ್ಡೇಟ್ಸ್: ದೇಶದಲ್ಲಿ 324ಕ್ಕೆ ಏರಿದ ಸೋಂಕಿತರು!

ಇದುವರೆಗೆ ಬಲಿಯಾದವರ ಮಾಹಿತಿ
  • ದೆಹಲಿ- 1
  • ಕರ್ನಾಟಕ-1
  • ಮಹಾರಾಷ್ಟ್ರ- 2
  • ಪಂಜಾಬ್‌ - 1
  • ಗುಜರಾತ್ - 1
  • ಬಿಹಾರ್- 1

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ