ಆ್ಯಪ್ನಗರ

ಪುರಿ ಜಗನ್ನಾಥ ರಥಯಾತ್ರೆಗೆ ಬ್ರೇಕ್‌; ಅವಕಾಶ ನೀಡಿದರೆ ದೇವರು ಕ್ಷಮಿಸಲ್ಲ ಎಂದ ಸುಪ್ರೀಂ

ಕೊರೊನಾ ವೈರಸ್‌ ಆತಂಕ ದೇಶಾದ್ಯಂತ ವ್ಯಾಪಿಸಿರುವ ಹಿನ್ನೆಲೆ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಒಡಿಶಾದ ಪುರಿಯಲ್ಲಿನ ಜಗನ್ನಾಥ ಸ್ವಾಮಿಯ ವಾರ್ಷಿಕ ರಥಯಾತ್ರೆಯನ್ನು ಈ ಬಾರಿ ನಡೆಸುವುದು ಬೇಡ ಎಂದು ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.

Agencies 18 Jun 2020, 11:41 pm
ಹೊಸದಿಲ್ಲಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಒಡಿಶಾದ ಪುರಿಯಲ್ಲಿನ ಜಗನ್ನಾಥ ಸ್ವಾಮಿಯ ವಾರ್ಷಿಕ ರಥಯಾತ್ರೆಯನ್ನು ಈ ಬಾರಿ ನಡೆಸುವುದು ಬೇಡ ಎಂದು ಸುಪ್ರೀಂಕೋರ್ಟ್‌ ಗುರುವಾರ ಆದೇಶಿಸಿದೆ.
Vijaya Karnataka Web Puri_ED
ಸಂಗ್ರಹ ಚಿತ್ರ


ಕೊರೊನಾ ಸಾಂಕ್ರಾಮಿಕದ ಆತಂಕ ದೇಶಾದ್ಯಂತ ವ್ಯಾಪಿಸಿರುವ ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರ ಜಮಾವಣೆ ಸಲ್ಲದು. ವೈರಾಣು ಹರಡುವಿಕೆ ತೀವ್ರವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಯಾತ್ರೆಗೆ ಅವಕಾಶ ನೀಡಿದರೆ ಜಗನ್ನಾಥ ಸ್ವಾಮಿ ಕೂಡ ನಮ್ಮನ್ನು ಕ್ಷಮಿಸಲ್ಲ ಎಂದು ಸಿಜೆಐ ಎಸ್‌.ಎ.ಬೊಬ್ಡೆ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ.

ಲಕ್ಷವಲ್ಲ ಕೇವಲ 10 ಸಾವಿರ ಮಂದಿ ಒಂದು ಕಡೆ ಸೇರಿದರೂ ಕೊರೊನಾ ಪ್ರಸರಣ ದೃಷ್ಟಿಯಿಂದ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಒಡಿಶಾ ವಿಕಾಶ್‌ ಪರಿಷದ್‌ ಎಂಬ ಎನ್‌ಜಿಒ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಜೂನ್‌ 23ರಿಂದ ನಡೆಯಬೇಕಿರುವ ವಾರ್ಷಿಕ ರಥಯಾತ್ರೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿತ್ತು.

ಪುರಿ ಜಗನ್ನಾಥ ದೇವಾಲಯದ ಈ ರಹಸ್ಯ ನಿಮಗೆ ಗೊತ್ತಾ?

ಎನ್‌ಜಿಒ ಸಲ್ಲಿಸಿದ ಅರ್ಜಿಯಲ್ಲಿ 10 ರಿಂದ 12 ದಿನಗಳು ನಡೆಯುವ ರಥಯಾತ್ರೆಗೆ ಸುಮಾರು 10 ಲಕ್ಷ ಮಂದಿ ಜಮಾವಣೆಯಾಗುತ್ತಾರೆ. ಇದು ಸಾಂಕ್ರಾಮಿಕ ಹರಡಲು ಸುಲಭ ವೇದಿಕೆಯಾಗಲಿದೆ. ಅಲ್ಲದೆ ಜೂನ್‌ 30ರವರೆಗೆ ಒಡಿಶಾ ಸರಕಾರ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿಲ್ಲ. ಹಾಗಾಗಿ ಜೂನ್‌ 23ರಿಂದ ನಡೆಯಬೇಕಿರುವ ವಾರ್ಷಿಕ ರಥಯಾತ್ರೆಯನ್ನು ಮುಂದೂಡಬೇಕು ಎಂದು ಸುಪ್ರೀಂಕ ಕೋರ್ಟ್‌ನ್ನು ಕೇಳಿಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ