ಆ್ಯಪ್ನಗರ

ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿ; ಆ.15ರೊಳಗೆ ಔಷಧಿ ಸಿಕ್ಕರೂ ಅಚ್ಚರಿಯಿಲ್ಲ

ಇಡೀ ಜಗತ್ತನ್ನು ಬೆಂಬಿಡದೇ ಕಾಡುತ್ತಿರುವ ಕೊರೊನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ಎಲ್ಲ ರಾಷ್ಟ್ರಗಳು ಪೈಪೋಟಿಗೆ ಬಿದ್ದಿದ್ದು. ಹಗಲಿರುಳು ಶ್ರಮಿಸುತ್ತಿವೆ. ಇದರಲ್ಲಿ ಭಾರತ ಮುಂಚೂಣಿಯಲ್ಲಿದ್ದು ಪ್ರಮುಖ ಪಾತ್ರ ವಹಿಸಲಿದೆ ಎಂದು ಐಸಿಎಂಆರ್‌ ಹೇಳಿದೆ.

Vijaya Karnataka Web 15 Jul 2020, 11:58 pm
ಹೊಸದಿಲ್ಲಿ: ಕೊರೊನಾ ವೈರಸ್‌ಗೆ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯುವಲ್ಲಿ ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳು ಪೈಪೋಟಿಗೆ ಬಿದ್ದಂತೆ ಹಗಲಿರುಳು ಶ್ರಮಿಸುತ್ತಿವೆ. ಬಹುತೇಕ ದೇಶಗಳು ತಮ್ಮಲ್ಲಿನ ಲಸಿಕೆಗಳು ಪ್ರಾಯೋಗಿಕ ಮಟ್ಟದಲ್ಲಿ ಅಂತಿಮ ಹಂತ ತಲುಪಿವೆ ಎಂದು ಹೇಳಿಕೊಂಡಿವೆ. ಈ ಲಸಿಕೆ ಅಭಿವೃದ್ಧಿ ಕಾರ್ಯದಲ್ಲಿ ಭಾರತವೂ ಮುಂಚೂಣಿಯಲ್ಲಿದ್ದು ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ.
Vijaya Karnataka Web coronavirus vaccine india has a big role to play projects are being fast tracked says icmr
ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿ; ಆ.15ರೊಳಗೆ ಔಷಧಿ ಸಿಕ್ಕರೂ ಅಚ್ಚರಿಯಿಲ್ಲ


ಆಗಸ್ಟ್‌ 15ರೊಳಗೆ ಲಸಿಕೆ ಲಭ್ಯವಾದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗಿದೆ. ಸದ್ಯ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ನ 'ಕೊವಾಕ್ಸಿನ್‌' ಹಾಗೂ ಅಹಮದಾಬಾದ್‌ ಮೂಲದ ಜಿಯೋಡಸ್‌ ಕಾಡಿಲಾ ಸಂಸ್ಥೆನ ಕೋವಿಡ್‌-19 ಲಸಿಕೆಗಳು ಪ್ರಿ ಕ್ಲಿನಿಕಲ್‌ ಟ್ರಯಲ್ಸ್‌ನಲ್ಲಿ ಉತ್ತಮ ಫಲಿತಾಂಶ ನೀಡಿವೆ. ಎಲ್ಲ ಬಗೆಯ ಕಾನೂನು ನಿಯಮಗಳಿಗೆ ಒಳಪಟ್ಟು ಹಂತ ಹಂತವಾಗಿ ಈ ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸಲು ಡ್ರಗ್ಸ್‌ ಕಂಟ್ರೊಲರ್‌ ಜನರಲ್‌ ಆಫ್‌ ಇಂಡಿಯಾ (ಡಿಜಿಸಿಐ) ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಈ ಲಸಿಕೆಗಳು ಭಾರತಕ್ಕೆ ವರದಾನವಾಗುವ ನಿರೀಕ್ಷೆ ಇದೆ.

ಭಾರತದಿಂದಲೇ ಬರಲಿದೆಯಾ ಮೊದಲ ಕೊರೊನಾ ಲಸಿಕೆ? ಆಗಸ್ಟ್‌ 15ಕ್ಕೆ ಮೋದಿ ಘೋಷಿಸುವಂತಾಗುತ್ತಾ?

ಇನ್ನು ಬ್ರಿಟನ್‌ನಲ್ಲಿ ಲಂಡನ್‌ ಇಂಪಿಯರಲ್‌ ಕಾಲೇಜ್‌ ಅಭಿವೃದ್ಧಿಪಡಿಸಿದ ಹಾಗೂ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆಗಳು ಬಹುತೇಕ ಅಂತಿಮ ಹಂತದಲ್ಲಿದ್ದು ವಿಶ್ವಾಸ ಮೂಡಿಸಿವೆ. ಚೀನಾದ ಸಿನೊವಾಕ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ಮೂರನೇ ಹಂತದಲ್ಲಿರುವ ಲಸಿಕೆಯನ್ನು ಬ್ರೆಜಿಲ್‌ನಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಇನ್ನು ಅಮೆರಿಕದ ಮಾಡೆರ್ನಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಯೂ ಈಗಾಗಲೇ 30 ಸಾವಿರ ಜನರ ಮೇಲೆ ಪ್ರಯೋಗಿಸಲು ಅಲ್ಲಿನ ಸರಕಾರದಿಂದ ಅನುಮತಿ ಪಡೆದುಕೊಂಡಿದೆ.

ಆಗಸ್ಟ್‌ 15ರೊಳಗೆ ಬರಲಿದೆ ದೇಶೀಯ ಕೊರೊನಾ ವ್ಯಾಕ್ಸಿನ್‌!

ನ್ಯುಮೋನಿಯಾಗೆ ಲಸಿಕೆ
ನ್ಯುಮೋನಿಯಾಗೆ ದೇಶದ ಮೊದಲ ಸ್ವದೇಶಿ ನಿರ್ಮಿತ ಲಸಿಕೆ ಸಿದ್ಧವಾಗಿದ್ದು, ಅದರ ಪ್ರಯೋಗಕ್ಕೆ ಡಿಜಿಸಿಐ ಒಪ್ಪಿಗೆ ನೀಡಿದೆ. ನ್ಯೂಮೋನಿಯಾದಿಂದ ಬಳಲುವವರಿಗೆ ಅದರಲ್ಲೂ ಮಕ್ಕಳಿಗೆ ಇದೊಂದು ವರದಾನವಾಗಲಿದೆ. ಪುಣೆ ಮೂಲದ ಸೆರಮ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ ನ್ಯುಮೋನಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಮೂರು ಹಂತಗಳ ಕ್ರಿನಿಕಲ್‌ ಟ್ರಯಲ್‌ನಲ್ಲಿ ಇದು ಯಶಸ್ವಿಯಾಗಿದೆ.

ಆಗಸ್ಟ್‌ಗೆ‌ ಸಿಗಲ್ಲ ದೇಸಿ ಲಸಿಕೆ, ಕೊರೊನಾಗೆ ಔಷಧ ಸಿಗುವುದು ಮುಂದಿನ ವರ್ಷ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ