ಆ್ಯಪ್ನಗರ

ಗುಡ್‌ನ್ಯೂಸ್‌: ಜನವರಿ-ಫೆಬ್ರವರಿಗೆ ಭಾರತದಲ್ಲಿ ಲಭ್ಯವಾಗಲಿದೆ ಆಕ್ಸ್‌ಫರ್ಡ್‌ ಕೊರೊನಾ ಲಸಿಕೆ, 1 ಡೋಸ್‌ನ‌ ದರವೆಷ್ಟು?

2021ರ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಭಾರತದಲ್ಲಿ ಆಕ್ಸ್‌ಫರ್ಡ್‌ ಯುನಿವರ್ಸಿಟಿ ತಯಾರಿಸಿದ ಕೊರೊನಾ ಲಸಿಕೆ ಲಭ್ಯವಾಗಲಿದೆ. ಸರಿ ಸರುಮಾರು 25-30 ಕೋಟಿ ಜನರಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಮೊದಲಿಗೆ ಫ್ರಂಟ್‌ಲೈನ್‌ ವರ್ಕರ್ಸ್‌ಗಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ.

Vijaya Karnataka Web 23 Nov 2020, 12:57 pm
ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ 2021ರ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಭಾರತದಲ್ಲಿ ಆಕ್ಸ್‌ಫರ್ಡ್‌ ಯುನಿವರ್ಸಿಟಿ ತಯಾರಿಸಿದ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಸಂಭಾವ್ಯ ಲಸಿಕೆ ಖರೀದಿ ಸಂಬಂಧ ಕೇಂದ್ರ ಸರಕಾರ ಇದೀಗ ಲಸಿಕೆ ತಯಾರಕರೊಂದಿಗಿನ ಅಂತಿಮ ಒಪ್ಪಂದ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.
Vijaya Karnataka Web corona vaccine
Picture used for representational purpose only


ಒಂದು ವೇಳೆ ಬ್ರಿಟನ್‌ನಿಂದ ಒಪ್ಪಿಗೆ ಸಿಕ್ಕರೆ ನಂತರ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭಾರತೀಯ ನಿಯಂತ್ರಕ ಸಂಸ್ಥೆಯಿಂದ ಒಪ್ಪಿಗೆ ಸಿಕ್ಕರೆ ಜನವರಿ ಅಥವಾ ಫೆಬ್ರವರಿಗೆ ಆಕ್ಸ್‌ಫರ್ಡ್‌-ಆಸ್ಟ್ರಾಝೆನಿಕಾ ಕೊರೊನಾ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ. ಇನ್ನು ಆಕ್ಸ್‌ಫರ್ಡ್‌-ಆಸ್ಟ್ರಾಝೆನಿಕಾ ಕೊರೊನಾ ಲಸಿಕೆ ಭಾರತಕ್ಕೆ ಎಂಆರ್‌ಪಿ ದರಕ್ಕಿಂತ ಶೇ. 50ರಷ್ಟು ಕಡಿಮೆಗೆ ದೊರಕಲಿದೆ. ಅಂದರೆ ಸರಿ ಸುಮಾರು ಒಂದು ಡೋಸ್‌ಗೆ 500-600 ರೂ. ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿಯೊಳಗೆ ಲಸಿಕೆ ಬಂದರೆ, ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ದಾದಿಯರು,ಪೌರ ಕಾರ್ಮಿಕರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆಳಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಇನ್ನು 25-30 ಕೋಟಿ ಜನರಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಈ ಜನಸಂಖ್ಯೆಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಇನ್ನು ಈ ಪೈಕಿ 70 ಲಕ್ಷ ಆರೋಗ್ಯ ವೃತ್ತಿಪರರು ಮತ್ತು 2 ಕೋಟಿಗೂ ಹೆಚ್ಚು ಫ್ರಂಟ್‌ಲೈನ್‌ ವರ್ಕರ್ಸ್‌ಗಳಿಗೆ ಜನವರಿ ಅಂತ್ಯದ ವೇಳೆಗೆ ಲಸಿಕೆ ನೀಡಲಾಗುತ್ತದೆ.

ಚಳಿಗಾಲದಲ್ಲಿ ಕೊರೊನಾರ್ಭಟ ಹೆಚ್ಚಾಗುವ ಆತಂಕ: ಎಲ್ಲ ರಾಜ್ಯಗಳಿಂದ ವರದಿ ಕೇಳಿದ ಸುಪ್ರೀಂ..!

ಲಸಿಕೆ ಯಶಸ್ಸಿಗೆ ಪ್ರಯತ್ನ!
ಸೇರಮ್‌ ಇನ್ಸ್ಟಿಟ್ಯೂಟ್ ಕೋವಿಶೀಲ್ಡ್‌ ಎಂಬ ಕೊರೊನಾ ಲಸಿಕೆಯ 3 ನೇ ಹಂತದ ಪ್ರಯೋಗಗಳನ್ನು ಬಹುತೇಕ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ಇದರ ದತ್ತಾಂಶದ ಬಗ್ಗೆ ಅವಲೋಕನ ನಡೆಸಲಿದೆ. ಇನ್ನೊಂದು ಕಡೆ ಭಾರತ್ ಬಯೋಟೆಕ್ ತನ್ನ ಲಸಿಕೆ ಕೋವಾಕ್ಸಿನ್ ಯಶಸ್ಸಿನ ಹಾದಿಯಲ್ಲಿದೆ. ಕೋವಾಕ್ಸಿನ್ ಭಾರತದ ಮೊದಲ ದೇಸಿ ಕೊರೊನಾ ಲಸಿಕೆಯಾಗಿದ್ದು, ಐಸಿಎಂಆರ್ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿದೆ.

ಕೋವಾಕ್ಸಿನ್ ದೇಶಾದ್ಯಂತ 3 ನೇ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ. ಲಸಿಕೆ ತನ್ನ ಅಂತಿಮ ಪ್ರಯೋಗಗಳನ್ನು ಒಂದು ಅಥವಾ ಎರಡು ತಿಂಗಳಲ್ಲಿ ಪೂರ್ಣಗೊಳಿಸಬಹುದು ಎಂದು ಇತ್ತೀಚೆಗೆ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ತಿಳಿಸಿದ್ದರು. ಎಲ್ಲಾದರೂ ದೇಸಿ ಲಸಿಕೆ ಅದರೊಳಗೆ ಯಶಸ್ವಿಯಾದರೆ ಇದನ್ನು ಫ್ರಂಟ್‌ಲೈನ್‌ ವರ್ಕರ್‌ಗಳಿಗೆ ನೀಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ