ಆ್ಯಪ್ನಗರ

ಅಟಲ್‌ಗೆ ಶ್ರದ್ಧಾಂಜಲಿ ನಿರಾಕರಣೆ: ಕಾರ್ಪೊರೇಟರ್‌ಗೆ ಜೈಲು

ಆ.16ರಂದು ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂಬ ನಿರ್ಣಯವನ್ನು ವಿರೋಧಿಸಿದ್ದ ಮಹಾರಾಷ್ಟ್ರದ ಔರಂಗಾಬಾದ್‌ನ ಕಾರ್ಪೊರೇಟರ್‌ ಗೆ ಒಂದು ವರ್ಷ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ.

Vijaya Karnataka 26 Aug 2018, 9:58 am
ಮುಂಬಯಿ: ಆ.16ರಂದು ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂಬ ನಿರ್ಣಯವನ್ನು ವಿರೋಧಿಸಿದ್ದ ಮಹಾರಾಷ್ಟ್ರದ ಔರಂಗಾಬಾದ್‌ನ ಕಾರ್ಪೊರೇಟರ್‌ ಗೆ ಒಂದು ವರ್ಷ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ.
Vijaya Karnataka Web corporator jail


ಆ.17ರಂದು ಪಾಲಿಕೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲು 'ಎಐಎಂಐಎಂ' ಪಕ್ಷದ ಕಾರ್ಪೊರೇಟರ್‌ ಸಯ್ಯದ್‌ ರಶೀದ್‌ ನಿರಾಕರಿಸಿದ್ದರು. ಅಲ್ಲದೆ ಈ ಕುರಿತ ನಿರ್ಣಯಕ್ಕೆ ವಿರೋಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಪೊರೇಟರ್‌ಗಳು ರಶೀದ್‌ ಅವರನ್ನು ಥಳಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ರಶೀದ್‌ ವಿರುದ್ಧ ಗಲಭೆ, ಕೋಮು ಸೌಹಾರ್ದಕ್ಕೆ ಧಕ್ಕೆ ಮತ್ತು ಮಹಾರಾಷ್ಟ್ರದ ಕಠಿಣ 'ಎಂಪಿಡಿಎ' ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಒಂದು ವರ್ಷ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಿಜೆಪಿ ಕಾರ್ಪೊರೇಟರ್‌ಗಳ ವಿರುದ್ಧವೂ ಗಲಭೆ ಪ್ರಕರಣ ದಾಖಲಿಸಲಾಗಿದೆಯಾದರೂ, ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ, ಕಠಿಣ 'ಎಂಪಿಡಿಎ' ಪ್ರಕರಣದ ಹಿನ್ನೆಲೆಯಲ್ಲಿ ರಶೀದ್‌ಗೆ ಜಾಮೀನು ದೊರೆತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ