ಆ್ಯಪ್ನಗರ

ಭಾರತೀಯರ ರಕ್ತದಲ್ಲೇ ಭ್ರಷ್ಟಾಚಾರ: ಬಿಜೆಪಿ ಸಚಿವ

ನೂರು ಕೋಟಿ ಭಾರತೀಯರ ರಕ್ತದಲ್ಲೇ ಭ್ರಷ್ಟಾಚಾರ ಬೇರು ಬಿಟ್ಟಿದೆ ಎಂದು ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್‌ ರಾಜಭಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಸಿಎಂ ಆದಿತ್ಯನಾಥ್‌ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕತ್ವದ ವಿರುದ್ಧವೂ ಅವರು ಕಿಡಿಕಾರಿದ್ದಾರೆ. ಇದರೊಂದಿಗೆ ಸಿಎಂ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಮತ್ತೊಮ್ಮೆ ಮುಜುಗರಕ್ಕೆ ಸಿಲುಕಿದೆ.

Vijaya Karnataka 20 May 2018, 9:01 am
ಲಖನೌ: ನೂರು ಕೋಟಿ ಭಾರತೀಯರ ರಕ್ತದಲ್ಲೇ ಭ್ರಷ್ಟಾಚಾರ ಬೇರು ಬಿಟ್ಟಿದೆ ಎಂದು ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್‌ ರಾಜಭಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಸಿಎಂ ಆದಿತ್ಯನಾಥ್‌ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕತ್ವದ ವಿರುದ್ಧವೂ ಅವರು ಕಿಡಿಕಾರಿದ್ದಾರೆ. ಇದರೊಂದಿಗೆ ಸಿಎಂ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಮತ್ತೊಮ್ಮೆ ಮುಜುಗರಕ್ಕೆ ಸಿಲುಕಿದೆ.
Vijaya Karnataka Web Rajbhar


ಹಮೀಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ''ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ; ಏಕೆಂದರೆ ಇದು ದೇಶಾದ್ಯಂತ ಅತಿಯಾಗಿ ಹರಡಿಕೊಂಡಿರುವ ಪಿಡುಗಾಗಿದೆ. ಭ್ರಷ್ಟಾಚಾರದ ಎನ್ನವುದು ಎಷ್ಟು ಆಳವಾಗಿದೆ ಎಂದರೆ ಅದು ನೂರು ಕೋಟಿ ಭಾರತೀಯರ ರಕ್ತದಲ್ಲೇ ಸೇರಿಬಿಟ್ಟಿದೆ,'' ಎಂದರು.

ಪ್ರಧಾನಿ ಮೋದಿ ಅವರ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಈಚೆಗೆ ಮೇಲ್ಸೇತುವೆ ಕುಸಿದು 12ಕ್ಕೂ ಹೆಚ್ಚು ಜೀವಗಳು ಬಲಿಯಾದುದನ್ನು ಉಲ್ಲೇಖಿಸಿದ ಅವರು, ''ಸಮಾಜದಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸುದೀರ್ಘ ಹಾದಿ ಸಾಗಬೇಕಿದೆ,'' ಎಂದು ಹೇಳಿದರು.

ಸಿಎಂ, ಅಮಿತ್‌ ಶಾ ವಿರುದ್ಧ ಆರೋಪ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಎಸ್ಸಿ/ಎಸ್ಟಿ ಸಮುದಾಯದ ಕಾನೂನುಸಮ್ಮತ ಬೇಡಿಕೆಗಳತ್ತ ಯಾವುದೇ ಗಮನ ನೀಡುತ್ತಿಲ್ಲ ಎಂದು ರಾಜಭಾರ್‌ ಆರೋಪಿಸಿದರು.

ಇದೇ ಸಚಿವರು ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದರು.

ಅಗ್ಗದ ಪ್ರಚಾರ ಪಡೆಯುವ ಉದ್ದೇಶದಿಂದ ರಾಜಭಾರ್‌ ಅವರು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ