ಆ್ಯಪ್ನಗರ

ಯುವಕ-ಯುವತಿಯರ ‘ಅಸಭ್ಯ ವರ್ತನೆ’ ಅತ್ಯಾಚಾರಕ್ಕೆ ಕಾರಣ: ಸಾಕ್ಷಿಮಹಾರಾಜ

ಯುವಕ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಅಸಭ್ಯ ವರ್ತನೆಯೇ ಅತ್ಯಾಚಾರಕ್ಕೆ ಪ್ರೇರಣೆಯಾಗಿದ್ದು, ಇಂತಹ ಕೃತ್ಯದಲ್ಲಿ ತೊಡಗಿದವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಬಿಜೆಪಿ ಸಂಸದ ಸಾಕ್ಷಿಮಹಾರಾಜ ಹೇಳಿದ್ದಾರೆ.

Vijaya Karnataka 21 Sep 2017, 9:24 am

ಹೊಸದಿಲ್ಲಿ: ಯುವಕ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಅಸಭ್ಯ ವರ್ತನೆಯೇ ಅತ್ಯಾಚಾರಕ್ಕೆ ಪ್ರೇರಣೆಯಾಗಿದ್ದು, ಇಂತಹ ಕೃತ್ಯದಲ್ಲಿ ತೊಡಗಿದವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಬಿಜೆಪಿ ಸಂಸದ ಸಾಕ್ಷಿಮಹಾರಾಜ ಹೇಳಿದ್ದಾರೆ.

''ಯುವ ಜೋಡಿಗಳು ಬೈಕ್‌ನಲ್ಲಿ ಹೋಗುವಾಗ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಹುಡುಗ ಹುಡುಗಿಗೆ, ಹುಡುಗಿ ಹುಡುಗನಿಗೆ ತಿನ್ನಿಸುತ್ತಾರೆ. ಕಾರುಗಳಲ್ಲಿ, ಪಾರ್ಕ್‌ಗಳಲ್ಲಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುತ್ತಾರೆ. ಎಲ್ಲರೂ ಅವರನ್ನು ನಿರ್ಲಕ್ಷಿಸುತ್ತಾರೆ. ಆದರೆ ಒಮ್ಮೆ ಅತ್ಯಾಚಾರ ನಡೆದರೆ ಕ್ರಮಕ್ಕಾಗಿ ಪೊಲೀಸರ ಮೇಲೆ ಜನರು ಒತ್ತಡ ಹೇರುತ್ತಾರೆ. ಆದ್ದರಿಂದ ಸರಿಯಾದ ಕ್ರಮವೆಂದರೆ ಜೋಡಿಗಳ ವಿರುದ್ಧ ಕ್ರಮ ಕೈಗೊಂಡು ಜೈಲಿಗಟ್ಟುವುದು,'' ಎಂದು ಮಹಾರಾಜ್‌ ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದ ಮುಖಂಡ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ತಪ್ಪಿತಸ್ಥ ಎಂದು ಸಾಬೀತಾದ ಸಂದರ್ಭ ಬಾಬಾನನ್ನು ಸಾಕ್ಷಿ ಮಹಾರಾಜ್‌ ಬೆಂಬಲಿಸಿದ್ದರು. ಈ ಕುರಿತು ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಗುರ್ಮೀತ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ