ಆ್ಯಪ್ನಗರ

ನ.16ರಿಂದ ಭಕ್ತರಿಗೆ ತೆರೆಯಲಿದೆ ಶಬರಿಮಲೆ, ಕೊರೊನಾ ನೆಗಟಿವ್‌ ಪ್ರಮಾಣ ಪತ್ರ ಇದ್ದರೆ ಮಾತ್ರ ದರ್ಶನ!

ನವೆಂಬರ್ 16 ರಿಂದ ಎರಡು ತಿಂಗಳು ಕಾಲ ವಾರ್ಷಿಕ ಪೂಜೆ ಹಿನ್ನೆಲೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಈ ಹಿನ್ನೆಲೆ ಭಕ್ತರಿಗೂ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ. ಆದರೆ ಈ ಬಾರಿ ದೇವರ ದರ್ಶನ ಅಥವಾ ದೇವಾಲಯ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ಸರ್ಟಿಫಿಕೇಟ್‌ ಅಗತ್ಯ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ.

Agencies 11 Aug 2020, 12:20 pm
ತಿರುವನಂತಪುರಂ: ಕೊರೊನಾ ಕರಿಛಾಯೆ ಈ ಬಾರಿ ನಡೆಯುವ ಎಲ್ಲಾ ಹಬ್ಬಗಳ ಮೇಲೂ ಮೂಡಿದೆ. ಈ ಪೈಕಿ ದಕ್ಷಿಣ ಭಾರತದ ಪ್ರಸಿದ್ದ ದೇವಾಲಯ ಶಮರಿಮಲೆಗೂ ಕೊರೊನಾ ಬಿಸಿ ತಟ್ಟಿದ್ದು, ದೇವರ ದರ್ಶನಕ್ಕೆ ಕೊರೊನಾ ನೆಗೆಟಿವ್‌ ಪ್ರಮಾಣ ಪತ್ರ ಅಗತ್ಯ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Vijaya Karnataka Web sabarimala


ನವೆಂಬರ್ 16 ರಿಂದ ಎರಡು ತಿಂಗಳು ಕಾಲ ವಾರ್ಷಿಕ ಪೂಜೆ ಹಿನ್ನೆಲೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಈ ಹಿನ್ನೆಲೆ ಭಕ್ತರಿಗೂ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ. ಆದರೆ ಈ ಬಾರಿ ದೇವರ ದರ್ಶನ ಅಥವಾ ದೇವಾಲಯ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ಸರ್ಟಿಫಿಕೇಟ್‌ ಅಗತ್ಯ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ.

ಇನ್ನು ದೇವಸ್ಥಾನದ ಒಳಗಡೆಯು ವರ್ಚುವಲ್‌ ಕ್ಯೂ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊರೊನಾ ಸಂಬಂಧದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇನ್ನು ದೇವಾಲಯ ತೆರೆಯುವ ಮುನ್ನ ಪೂರ್ವಾನುಭಾವಿ ಸಭೆ ಆಯೋಜಿಸಲಾಗಿದ್ದು ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ದೇವಸ್ವಂ ಮಂಡಳಿ ಚರ್ಚಿಸಿದೆ.

ಚಳಿಗಾಲ ಎದುರಿಸಿ ಗಡಿ ಕಾಯಲಿದ್ದೇವೆ: ಸಂಸದೀಯ ಸಮಿತಿಗೆ ಸೇನೆಯ ಭರವಸೆ!

ಕೊರೊನಾ ನಿಯಂತ್ರಣ ಹಿನ್ನೆಲೆ ಈ ಬಾರಿ ನಿಯಮಿತ ಭಕ್ತರಿಗೆ ಮಾತ್ರ ಅವಕಾಶ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನೆಗೆಟಿವ್‌ ಪ್ರಮಾಣ ಪತ್ರ ಇದ್ದವರು ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಯಾವುದೇ ನೂಕುನುಗ್ಗಲು ಇಲ್ಲದೆ ಸನ್ನಿದಾನದಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ ಎಂದು ಅವರು ತಿಳಿಸಿದ್ದಾರೆ.

ನವೆಂಬರ್‌ ತಿಂಗಳಲ್ಲಿ ಅಯ್ಯಪ್ಪ ಸ್ವಾಮಿ ಎರಡು ತಿಂಗಳು ವಿಶೇಷ ಪೂಜೆ ಸಲ್ಲಿಕೆಯಾಗುತ್ತೆ. ಈ ಸಂದರ್ಭ ಕೂಡ ಕಪ್ಪು ಬಟ್ಟೆ, ಮಾಲೆ ಧರಿಸಿ ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಈ ಬಾರಿ ಕೊರೊನಾದಿಂದಾಗಿ ಭಕ್ತರ ಸಂಖ್ಯೆ ಕೊಂಚ ತಗ್ಗಬಹುದಾದ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ